Karnataka Pollitics : ನಾವೂ ಸಹ ಐಟಂ ಸಾಂಗ್‌ ರೀತಿ ಆಗಿದ್ದೀವಿ!

By Kannadaprabha NewsFirst Published Jan 29, 2022, 3:15 AM IST
Highlights

ಕೊರೋನಾ ತೋರಿಸಿ ಬೇಜಾರಾಗಿತ್ತು ಅದಕ್ಕಾಗಿ ಪಕ್ಷಾಂತರ ತೋರಿಸ್ತಿದ್ದಾರೆ
ನಾವೂ ಕೂಡ ಐಟಂ ಸಾಂಗ್ ರೀತಿಆ ಆಗಿದ್ದೇವೆ ಎಂದ ಬಿಜೆಪಿ ಶಾಸಕ ರಾಜೂ ಗೌಡ
ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯಿಸಿದ ಸುರಪುರ ಶಾಸಕ

ಯಾದಗಿರಿ (ಜ.28): ಕೊರೋನಾ (Corona) ತೋರಿಸಿ ಬೇಜಾರಾದ ಮಾಧ್ಯಮಗಳು ಈಗ ಪಕ್ಷಾಂತರ ವದಂತಿಗಳನ್ನು (Defection Politics) ತೋರಿಸ್ತಿದ್ದಾರೆ. ಮನರಂಜನೆಗಾಗಿ ನಾವೂ ಸಹ ಐಟಂ ಸಾಂಗ್‌ ತರಹ ಆಗ್ಬಿಟ್ಟಿದ್ದೀವಿ. ‘ಹೂಂ ಅಂಟಾ ವಾ ಮಾವಾ, ಹೂಂ ಹೂಂ ಅಂಟಾವ ತರಹ ಆಗಿದೆ’ ಎಂದು ಸುರಪುರ ಶಾಸಕ ನರಸಿಂಹ ನಾಯಕ್‌ (ರಾಜೂಗೌಡ) ಬೇಸರ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಶಾಸಕರು, ಸಚಿವರು ಸಂಪರ್ಕದಲ್ಲಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaia) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. 24 ಗಂಟೆ ಮಾಧ್ಯಮದವರು ತಮ್ಮನ್ನೇ ತೋರಿಸಬೇಕು ಅಂತ ಹೇಳಿಕೆ ನೀಡುತ್ತಿದ್ದಾರೆ. ದಿನಾಲೂ ನೀವು (ಮಾಧ್ಯಮದವರು) ಕೊರೋನಾ ತೋರಿಸಿ ತೋರಿಸಿ ಜನರಿಗೆ ಬೇಜಾರಾಗಿತ್ತು, ಈಗ ಇದನ್ನು ತೋರಿಸುತ್ತಿದ್ದೀರಿ ಎಂದರು. ಎಂಟರಟೇನ್ಮೆಂಟ್‌ಗಾಗಿ ನಾವೂ ಸಹ ಐಟಂ ಸಾಂಗ್‌ ತರಹ ಆಗಿ ಬಿಟ್ಟಿದ್ದೇವೆ, ‘ಹೂಂ ಅಂಟಾ ವಾ ಮಾವಾ, ಹೂಂ ಹೂಂ ಅಂಟಾವ ತರಹ ಆಗಿದೆ’ ಎಂದು ಪುಷ್ಪ ಸಿನಿಮಾ ಹಾಡಿನ ಮೂಲಕ ವ್ಯಂಗ್ಯವಾಡಿದರು.

ಇನ್ನು ಕಳೆದ ಒಂದು ವಾರದಿಂದ ಕರ್ನಾಟಕ ರಾಜಕೀಯದಲ್ಲಿ ಪಕ್ಷಾಂತರ ಸುದ್ದಿಯೇ ದೊಡ್ಡ ಮಟ್ಟದ ಚರ್ಚೆಯಾಗಿದ್ದು ಬಿಜೆಪಿ (BJP), ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ಪಕ್ಷಗಳ ಪ್ರಮುಖ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ, ಜೆಡಿಎಸ್ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿರುವುದು ಭಾರಿ ಸಂಚಲನ ಮೂಡಿಸಿದೆ. ಜೆಡಿಎಸ್ ಶಾಸಕ ಪುಟ್ಟರಾಜು (CS Puttaraju) ಕಾಂಗ್ರೆಸ್ (Congress) ಸೇರ್ತಾರಾ ಎಂಬ ಸಾಧ್ಯತೆ ದಟ್ಟವಾಗಿದೆ. 

