ಕೋಲಾರದಲ್ಲಿ ಗೂಂಡಾ ವರ್ತನೆ ಪ್ರದರ್ಶಿಸಿದ ಜನಪ್ರತಿನಿಧಿಗಳು: ವೇದಿಕೆಯಲ್ಲಿ ಬೋ... ಮಗನೆ ಎಂದು ಬೈಯೋದಾ!

By Sathish Kumar KH  |  First Published Sep 25, 2023, 2:09 PM IST

ಕೋಲಾರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಾರಾಯಣಸ್ವಾಮಿ ಬೋ.. ಮಗನೆ ಎಂದು ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.


ಕೋಲಾರ (ಸೆ.25): ಕೋಲಾರದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭೂಗಳ್ಳರನ್ನು ವೇದಿಕೆ ಮೇಲೆ ಕೂರಿಸಿ ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದ ಸಂಸದ ಎಸ್.ಮುನಿಸ್ವಾಮಿಗೆ ಬೋಳಿಮಗನೆ, ಅಪ್ಪನಿಗೆ ಹುಟ್ಟಿದ್ರೆ ಸಾಬೀತು ಮಾಡು ಎಂದು ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ರಾಜ್ಯಾದ್ಯಂತ ಸೋಮವಾರ ಎಲ್ಲ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಆದರೆ, ಕೋಲಾರದ ಜನತಾದರ್ಶನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಮುಂದೆ ಕೈಕೈ ಮಿಲಾಯಿಸುವ ಹಂತಕ್ಕೆ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಲುಪಿದ್ದಾರೆ. ಪರಸ್ಪರ ಏಕವಚನದಲ್ಲಿ ವಾಗ್ದಾಳಿ ಮಾಡಿಕೊಂಡ ಇವರು, ಬೋಳಿಮಗನೆ, ಅಪ್ಪನಿಗೆ ಹುಟ್ಟಿದ್ರೆ ಸಾಬೀತು ಮಾಡು ಎಂದು ವೇದಿಕೆ ಮೇಲೆಯೇ ಏಕವಚನದಲ್ಲಿ ನಿಂದಿಸಿಕೊಂಡರು. ಈ ವಿಚಾರವಾಗಿ ಪಕ್ಕದಲ್ಲೇ ಕುಳಿತಿದ್ದ ನಾರಾಯಣಸ್ವಾಮಿ ಕೂಗಾಟ ಮಾಡಿದ್ದಾರೆ. ಕೈ ಕೈ ಮಿಲಾಯಿಸುವ‌ ಹಂತಕ್ಕೆ ಬಂದ ಜನಪ್ರತಿನಿಧಿಗಳನ್ನು ಪೊಲೀಸರು ಹಾಗೂ ಬೆಂಗಾವಲು ಸಿಬ್ಬಂದಿ ತಡೆದು ಗಲಾಟೆ ಅತಿರೇಕಕ್ಕೆ ಹೋಗುವುದನ್ನು ತಡೆದಿದ್ದಾರೆ. 

ಕೆಆರ್‌ಎಸ್‌ ಜಲಾಶಯ ಪರಿಶೀಲಿಸಿ ಕೇಂದ್ರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ...

Tap to resize

Latest Videos

ಇನ್ನು ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಗೂಂಡಾ ವರ್ತನೆಯನ್ನು ನೋಡಿ ಕಿಡಿಕಾರಿದ್ದಾರೆ. ಇನ್ನು ಕೆಲವು ಸಾರ್ವಜನಿಕರು ಪುಕ್ಕಟೆಯಾಗಿ ಮನರಂಜನೆ ಸಿಗುತ್ತಿದೆ ಎಂದು ಮಾತನಾಡಿಕೊಂಡಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿ ಸಮಾಧಾನ ಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ್ ಅವರು ಇಬ್ಬರನ್ನೂ ಸಮಾಧಾನ ಮಾಡಿದರು. ಈ ಘಟನೆ ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯುತ್ತಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ನಡೆದಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಎಸ್ಪಿ ನಾರಾಯಣ್, ಸ್ಥಳೀಯ ಶಾಸಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

ಸಂಸದ, ಶಾಸಕರ ನಡೆಯಿಂದ ಬೇಸರ:  ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಮಾತನಾಡಿ, ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಾರಾಯಣಸ್ವಾಮಿ ಅವರ ನಡವಳಿಕೆ ಬೇಸರ ತಂದಿದೆ. ಸಂಸದ ಮುನಿಸ್ವಾಮಿ ವೈಯಕ್ತಿಕ ತೇಜೋವಧೆ ಮಾಡಕೂಡದು. ಶಾಸಕ ನಾರಾಯಣಸ್ವಾಮಿ ಸಹ, ಮರಳಿ ನಿಂಧಿಸಿದ್ದು ಒಳ್ಳೆಯ ಸಂಸ್ಕೃತಿ ಅಲ್ಲ. ಸಂಸದ ಮುನಿಸ್ವಾಮಿ ನನಗೆ ಹಳೆಯ ಸ್ನೇಹಿತ, ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕು. ಶ್ರೀನಿವಾಸಪುರ ಅರಣ್ಯ ಒತ್ತುವರಿ ತೆರವು ವಿವಾದವಾಗಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸರ್ವೇಗೆ ಸೂಚಿಸಿದ್ದೇನೆ. ಸರ್ವೇ ನಲ್ಲಿ ಅರಣ್ಯ ಎಂದಾದರೆ ತೆರವು ಮಾಡ್ತೀವಿ ಎಂದು ಮಾಹಿತಿ ನೀಡಿದರು.

click me!