ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆದರೆ, ಆ ಪಕ್ಷದ ಶಾಸಕರ ಮಧ್ಯ ನಡೆಯುತ್ತಿರುವ ಜಗಳ ಬೀದಿಗೆ ಬಂದಿದೆ. ಅವರು ಬಳಸುವ ಪದಗಳನ್ನು ರಾಜ್ಯದ ಜನತೆ ಆಲಿಸುತ್ತಿದ್ದಾರೆ. ಇದು ಬೇಕೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ
ಸಿಂದಗಿ(ಜ.19): ಶೇ.40 ಕಮಿಷನ್‌ದಿಂದ ವಿಧಾನಸೌಧದಿಂದ ಆಡಳಿತ ಮಾಡಿದರೇ ರಾಜ್ಯಅಭಿವೃದ್ಧಿ ಆಗುವುದಿಲ್ಲ. ಗ್ರಾಮ ಪಂಚಾಯತಿಯಿಂದ ಅಭಿವೃದ್ಧಿ ಆಗಬೇಕು. ಆ ಕನಸನ್ನು ಜೆಡಿಎಸ್ ಹೊತ್ತುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಅಂಜುಮನ್ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿರುವ ಜಾತ್ಯತೀತ ಜನತಾದಳದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಯಾವ ಪಕ್ಷಗಳನ್ನು ಟೀಕಿಸುವುದಿಲ್ಲ. ಪಕ್ಷಗಳನ್ನು ಟೀಕಿಸುವುದರಿಂದ ಜನತೆ ಬದುಕು ಹಸನಾಗುವುದಿಲ್ಲ. ಅದರ ಬದಲು ಜನತೆಯ ಕಲ್ಯಾಣಕ್ಕಾಗಿ ಆಲೋಚಿಸಿ ವಿವಿಧ ಯೋಜನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅದು ಸಾರ್ಥಕವಾಗುತ್ತದೆ ಎಂದರು.
ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆದರೆ, ಆ ಪಕ್ಷದ ಶಾಸಕರ ಮಧ್ಯ ನಡೆಯುತ್ತಿರುವ ಜಗಳ ಬೀದಿಗೆ ಬಂದಿದೆ. ಅವರು ಬಳಸುವ ಪದಗಳನ್ನು ರಾಜ್ಯದ ಜನತೆ ಆಲಿಸುತ್ತಿದ್ದಾರೆ. ಇದು ಬೇಕೆ ಎಂದು ಪ್ರಶ್ನಿಸಿದರು.
2006ರಲ್ಲಿ ರೈತರಿಗೆ ಸಾಲಮನ್ನಾ ಮಾಡಿದೆ. ಕಬ್ಬಿಗೆ ಸೂಕ್ತ ಬೆಲೆ ನೀಡಿದೆ ಮತ್ತು ರೈತರ ಬದುಕಿಗೆ ಅನೇಕ ಆಸರೆ ಆಗುವಂತಹ ಯೋಜನೆಗಳನ್ನು ಮಾಡಿದೆ. ಆದರೆ, ಕಾಂಗ್ರೆಸ್ ಬಿಜೆಪಿ ರೈತರ ಯೋಜನೆ ಬಗ್ಗೆ ಅನೇಕ ಚರ್ಚೆ ಮಾಡುತ್ತಾರೆ ಹೊರತು ಕಾರ್ಯರೂಪಕ್ಕೆ ತರುವುದು ಮರೆಯುತ್ತಾರೆ. ದೇವೇಗೌಡರು ಕೆಲವೇ ತಿಂಗಳು ಪ್ರಧಾನಿಯಾಗಿದ್ದಾಗ ಈ ಭಾಗಕ್ಕೆ ಸುಮಾರು .18 ಸಾವಿರ ಕೋಟಿ ಹಣವನ್ನು ನೀರಾವರಿ ಕ್ಷೇತ್ರಕ್ಕೆ ನೀಡಿದ್ದಾರೆ. ಪಂಚರತ್ನ ಯೋಜನೆಗಳಿಗೆ ಯಾವುದೇ ರೀತಿಯ ಜಾತಿ, ಧರ್ಮ, ಕುಲ ಯಾವುದು ಇಲ್ಲ. ಇದೊಂದು ರಾಜ್ಯದ 6.5 ಕೋಟಿ ಜನತೆಯ ಕಲ್ಯಾಣಕ್ಕಾಗಿ ನಿರ್ಮಾಣಗೊಂಡ ಯೋಜನೆಗಳಾಗಿವೆ. ಒಂದು ಬಾರಿ 5 ವರ್ಷ ಸಂಪೂರ್ಣವಾಗಿ ಜೆಡಿಎಸ್‌ಗೆ ಅಧಿಕಾರ ನೀಡಿ, ಈ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.
