ಸಚಿವ ರಾಜಣ್ಣ ಒಬ್ಬ ಬಫೂನ್: ಸಂಸದ ಮುನಿಸ್ವಾಮಿ

By Kannadaprabha News  |  First Published Nov 16, 2023, 10:37 AM IST

ವಿಜಯೇಂದ್ರ ಅವರನ್ನು ಎಳಸು ಎಂದು ಹೇಳಿರುವ ಸಚಿವ ರಾಜಣ್ಣ ಬಫೂನ್, ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ ಅವರಿವರು ಏನು ಹೇಳಿಕೊಟ್ರೆ ಅದು ಮಾತನಾಡುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.


ಕೋಲಾರ (ನ.16): ವಿಜಯೇಂದ್ರ ಅವರನ್ನು ಎಳಸು ಎಂದು ಹೇಳಿರುವ ಸಚಿವ ರಾಜಣ್ಣ ಬಫೂನ್, ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ ಅವರಿವರು ಏನು ಹೇಳಿಕೊಟ್ರೆ ಅದು ಮಾತನಾಡುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು. ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ.ವಿಜಯೇಂದ್ರ ಕುರುಡುಮಲೆ ಗಣಪನ ಸನ್ನಿಧಿಗೆ ತೆರಳುವ ಮಾರ್ಗದಲ್ಲಿ ಅವರನ್ನು ಕೋಲಾರ ರಾಮಸಂದ್ರ ಗಡಿಯಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಸ್ವಾಗತಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಿಜಯೇಂದ್ರ ಅವರನ್ನು ಎಳಸು ಎಂದು ಹೇಳಿರುವ ಸಹಕಾರ ಸಚಿವ ರಾಜಣ್ಣರಿಗೆ ವಯಸ್ಸಾಗಿದೆ, ಅರಳೋ ಮರಳು ಎಂಬಂತೆ ಮಾತನಾಡುತ್ತಾರೆ ಅಂತಹವರ ಮಾತಿಗೆ ಬೆಲೆ ಇಲ್ಲ ಎಂದು ಟೀಕಿಸಿ, ಒಂದು ಬಾರಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಅಂತಾರೆ ಏನಾದ್ರು ಹೇಳಿಕೊಟ್ಟರೆ ಪರಮೇಶ್ವರ್ ಸಿಎಂ ಆಗಬೇಕು ಎನ್ನುತ್ತಾರೆ, ಒಂದು ಸಾರಿ ಇದ್ದಂತೆ ಅವರು ಮನಸ್ಥಿತಿ ಮತ್ತೊಂದು ಬಾರಿ ಇರದು’ ಎಂದು ವ್ಯಂಗ್ಯವಾಡಿದರು.

Tap to resize

Latest Videos

ಬೆಂಗಳೂರಲ್ಲಿ ಶೀಘ್ರ 1 ಲಕ್ಷ ಜನರ ಸೇರಿಸಿ ರ್‍ಯಾಲಿ: ಬಿಎಸ್‌ವೈ ಹೇಳಿದ್ದೇನು?

ಒಂದು ಬಾರಿ ಶಿವಕುಮಾರ್ ಪರ ಮಾತನಾಡಿದರೆ ಮತ್ತೊಂದು ಬಾರಿ ಶ್ಯಾಮನೂರು ಶಿವ ಶಂಕರಪ್ಪ ಪರವಾಗಿ ಮಾತನಾಡುತ್ತಾರೆ. ಅವರಿಗೆ ವಯಸ್ಸಾಗಿದೆ, ಮೊಮ್ಮಕಳ ಜೊತೆಗೆ ಆಟವಾಡಿಕೊಂಡಿರಬೇಕಾದವರು ಸಚಿವರಾಗಿದ್ದಾರೆ, ತಮಗೆ ವಯಸಾಗಿರೋದ್ದರಿಂದ ವಿಜಯೇಂದ್ರ ಯುವಕರು ಎಂಬುದನ್ನು ಸಹಿಸಲು ಆಗುತ್ತಿಲ್ಲ ಎಂದರು.