"ಸಿ.ಎಸ್.ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಾರೋ ಅದನ್ನು ಕಟ್ಟಿಕೊಂಡು ನನಗೇನು? ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು. ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರೆ ಅಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದು ಸ್ಪಷ್ಟಪಡಿಸಿದರು. ಕಾರ್ಯಕರ್ತರಿಂದ ಮುಖಂಡರು ಉದ್ಭವ ಆಗುತ್ತಾರೆ. ಬಹಳಷ್ಟು ಜನ ಮುಖಂಡರು ಜೆಡಿಎಸ್ ನಲ್ಲಿ ಬೆಳೆದಿದ್ದಾರೆ. ನಂತರ ಪಕ್ಷವನ್ನ ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನು ಬೆಳೆಸುವ ಶಕ್ತಿಯಿದೆ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ" ಎಂದು ಮಾಜಿ ಸಿಎಂ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

2 ಸಲ ನೋಬಾಲ್‌ಗೆ ರನೌಟ್‌ ಆಗಿದ್ದೆ, ಈ ಸಲ ಮ್ಯಾಚ್‌ ಆಡಲ್ಲ: ರಾಜೂಗೌಡ
ಯಾದಗಿರಿ : ‘ಕಳೆದೆರಡು ಬಾರಿ ನೋ ಬಾಲ್‌ಗೆ ರನೌಟ್‌ ಆಗಿದ್ದೇನೆ. ಹಾಗಾಗಿ, ಈ ಸಲ ಮ್ಯಾಚ್‌ ಆಡೋಕೆ ಹೋಗಲ್ಲ’ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಬಗ್ಗೆ ಸುರಪುರ ಶಾಸಕ ನರಸಿಂಹ ನಾಯಕ(ರಾಜೂಗೌಡ) ತಮ್ಮದೇ ಧಾಟಿಯಲ್ಲಿ ಹೇಳಿದ್ದು ಹೀಗೆ.

Karnataka Politics: ಬಿಜೆಪಿಯವರೇ ನಮ್ಮ ಮನೆ ಬಾಗಿಲು ಬಡಿದಿದ್ದರು ಎಂದ HDK
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಚಿವ ಸ್ಥಾನಕ್ಕಾಗಿ ಬೇರೆಯವರ ಹಾಗೆ ಒತ್ತಡ ಹಾಕುವುದಿಲ್ಲ. ನಾನು ಬೇರೆಯವರ ತರಹ ಸಭೆಯನ್ನೂ ಮಾಡುವುದಿಲ್ಲ ಎಂದು ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ಹೇಳಿದರು.

Karnataka Politics ಸಿದ್ದರಾಮಯ್ಯ ಭೇಟಿ ಮಾಡಿದ ಮಂಡ್ಯ ಜೆಡಿಎಸ್ ಶಾಸಕ, ಎಚ್‌ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ
ಶುಕ್ರವಾರ ಯಾದಗಿರಿಗೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತ, ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಒತ್ತಡ ಹಾಕುವುದಿಲ್ಲ. ಸಚಿವರನ್ನಾಗಿ ಮಾಡಿ ಎಂದೂ ಕೇಳುವುದಿಲ್ಲ. ಕಳೆದ ಬಾರಿ ಕೇಳಿದಾಗ ಆಗಿರಲಿಲ್ಲ, ಈಗ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು. ಸಚಿವ ಸಂಪುಟ ಪುನರಾಚನೆಯ ವೇಳೆ ಕಲ್ಯಾಣ ಕರ್ನಾಟಕಕ್ಕೆ ಒತ್ತು ನೀಡಬೇಕು. ರಾಜಕೀಯದಲ್ಲಿ ಸೀನಿಯಾರಿಟಿಗಿಂತ ಜಾತಿ, ಪ್ರಾದೇಶಿಕ ಆಧಾರದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಆರೋಪಿಸಿದರು.

click me!