
ಕೋಲಾರ(ಏ.10): ನನಗೆ ರಾಜಕೀಯ ಮುಖ್ಯವಲ್ಲ, ಕೋಲಾರದ ಅಭಿವೃದ್ಧಿ ಮುಖ್ಯ. ಚುನಾವಣೆ ಬಂದಾಗ ನಿಮ್ಮ ಮನೆ ಬಳಿ ಬರುವುದು ಮುಖ್ಯವಲ್ಲ. ಸದಾ ನಿಮ್ಮ ಮನೆ ಮಗನಾಗಿರುವುದು ಮುಖ್ಯ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ತಿಳಿಸಿದರು.
ನಗರದ ಮಾಸ್ತಿ ಬಡಾವಣೆಯಲ್ಲಿ ಮತಯಾಚಿಸಿ ಮಾತನಾಡಿ, ಜಿಲ್ಲೆಯಲ್ಲಿ ಬೈರೇಗೌಡರು ಅಭಿವೃದ್ಧಿ ಮಾಡಿದ್ದರು. ತದನಂತರ ಅವರ ಹಾದಿಯಲ್ಲಿ ನಾನು ಕೋಲಾರವನ್ನು ಅಭಿವೃದ್ಧಿ ಮಾಡಿದ್ದೇನೆ. ಈ ಬಾರಿ ನೀವು ಆಶೀರ್ವಾದ ಮಾಡಿದರೆ ನಗರವನ್ನು ಅತ್ಯುತ್ತಮ ನಗರವನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದರು.
ಸಿದ್ದರಾಮಯ್ಯ ಕಣ್ಣಿಟ್ಟಿರುವ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಅಬ್ಬರದ ಪ್ರಚಾರ
ಅಂತರಗಂಗೆ ಬೆಟ್ಟ ಅಭಿವೃದ್ಧಿ
ಕೋಲಾರಮ್ಮನ ದೇವಸ್ಥಾನ, ಗಂಗಮ್ಮನ ದೇವಸ್ಥಾನ, ಅಂತರಗಂಗೆ ಬೆಟ್ಟವನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದೇನೆ ನನ್ನೊಂದಿಗೆ ಕೈ ಜೋಡಿಸಿ ಹೆಚ್ಚು ಮತಗಳನ್ನು ನೀಡುವ ಮೂಲಕ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಿಎಂದು ಮನವಿ ಮಾಡಿದರು.
ಕಳೆದ ಹತ್ತು ವರ್ಷಗಳ ಕಾಲ ಅವರು ಕೋಲಾರವನ್ನು ಅಭಿವೃದ್ಧಿ ಮಾಡಿದ್ದರು. ಆದರೆ ಕಳೆದ ಬಾರಿ ನಾವು ಅವರಿಗೆ ಮತ ನೀಡದೆ ಅನ್ಯಾಯ ಮಾಡಿಬಿಟ್ಟೆವು. ಅದರ ಪ್ರತಿಫಲ ಇಂದು ನಾವು ಕೋಲಾರದಲ್ಲಿ ಅಭಿವೃದ್ಧಿ ಕಾಣದೆ ನರಕ ಯಾತನೆ ಅನುಭವಿಸುತ್ತಿದ್ದೇವೆಂದು ವಿಷಾಧಿಸಿದರು.
KGF : ವಲಸಿಗರಿಗೆ ಟಿಕೆಟ್ : ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್, ಜಿಪಂ ಮಾಜಿ ಸದಸ್ಯ ಅರುಣ್ ಪ್ರಸಾದ್, ಬಂಕ್ ಮಂಜುನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಅಭಿ, ಭಾರದ್ವಾಜ್ ನಾಯ್ಡು, ಲೋಕೇಶ್, ಮುಕೇಶ್, ನಗರ ಘಟಕದ ರೈತ ಮೋರ್ಚ ಅಧ್ಯಕ್ಷ ಮಂಜುನಾಥ್, ಹೂ ಹಳ್ಳಿ ಚಂದ್ರಪ್ಪ, ಕುರುಬರ ಸಂಘದ ನಿರ್ದೇಶಕಿ ಸರಸ್ವತಮ್ಮ, ಉಮಾ, ಅಶ್ವಿನಿ ಇದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.