
ಕೋಲಾರ(ಜ.12): ‘ಮಂತ್ರಿ ಪದವಿಗಾಗಿ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ದೂರ ಉಳಿದೆ. ಕೋಲಾರ ಕ್ಷೇತ್ರ ಗೆಲ್ಲಲು 17 ಕೋಟಿ ರು.ನನಗೆ ಖರ್ಚಾಗಿದೆ, ಶಾಸಕನಾಗಲು 17 ಕೋಟಿ ರು.ಸಾಲ ಮಾಡಿದ್ದೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ತಮ್ಮ ಬೆಂಬಲಿಗನ ಜೊತೆ ಮಾತನಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ.
‘ಸಿದ್ದರಾಮಯ್ಯ ಗೆದ್ದರೆ ನಾನು ಮಂತ್ರಿಯಾಗುತ್ತೇನೆ, ಕಾಂಗ್ರೆಸ್‌ನವರು ನನ್ನನ್ನು ಎಂಎಲ್‌ಸಿ ಮಾಡಿ, ಮಂತ್ರಿ ಮಾಡುತ್ತಾರೆ. ಸಿದ್ದು ಗೆದ್ದರೂ ಕೋಲಾರ ಕ್ಷೇತ್ರದ ಜವಾಬ್ದಾರಿ ನನ್ನದೇ ಆಗಿರುತ್ತೆ. ಈ ಸಲ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಸಿದ್ದುಗೆ ಮತ ಹಾಕಿ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ನಾನೇ ಖುದ್ದು ಓಡಾಡುತ್ತೇನೆ’ ಎಂದು ಆಡಿಯೋದಲ್ಲಿ ಹೇಳಲಾಗಿದ್ದು ಇದು ಶ್ರೀನಿವಾಸಗೌಡ ಅವರು ಧ್ವನಿ ಎಂಬ ಗುಸುಗುಸು ಕೇಳಿಬಂದಿದೆ. ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ ನಂತರ ಶಾಸಕರು ತಮ್ಮ ಬೆಂಬಲಿಗನ ಜತೆ ಮಾತನಾಡಿರುವ ಆಡಿಯೋ ಇದು ಎನ್ನಲಾಗಿದೆ.
ಸಿದ್ದರಾಮಯ್ಯ ನನಗೆ ಪ್ರತಿಸ್ಪರ್ಧಿಯೇ ಅಲ್ಲ: ವರ್ತೂರು ಪ್ರಕಾಶ್
ಈ ಮಧ್ಯೆ, ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸಗೌಡ, ಸಿದ್ದು ಜೊತೆ ನಾನು ಯಾವುದೇ ರೀತಿ ಕರಾರು ಮಾಡಿಕೊಂಡಿಲ್ಲ. ನನಗೂ 76 ವರ್ಷ ವಯಸ್ಸಾಗಿದ್ದು, ಚುನಾವಣೆ ನಿಭಾಯಿಸುವ ಶಕ್ತಿ ಕುಂದಿದೆ. ಅವಕಾಶವಿದ್ದಲ್ಲಿ ನನ್ನನ್ನು ಎಂಎಲ್‌ಸಿ ಮಾಡುವುದು, ಬಿಡುವುದು, ಪಕ್ಷಕ್ಕೆ ಬಿಟ್ಟಿದ್ದು. ಮುಂದಿನ ಜಿಪಂ ಚುನಾವಣೆಯಲ್ಲಿ ಹೋಳೂರು ಕ್ಷೇತ್ರಕ್ಕೆ ನನ್ನ ಮಗ ಮಂಜುನಾಥ್‌ಗೆ ಟಿಕೆಟ್ ಕೇಳಿದ್ದೇನೆ. ನಾನು ಈ ಹಿಂದೆ ಚುನಾವಣೆಯಲ್ಲಿ ಸೋಲಲು ವರ್ತೂರು ಪ್ರಕಾಶ್ ಕಾರಣರಲ್ಲ, ಕೆ.ಎಚ್.ಮುನಿಯಪ್ಪ ಅವರಿಂದ ಸೋತೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.