ಸರ್ಕಾರ ಸಂಘರ್ಷಕ್ಕಿಳಿದರೆ ಎದುರಿಸಲು ಸಿದ್ಧ: ಕೆಂಪಣ್ಣ ಎಚ್ಚರಿಕೆ

By Kannadaprabha NewsFirst Published Jul 15, 2023, 9:09 AM IST
Highlights

ಗುತ್ತಿಗೆದಾರರ ಎಲ್ಲ ಬಿಲ್‌ಗಳ ಹಣವನ್ನು ಬಿಡುಗಡೆ ಮಾಡ್ತೇವೆ ಅಂತ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪ್ರಮಾಣ ಮಾಡಿದ್ದಾರೆ. ಇದನ್ನು ಬಿಟ್ಟು ಸಂಘರ್ಷಕ್ಕೆ ನಿಂತರೆ ನಾವು ಸಿದ್ಧರಾಗಿದ್ದೇವೆ. 

ಚಿಕ್ಕಬಳ್ಳಾಪುರ (ಜು.15): ಗುತ್ತಿಗೆದಾರರ ಎಲ್ಲ ಬಿಲ್‌ಗಳ ಹಣವನ್ನು ಬಿಡುಗಡೆ ಮಾಡ್ತೇವೆ ಅಂತ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪ್ರಮಾಣ ಮಾಡಿದ್ದಾರೆ. ಇದನ್ನು ಬಿಟ್ಟು ಸಂಘರ್ಷಕ್ಕೆ ನಿಂತರೆ ನಾವು ಸಿದ್ಧರಾಗಿದ್ದೇವೆ. ನಮಗೆ ಸಪೋರ್ಟ್‌ ಮಾಡದೇ ಗದಾಪ್ರಯೋಗ ಮಾಡಿದರೆ ಎದುರಿಸಲು ನಾವೂ ರೆಡಿಯಾಗಿದ್ದೇವೆ ಎಂದು ಗುತ್ತಿಗೇದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಎಚ್ಚರಿಕೆ ನೀಡಿದರು.

ಜಿಲ್ಲೆಯ ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಧಿಡೀರ್‌ ಸುದ್ದಿಗೋಷ್ಟಿ ನಡೆಸಿದ ಅವರು, ಈ ದೇಶದಲ್ಲಿ ಗುತ್ತಿಗೇದಾರರಷ್ಟುಕಷ್ಟದಲ್ಲಿರೋರು ಯಾರು ಇಲ್ಲ. ರಾಜ್ಯದಲ್ಲಿ ಶೇ. 85ರಷ್ಟುಗುತ್ತಿಗೇದಾರರು ಸಂಕಷ್ಟದಲ್ಲಿದ್ದಾರೆ. ಕಳೆದ ಸರ್ಕಾರದಲ್ಲಿ ಯಾವ ಗುತ್ತಿಗೆದಾರರಿಗೂ ಕಾಮಗಾರಿಗಳ ಬಿಲ್‌ನ ಬಾಕಿ ಹಣ ಸರಿಯಾಗಿ ಕೊಡಲಿಲ್ಲ. ಅದರ ವಿರುದ್ಧವೇ ಹೋರಾಟ ಮಾಡಬೇಕಾಯಿತು ಎಂದರು.

ಆರ್‌ಎಸ್‌ಎಸ್‌ ಸಂಸ್ಥೆಗೆ ಜಮೀನು ಮಂಜೂರಿಗೆ ತಡೆ: ಬೊಮ್ಮಾಯಿ ಆಕ್ರೋಶ

ಸರ್ಕಾರ ಬಾಕಿ ಹಣ ಪಾವತಿಸುತ್ತಿಲ್ಲ: ಈಗ ಹೊಸ ಸರ್ಕಾರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಗ್ರಾಮೀಣಾಭಿವೃಧ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಎಲ್ಲಾ ಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಗುತ್ತಿಗೆದಾರರ ಎಲ್ಲ ಬಾಕಿ ಹಣವನನು ಬಿಡುಗಡೆ ಮಾಡ್ತೇವೆ ಅಂತ ಹೇಳಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಹಣಕಾಸು ಪರಿಸ್ಥಿತಿ ತುಂಬಾ ಹದಗೆಟ್ಡಿದೆ ಅಂತ ಹೇಳಿದ್ದಾರೆ. ಪಿಡಬ್ಲೂಡಿಗೇ ಸೋಮವಾರದಿಂದ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಕಳೆದ ಮೂರು ತಿಂಗಳಿಂದ ಬಾಕಿ ಪಾವತಿ ಮಾಡಿಲ್ಲ ಎಂದರು.

