ಒಂದು ಕ್ಷೇತ್ರದಲ್ಲಿ ನಿಂತರೆ ಮಾತ್ರ ನಾಯಕ, ಬೇರೆ ಕ್ಷೇತ್ರದಲ್ಲಿ ನಿಂತರೆ ನಾಯಕರಾಗಲು ಸಾಧ್ಯವಿಲ್ಲವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ದೊಡ್ಡ ನಾಯಕರು. ನಾನು ಎರಡು ಕ್ಷೇತ್ರಗಳಲ್ಲಿ ನಿಲ್ಲಬಾರದೇ? ಜನ ಮತ ಹಾಕಿದಾಗ ಮಾತ್ರ ನಾವು ಚುನಾಯಿತರಾಗಲು ಸಾಧ್ಯ ಎಂದು ತಿಳಿಸಿದರು.
ಬಾಗಲಕೋಟೆ(ಜ.19): ಚಾಮುಂಡೇಶ್ವರಿಯಲ್ಲಿ 8 ಬಾರಿ ಗೆದ್ದವನು ನಾನು. ಹೇಗೆ ಅಲೆಮಾರಿ ಆಗುತ್ತೇನೆ ಎಂದು ವಿರೋಧಿಗಳನ್ನು ಪ್ರಶ್ನಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರ ದೂರ ಆಗುತ್ತದೆ ಎನ್ನುವ ಕಾರಣಕ್ಕೆ ಬೆಂಗಳೂರು ಹತ್ತಿರದ ಕೋಲಾರ ಮತಕ್ಷೇತ್ರಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕ್ಷೇತ್ರದಲ್ಲಿ ನಿಂತರೆ ಮಾತ್ರ ನಾಯಕ, ಬೇರೆ ಕ್ಷೇತ್ರದಲ್ಲಿ ನಿಂತರೆ ನಾಯಕರಾಗಲು ಸಾಧ್ಯವಿಲ್ಲವಾ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ದೊಡ್ಡ ನಾಯಕರು. ನಾನು ಎರಡು ಕ್ಷೇತ್ರಗಳಲ್ಲಿ ನಿಲ್ಲಬಾರದೇ? ಜನ ಮತ ಹಾಕಿದಾಗ ಮಾತ್ರ ನಾವು ಚುನಾಯಿತರಾಗಲು ಸಾಧ್ಯ ಎಂದು ತಿಳಿಸಿದರು.
ನಾನು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದಾಗ ಕೇವಲ ಎರಡು ದಿನ ಮಾತ್ರ ಬಂದಿದ್ದೆ. ದೂರದಿಂದ ಬಂದಿದ್ದರೂ ಇಲ್ಲಿನ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ವರುಣಾ, ಚಾಮುಂಡೇಶ್ವರಿ, ಬಾದಾಮಿ, ಕೋಲಾರ ಸೇರಿ ಎಲ್ಲಿ ನಿಂತರೂ ಜನ ಆಶೀರ್ವಾದ ಮಾಡಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ ಎಂದ ಸಿದ್ದರಾಮಯ್ಯ, ಈ ಬಾರಿ ಕೋಲಾರದ ಜನ ಕರೆದಿದ್ದರಿಂದ ಅರ್ಜಿ ಸಲ್ಲಿಸಿದ್ದೇನೆ. ಹೈಕಮಾಂಡ್ ಏನು ನಿರ್ಧಾರ ಕæೖಗೊಳ್ಳಲಿದೆಯೋ ಅಲ್ಲಿ ಸ್ಪÜರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
undefined
ಸರ್ಕಾರಿ ನೌಕರಿಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ; ಸುರ್ಜೇವಾಲ
ನಾನು ಈ ಹಿಂದೆ ಕೊಪ್ಪಳದಲ್ಲಿ ಸ್ಪರ್ಧಿಸಿದ್ದಾಗ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೆ. ಆಗ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಚುನಾವಣೆ ನಡೆದಿದ್ದರಿಂದ ನನಗೆ ಸೋಲಾಯಿತು. ಹೆಗಡೆ ಅಂಥವರೇ ಆಗ ಸೋತಿದ್ದರು ಎಂದು ನೆನಪಿಸಿಕೊಂಡ ಅವರು, ಬಾದಾಮಿಯಲ್ಲಿ ನಾನು ಬಂದಿದ್ದರಿಂದಲೇ ಬಿಜೆಪಿಯವರು ರಾಮುಲು ಅವರಿಗೆ ಟಿಕೆಟ್ ನೀಡಿದರು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳ ಆಯ್ಕೆ ವಿಷಯದಲ್ಲಿ ಒಂದು ಪದ್ಧತಿ ಇದೆ. ಆಯ್ಕೆಯಾದ ಶಾಸಕರು ಮೆಜಾರಿಟಿ ನೀಡಬೇಕು. ನಂತರ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ನಾನು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಈ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದರು.