ಕಾಂಗ್ರೆಸ್‌ನ ಎಷ್ಟೋ ಜನ ಶಾಸಕರು ಬಿಜೆಪಿ ಜೊತೆಗೆ ಬರಲು ಸಿದ್ದರಿದ್ದಾರೆ, ಕುರುಡುಮಲೆ ವಿನಾಯಕನ ಅನುಗ್ರಹದಿಂದ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಬೀಳಲಿದೆ ಎಂದು ಭವಿಷ್ಯ ನುಡಿದರು. ರಾಜ್ಯ ಮಾತ್ರವಲ್ಲ ದೇಶದಲ್ಲಿ ಮೋದಿ ಗೆಲುವನ್ನು ವಿಫಲಗೊಳಿಸಲು ಸಾಧ್ಯವಿಲ್ಲ ಎಂದ ಅವರು, ಗ್ಯಾರಂಟಿ ಜಾರಿಯಲ್ಲೂ ವಿಫಲವಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ಅಭಿವೃದ್ದಿಯನ್ನು ಕೈಬಿಟ್ಟಿದ್ದು ಜನ ಛೀಮಾರಿ ಹಾಕುತ್ತಿದ್ದಾರೆ ಎಂದರು.

ಭ್ರಷ್ಟತೆಯಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಅತಿ ಬೇಗ ಹೋಗಬೇಕು ಇಲ್ಲವಾದಲ್ಲಿ ರಾಜ್ಯಕ್ಕೆ ಮಾರಕ ಎಂದ ಅವರು, ಲೋಕಸಭಾ ಚುನಾವಣೆಯ ಮೂಲಕ ಜನ ಪಾಠ ಕಲಿಸಲಿದ್ದಾರೆ ಎಂದರು. ಸಂಸದ ಪಿ.ಸಿ.ಮೋಹನ್, ಡಿಎಸ್ ವೀರಯ್ಯ, ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ತಮ್ಮೇಗೌಡ, ವೈ.ಸಂಪಂಗಿ, ಚಿಂತಾಮಣಿ ಗೋಪಿ, ಸೀಕಲ್ ರಾಮಚಂದ್ರೇಗೌಡ, ಶಿಢ್ಲಘಟ್ಟ ರಾಜಣ್ಣ, ಮುಳಬಾಗಿಲು ಸೀಗೆಹಳ್ಳಿ ಸುಂದರ್, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಇದ್ದರು.

ಇನ್ನೆಂದೂ ಇಂಥ ಘಟನೆ ಆಗದಂತೆ ನೋಡಿಕೊಳ್ಳುವೆ: ಪೊಲೀಸ್ ವಿಚಾರಣೆ ವೇಳೆ ನಟ ದರ್ಶನ್ ಮಾತು

ಮೋದಿ ಪ್ರಧಾನಿಯಾಗಿದ್ದರೆ ಮಾತ್ರ ದೇಶ ಸುಭದ್ರ: ದೇಶದಲ್ಲಿ ಮೋದಿ ಪ್ರಧಾನಿಯಾಗಿದ್ದರೆ ಮಾತ್ರ ಭಾರತದ ಭವಿಷ್ಯ ಸುಭದ್ರ ಎಂಬ ಭಾವನೆ ಯುವಕರಲ್ಲಿ ಗಟ್ಟಿಯಾಗಿದೆ, ಕಾಂಗ್ರೆಸ್‌ನ ಸುಳ್ಳು ಗ್ಯಾರೆಂಟಿಗಳು, ಓಲೈಕೆ ರಾಜಕಾರಣದಿಂದ ದೇಶ ಅಧೋಗತಿಗೆ ಹೋದೀತು ಎಂಬ ಆತಂಕವೂ ಯುವಕರು, ದೇಶದ ನಾಗರಿಕರಲ್ಲಿದೆ ಎಂದು ಮುನಿಸ್ವಾಮಿ ಹೇಳಿದರು.

click me!