ಮೂರು ವರ್ಷಗಳಿಂದ ಗುತ್ತಿಗೆದಾರರ ಬಿಲ್‌ ಬಾಕಿ ಮೊತ್ತ ಹಾಗೆ ಇದೆ. ಹಳೆ ಸರ್ಕಾರದ ಕೆಲಸಗಳ ಬಾಕಿ ಮೊತ್ತ ಬಿಡುಗಡೆ ಮಾಡಿದರೆ ಸಾಕಾಗಿದೆ. ಹಿಂದಿನ ಸರ್ಕಾರದ ಬಗ್ಗೆಯೂ ನಮಗೆ ಒಳ್ಳೆ ಅಭಿಪ್ರಾಯ ಇತ್ತು. ಆದರೆ ಶೇ.30 ರಿಂದ ಶೇ.40ರಷ್ಟು ಕಮಿಷನ್‌ ನೀಡಬೇಕಾದ ಸ್ಥಿತಿ ಬಂದಿದ್ದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದೂರು ಕೊಡಬೇಕಾಯಿತು. ಯಾವುದೇ ಪಕ್ಷ ಒಳ್ಳೆಯದು ಮಾಡಿದರೂ ನಮ್ಮ ಬೆಂಬಲ ಇದೆ ಎಂದರು.

ಮೋದಿ ಮತ್ತೆ ಪ್ರಧಾನಿಯಾಗಲೆಂದು ಚಾಮುಂಡಿ ಬೆಟ್ಟ ಹತ್ತಿದ ಶೋಭಾ

25000 ಕೋಟಿ ರು. ಬಾಕಿ: ರಾಜ್ಯದಲ್ಲಿ 25 ಸಾವಿರ ಕೋಟಿ ಬಿಲ್‌ ಪೆಂಡಿಂಗ್‌ ಇದೆ. ಸಣ್ಣನೀರಾವರಿ ಇಲಾಖೆಯಲ್ಲಿ ಅತಿ ಹೆಚ್ಚು ಬಿಲ್‌ ಬಾಕಿ ಇದ್ದು, ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯವರಿಗೆ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ. ಡಿಸಿಎಂ ಡಿಕೆಶಿ ಬಾಕಿ ಇರುವ ಬಿಲ್‌ಗಳ ಪಟ್ಟಿತರಿಸಿದ್ದಾರೆ. ಕಳೆದ ಸರ್ಕಾರದಲ್ಲಿ ಒಂದು ಕೋಟಿ ರುಪಾಯಿ ಕೆಲಸಕ್ಕೆ ನೂರು ಕೋಟಿ ರುಪಾಯಿ ಬಿಲ್‌ ಮಾಡಿಸಿದ್ದಾರೆ. ಒಬ್ಬ ಗುತ್ತಿಗೇದಾರನಿಗೆ ಏಳನೂರು ಕೋಟಿ ಬಾಕಿ ಮೊತ್ತ ಕೊಡಬೇಕಾಗಿದೆ. ಒಬ್ಬರಿಗೆ ಏಳನೂರು ಕೋಟಿ ಕೊಟ್ರೇ ಉಳಿದವರ ಕಥೆ ಏನಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಈಗಿನ ಸರ್ಕಾರದ ಬಗ್ಗೆ ಯಾರು ಭ್ರಷ್ಟಾರದ ಆರೋಪ ಮಾಡಿಲ್ಲ. ದೂರುಗಳು ಬಂದಾಗ ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಹೋರಾಟ ಮಾಡ್ತೇವೆ ಎಂದು ಹೇಳಿದರು.

click me!