ಯತ್ನಾಳ ಒಮ್ಮೊಮ್ಮೆ ಸತ್ಯ ಮಾತನಾಡುತ್ತಾರೆ
ಬಿಜೆಪಿಯಲ್ಲಿನ ಸಚಿವ ನಿರಾಣಿ ಮತ್ತು ಯತ್ನಾಳ ಅವರ ಜಗಳದ ವಿಷಯದಲ್ಲಿ ಅದು ಅವರ ವೈಯಕ್ತಿಕ ಜಗಳ. ಆದರೆ, ಒಮ್ಮೊಮ್ಮೆ ಶಾಸಕ ಯತ್ನಾಳ ಅವರು ಸತ್ಯ ಮಾತನಾಡುತ್ತಾರೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಮಗನ ಮೇಲೆ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಆಗಬೇಕು ಎಂದರೆ ಬಿಜೆಪಿಗೆ .2.5 ಸಾವಿರ ಕೋಟಿ ಕೊಡಬೇಕು. ಮಂತ್ರಿಯಾಗಬೇಕು ಎಂದರೆ .100 ಕೋಟಿ ಕೊಡಬೇಕು ಎಂದು ಹೇಳಿದ್ದರು. ಯಡಿಯೂರಪ್ಪ ಮನೆಯಲ್ಲಿ ಮಗನ ಭ್ರಷ್ಟಾಚಾರ ನಡೆಯುತ್ತದೆ ಎಂದಿದ್ದರು. ಪಿಎಸ್‌ಐ ಅಕ್ರಮದಲ್ಲಿ ಯಡಿಯೂರಪ್ಪ ಮಗನೂ ಇದ್ದಾನೆ ಎಂದಿದ್ದರು. ಆದರೆ, ಪಕ್ಷ ಅವರ ಮೇಲೆ ಏನಾದರು ಕ್ರಮ ಕæೖಗೊಂಡಿದೆಯಾ ಎಂದು ಪ್ರಶ್ನಿಸಿದರಲ್ಲದೇ, ಯತ್ನಾಳ ಮೇಲೆ ಕ್ರಮ ಕೈಗೊಂಡರೆ ಎಲ್ಲವನ್ನು ಹೇಳಿ ಬಿಡುತ್ತಾನೆ ಎಂಬ ಭಯ ಅವರ ಪಕ್ಷದಲ್ಲಿದೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ಒಬ್ಬ ನಟೋರಿಯಸ್ ಕ್ರಿಮಿನಲ್. ಅವನ ಮೇಲೆ ಗುರುತರ ಆರೋಪವಿದ್ದರೂ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುವ ಬದಲು ನೇರವಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವುದನ್ನು ಗಮನಿಸಿದರೆ, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
Prajadhwani Yatre: ಎರಡೇ ವರ್ಷಗಳಲ್ಲಿ ಮಹದಾಯಿ ಯೋಜನೆ ಪೂರ್ಣ: ಸಿದ್ದರಾಮಯ್ಯ
ನಾ ನಾಯಕಿ ಕಾರ್ಯಕ್ರಮದಲ್ಲಿ ವಾರೆನೋಟ ನೋಡಿದ ಕುರಿತು ನಗುತ್ತಲೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಅದರ ಬಗ್ಗೆ ಮಾತನಾಡಬಾರದು. ಚರ್ಚೆ ಮಾಡಬಾರದು. ಯಾವುದು ಸಮಾಜಕ್ಕೆ ಅವಶ್ಯಕತೆ ಇರುತ್ತದೆ ಅದನ್ನು ಚರ್ಚೆ ಮಾಡಬೇಕು. ಕೆಲವು ಮೀಡಿಯಾ ಜನರು ನನ್ನ ಬಗ್ಗೆ ನೆಗೆಟಿವ್ ಮಾಡೋಕೆ ಇರೋದು. ಮುಖ್ಯ ವಿಷಯ ಬಿಟ್ಟು ಹಿಂದಿನದು, ಮುಂದಿನದು ತಗೊಂಡು ಬಿಡುತ್ತಾರೆ. ಅದಕ್ಕೆ ಏನು ಮಾಡಾಕಾಗುತ್ತಪ್ಪ. ಅದಕೆ ನಾನು ಮೀಡಿಯಾದವರಿಗೂ ಸ್ವಾತಂತ್ರ್ಯ ಇದೆ. ಏನ್ ಬೇಕಾದ್ರೂ ಬರೆದುಕೊಳ್ಳಲಿ ಅಂತ ಸುಮ್ಮನೆ ಬಿಟ್ಟು ಬಿಟ್ಟಿದ್ದೀನಿ ಎಂದರು.
ಸಾಮಾಜಿಕ ಜಾಲತಾಣಗಳದ್ದು ಸ್ವಾತಂತ್ರ್ಯ ಇದೆಯಲ್ಲಪ್ಪ. ನಿಮ್ಮ ಸ್ವಾತಂತ್ರ್ಯಕ್ಕೆ ನಾನೇಕೆ ಅಡ್ಡಿಪಡಿಸಲಿ. ನನ್ನ ಸ್ವಾಭಿಮಾನಕ್ಕೆ, ಅವಮಾನ ಮಾಡಿದರೆ ಪ್ರಶ್ನೆ ಮಾಡುವ ಅಧಿಕಾರ ನನಗಿದೆ. ಉದ್ದೇಶಪೂರ್ವಕವಾಗಿ ಮಾಡಿದರೆ ಮಾನಹಾನಿ ಮಾಡಿದರೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುವ ಅಧಿಕಾರ ಇದೆ ಎಂದು ಹೇಳಿದರು.