ರಾಜ್ಯ ಸರ್ಕಾರದ ಆಯುಷ್ಯ ಮೂರೇ ತಿಂಗಳು: ಸಂಸದ ಮುನಿಸ್ವಾಮಿ ಭವಿಷ್ಯ

By Kannadaprabha NewsFirst Published Dec 1, 2023, 12:56 PM IST
Highlights

ಅಭಿವೃದ್ದಿಗೆ ಹಣವಿಲ್ಲದೇ ತನ್ನ ಶಾಸಕರಿಂದಲೇ ತೀವ್ರ ವಿರೋಧ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಷ್ಯ ಇರುವುದು ಬರೀ ಮೂರು ತಿಂಗಳು ಅಷ್ಟೇ ಎಂದು ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದರು. 
 

ಕೋಲಾರ (ಡಿ.01): ಅಭಿವೃದ್ದಿಗೆ ಹಣವಿಲ್ಲದೇ ತನ್ನ ಶಾಸಕರಿಂದಲೇ ತೀವ್ರ ವಿರೋಧ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಷ್ಯ ಇರುವುದು ಬರೀ ಮೂರು ತಿಂಗಳು ಅಷ್ಟೇ ಎಂದು ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದರು. ತಾಲೂಕಿನ ಅರಾಭಿಕೊತ್ತನೂರಿನಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಒಬ್ಬೊಬ್ಬರೇ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದರು.

ಶೇ.60 ಕಮಿಷನ್‌ ಸರ್ಕಾರ: ಈಗಾಗಲೇ 40ಕ್ಕೂ ಹೆಚ್ಚು ಶಾಸಕರು ಸಿಎಂ ಮತ್ತು ಡಿಸಿಎಂ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದ್ದು, ಶೇ.60 ಕಮಿಷನ್ ಸರ್ಕಾರವಾಗಿದೆ. ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೂರಾರು ಕೋಟಿ ಗುಳುಂ ಮಾಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ, ಇಂತಹ ಆರೋಪಗಳು ಪ್ರತಿ ಸಚಿವರ ವಿರುದ್ದವೂ ಕೇಳಿ ಬರುತ್ತಿದೆ. ಹೀಗಾಗಿ ಇನ್ನು ಮೂರೇ ತಿಂಗಳಲ್ಲಿ ಖತಂ ಆಗುತ್ತದೆ, ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಿಗೆ 28 ಸ್ಥಾನಗಳನ್ನ ಬಿಜೆಪಿ ಗೆಲ್ಲುತ್ತದೆ ಎಂದರು.

ರಾಜ್ಯ ಸರ್ಕಾರ ಬರ ಎದುರಿಸದೆ ತೆಲಂಗಾಣ ಚುನಾವಣೆಗೆ ಹೋಗಿದ್ದಾರೆ: ಎಚ್.ಡಿ.ರೇವಣ್ಣ

ಜಿಲ್ಲಾ ಉಸ್ತುವಾರಿ ಸಚಿವರು ಸಂಸದ ಮುನಿಸ್ವಾಮಿ ಯಾರು ಎಂದು ಪ್ರಶ್ನಿಸಿದ್ದಾರೆ ಎಂಬ ಪ್ರಶ್ನೆಗೆ ಕಿಡಿಕಾರಿದ ಸಂಸದರು, ನಾನು ಯಾರೆಂದು ಅವರಿಗೆ ಗೊತ್ತಾಗುವ ಅಗತ್ಯವಿಲ್ಲ ನನಗೆ ಮತ ನೀಡಿದ ಕ್ಷೇತ್ರದ ಮತದಾರರಿಗೆ ಗೊತ್ತಿದ್ದರೆ ಸಾಕು. ನಾನು ಭಾರತದ ಸಂಸ್ಕೃತಿ, ಹಿಂದು ಧರ್ಮದವನು ಕಾಂಗ್ರೆಸ್ಸಿಗರಂತೆ ಇಟಲಿ ಸಂಸ್ಕೃತಿ ನನ್ನದಲ್ಲ. ಪ್ರಿಯಾಂಕ, ವಾದ್ರ ಸಂಸ್ಕೃತಿಯೂ ಅಲ್ಲ ಎಂದರು. ಡಿಕೆಶಿ ಪ್ರಕರಣವನ್ನು ಸಿಬಿಐನಿಂದ ಇವರು ವಾಪಸ್‌ ಪಡೆಯಲು ಇವರೇನು ಕಾನೂನಿನ ಮುಂದೆ ಸುಪ್ರೀಂ ಅಲ್ಲ, ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಅವರು ತನಿಖೆ ನಡೆಸೇ ನಡೆಸುತ್ತಾರೆ ಎಂದರು.

ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸರ್ಕಾರದ ಆಡಳಿತದಲ್ಲಿ ಮೂಗು ತೋರಿಸಿರುವುದ ಸಾಕ್ಷಿ ಸಮೇತ ರುಜುವಾತಾಗಿರುವ ಹಿನ್ನಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದ ಎಸ್.ಮುನಿಸ್ವಾಮಿ ಒತ್ತಾಯಿಸಿದರು. ನಗರದ ಜಿಪಂ ಕೆ.ಡಿ.ಪಿ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂರ್ಪಕ ಪಡೆದಿರುವ ವಿರುದ್ದ ಕ್ರಮ ಕೈಗೊಂಡಿರುವ ಹಾಗೇ ಡಾ.ಯತೀಂದ್ರ ಸಾರ್ವಜನಿಕವಾಗಿ ಸರ್ಕಾರದ ಆಡಳಿತದಲ್ಲಿ ಮೂಗು ತೋರಿಸಿರುವುದರ ಹಿನ್ನೆಲೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೇಂದ್ರ ಸರ್ಕಾರದ ‘ಗ್ಯಾರಂಟಿ’: ರಾಜೀವ್ ಚಂದ್ರಶೇಖರ್

ಡಾ.ಯತೀಂದ್ರ ಸ್ಥಳೀಯ ಶಾಸಕರನ್ನು ಹಿಮ್ಮೆಟಿಸಿ ತಾವೇ ವರ್ಗವಣೆಗಳನ್ನು ಮಾಡುವುದಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿರುವುದು ಎಷ್ಟು ಮಾತ್ರ ಸರಿಯಿದೆ ಎಂದು ಪ್ರಶ್ನಿಸಿದರು. ಬರದಿಂದ ರೈತರು ಸಾಕಷ್ಟು ನಷ್ಟಕ್ಕೆ ತುತ್ತಾಗಿದ್ದರೂ ಸಹ ಆಡಳಿತ ಪಕ್ಷದ ಸಚಿವರು ಈವರೆಗೆ ಬರದ ಅಧ್ಯಯನ ಮಾಡಲು ಯಾವುದೇ ಪ್ರವಾಸ ಕೈಗೊಳ್ಳದೆ ಇರುವುದು ನಿರ್ಲಕ್ಷತೆಯ ಪರಮಾವಧಿಯಾಗಿದೆ. ಕರ್ನಾಟಕದಲ್ಲಿ ಆಡಳಿತ ಪಕ್ಷವು ಬಿಟ್ಟಿ ಪ್ರಚಾರಗಳಲ್ಲಿ ತೊಡಗಿದ್ದು ಹಿಂದಿನ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡುವುದರಲ್ಲಿ ತೊಡಗಿದೆ ಎಂದು ಅರೋಪಿಸಿದರು.

click me!