undefined
ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಪೂರ್ಣ ಸಾಲಮನ್ನಾ: ಕುಮಾರಸ್ವಾಮಿ
ಜೆಡಿಎಸ್ ಅಭ್ಯರ್ಥಿ ಮಾಜಿ ಸೈನಿಕ ಶಿವಾನಂದ ಪಾಟೀಲರು ಈ ದೇಶದ ಕಾವಲನ್ನು ಕಾಯುವವರು. ಅಂತವರು ಈ ಕ್ಷೇತ್ರದ ಜನತೆಯ ಕಾವಲು ಮಾಡಲಿದ್ದಾರೆ ಎಂಬ ಆತ್ಮ ವಿಶ್ವಾಸ ನಮ್ಮದಾಗಿದೆ. ಈ ಭಾಗದಲ್ಲಿ ನೆಲ ಕಚ್ಚಿರುವ ಜೆಡಿಎಸ್‌ಗೆ ಶಕ್ತಿ ತುಂಬುತ್ತಿದ್ದಾರೆ. ಅವರನ್ನು ಬೆಂಬಲಸಿ ಎಂದು ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಮಾತನಾಡಿ, ಜೆಡಿಎಸ್ ಅಧಿಕಾರ ಅವಧಿಯಲ್ಲಿ ಈ ಭಾಗಕ್ಕೆ ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ನಮ್ಮ ಸಮಾಜಮುಖಿಯಾಗಿರುವ ಕಾರ್ಯಗಳನ್ನು ಗುರುತಿಸಿ ಈ ಬಾರಿ ಜೆಡಿಎಸ್ ಅಭ್ಯರ್ಥಿಎಂದು ಜೆಡಿಎಸ್ ವರಿಷ್ಠರು ತಿರ್ಮಾನಿಸಿದ್ದಾರೆ. ನನಗೆ ಒಂದು ಬಾರಿ ಅವಕಾಶ ನೀಡಿ, ಮೊತ್ತೊಮ್ಮೆ ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಈ ರಾಜ್ಯಕ್ಕೆ ಇದೆ. ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದ ವೇದಿಕೆ ಮೇಲೆ ಜೆಡಿಎಸ್ ಮುಖಂಡರಾದ ಸುನೀತಾ ಚವ್ಹಾಣ, ವಿ.ಎಸ್.ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಮಹಾಬರಿ, ಬಿ.ಜಿ.ಪಾಟೀಲ ಹಲಸಂಗಿ, ಪ್ರಕಾಶ ಹಿರೇಕುರುಬರ, ನಿಂಗರಾಜ ಬಗಲಿ, ಗೋಲ್ಲಾಳಪ್ಪಗೌಡ ಪಾಟೀಲ, ದಾನಪ್ಪಗೌಡ ಚನಗೊಂಡ, ಗುಂಡುಗೌಡ ಪಾಟೀಲ, ಜ್ಯೋತಿ ಗುಡಿಮನಿ, ರಾಜಣ್ಣ ನಾರಾಯಣಕರ, ಮಹಾದೇವಪ್ಪ ಸುಲ್ಪಿ ಸೇರಿದಂತೆ ಅನೇಕರು ಇದ್ದರು. ಅಶೋಕ ಬಿರಾದಾರ ನಿರೂಪಿಸಿದರು. ಡಾ.ಪ್ರಕಾಶ ರಾಗರಂಜನಿ ರೈತಗೀತೆ ಹಾಡಿದರು.
ಬೆಲ್ಲದ ಹಾರ ಹಾಕಿ ಮೆರವಣಿಗೆ
ಈ ಮೊದಲು ಪಂಚರತ್ನ ರಥಯಾತ್ರೆ ಪಟ್ಟಣದ ಬಸವೇಶ್ವರ ವೃತ್ತದಿಂದ ವಿವಿಧ ವ್ಯಾದ್ಯಮೇಳ, ಕುಂಭಮೇಳದೊಂದಿಗೆ ಸಾಗಿ ಬೃಹತಗಾತ್ರದ ಬೆಲ್ಲದ ಹಾರವನ್ನು ಕ್ರೇನ್ ಮೂಲಕ ನಾಯಕರಿಗೆ ಹಾಕಿ ಮೆರವಣಿಗೆ ಸಾಗಿತು. ನಂತರ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಿ ಅಂಜುಮನ ಮೈದಾನಕ್ಕೆ ತಲುಪಿತು.
ಅಧಿಕಾರ ನೀಡಿದರೆ 5 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಎಚ್‌ಡಿಕೆ
ಸಿಂದಗಿ ಕ್ಷೇತ್ರದಲ್ಲಿ ಅನೇಕ ಕಾಮಗಾರಿ ನಡೆದಿವೆ ಅಂದರೆ ಅದು ದಿ.ಮನಗೂಳಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ನನ್ನ ಅಧಿಕಾರದಲ್ಲಿ ಈ ಕ್ಷೇತ್ರಕ್ಕೆ ನೂರಾರು ಕೋಟಿ ಹಣ ಬಿಡುಗಡೆಯ ಆಧಾರದಿಂದಲೇ ಹೊರತು ಇಂದಿನ ಬಿಜೆಪಿ ಸರ್ಕಾರದ ಕೊಡುಗೆಯಿಂದ ಅಲ್ಲ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಅಧಿಕಾರ ಅವಧಿಯಲ್ಲಿ ಈ ಭಾಗಕ್ಕೆ ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ನಮ್ಮ ಸಮಾಜಮುಖಿಯಾಗಿರುವ ಕಾರ್ಯಗಳನ್ನು ಗುರುತಿಸಿ ಈ ಬಾರಿ ಜೆಡಿಎಸ್ ಅಭ್ಯರ್ಥಿಎಂದು ಜೆಡಿಎಸ್ ವರಿಷ್ಠರು ತಿರ್ಮಾನಿಸಿದ್ದಾರೆ. ನನಗೆ ಒಂದು ಬಾರಿ ಅವಕಾಶ ನೀಡಿ, ಮೊತ್ತೊಮ್ಮೆ ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಈ ರಾಜ್ಯಕ್ಕೆ ಇದೆ. ಅವಕಾಶ ನೀಡಿ ಅಂತ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ತಿಳಿಸಿದ್ದಾರೆ.