ಸಿದ್ದರಾಮಯ್ಯ ಪರಮಾಪ್ತರ ಲಿಸ್ಟ್ ಸೇರಿದ ಜಮೀರ್/ ಸುದ್ದಿಗೋಷ್ಠಿಯಲ್ಲಿ ಪಕ್ಕದ ಚೇರ್ ನಲ್ಲೇ ಆಸೀನ/ ಬದಲಾದ ರಾಜಕಾರಣದ ವಾತಾವರಣ/ ದೂರವಾದ ಶಿಷ್ಯರ ಜಾಗಕ್ಕೆ ಹೊಸಬರು
ಬೆಂಗಳೂರು(ಡಿ. 21) ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಬದಲಾವಣೆ. ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರೂ ಅವರೇ ಮುಂದುವರಿಯಲಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು ಡಿಕೆ ಶಿವಕುಮಾರ್ ಅವರಿಗೆ ಪಟ್ಟ ನೀಡುವ ಸಾಧ್ಯತೆಗಳು ನಿಚ್ಚಳವಾಗಿದೆ.
ಇದೆಲ್ಲದರ ನಡುವೆ ಸಿದ್ದರಾಮಯ್ಯ ಆಪ್ತ ವಲಯಕ್ಕೆ ಹೊಸಬರ ಎಂಟ್ರಿಯಾಗಿದೆ. ಎಸ್‌ಟಿ ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್ ಸ್ಥಾನಕ್ಕೆ ನಿಧಾನವಾಗಿ ಜಮೀರ್ ಅಹಮದ್, ರಿಜ್ವಾನ್ ಅರ್ಷದ್ ಕಾಲಿಟ್ಟಿದ್ದಾರೆ.
ಸಿದ್ದು ಪಕ್ಕ ಜಮೀರ್: ಆರೋಗ್ಯ ಸುಧಾರಿಸಿಕೊಂಡ ಸಿದ್ದರಾಮಯ್ಯ ನಡೆಸಿದ ಸುದ್ದಿಗೋಷ್ಠಿ ವೇಳೆಯೂ ಜಮೀರ್ ಸಿದ್ದು ಪಕ್ಕದಲ್ಲಿಯೇ ಆಸೀನರಾಗಿದ್ದರು. ಇನ್ನು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಲು ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ ವೇಳೆಯೂ ಜಮೀರ್ ಪಕ್ಕದ ಕುರ್ಚಿಯಲ್ಲೇ ಇದ್ದರು.
ಸೆಕ್ಯೂರಿಟಿ ಗಾರ್ಡ್ ಆಗ್ತೆನೆ ಎಂದಿದ್ದ ಜಮೀರ್ ಬಿಎಸ್‌ವೈ ಇದ್ದ ವೇದಿಕೆಯಲ್ಲಿ ಏನ್ಮಾಡಿದ್ರು?
ಆಪರೇಶನ್ ಜೆಡಿಎಸ್; ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಅಂದು ಜೆಡಿಎಸ್ ಶಾಸಕರಾಗಿದ್ದ ಜಮೀರ್ ಮತ್ತು ತಂಡ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿತ್ತು. ಜಮೀರ್ ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಪದೇ ಪದೇ ಹೇಳಿಕೊಳ್ಳುತ್ತಲೇ ಬಂದಿದ್ದರು.
ಕಾಂಗ್ರೆಸ್‌ನಲ್ಲಿ ಮೂಲ VS ವಲಸೆ: ಒಂದರ್ಥದಲ್ಲಿ ಕಾಂಗ್ರೆಸ್ನಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎಂಬ ಆಗಾಗ ಸದ್ದು ಮಾಡುವ ಭಿನ್ನಮತ ಹುಟ್ಟಿಕೊಂಡು ಅದೆಷ್ಟೋ ವರ್ಷಗಳೇ ಕಳೆದಿವೆ. ವಲಸೆ ಕಾಂಗ್ರೆಸ್ಸಿಗರು ಸಹಜವಾಗಿಯೇ ಸಿದ್ದರಾಮಯ್ಯಗೆ ಜೈಕಾರ ಹಾಕುತ್ತಲೇ ಬಂದಿದ್ದಾರೆ.
ಎಚ್‌ಡಿಕೆ ಆ ಚಟದ ಬಗ್ಗೆ ಬಹಿರಂಗವಾಗಿ ಹೇಳಿದ ಜಮೀರ್!
ಸಚಿವ ಸ್ಥಾನ: ಕುಮಾರಸ್ವಾಮಿ ವಿರುದ್ಧ ಮನಸಿಗೆ ಬಂದ ರೀತಿಯಲ್ಲೆಲ್ಲಾ ಹೇಳಿಕೆ ನೀಡಿದ್ದ ಜಮೀರ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸೂಚನೆ ಸಿಕ್ಕಾಗ ಮೊದಲು ಮಾಡಿದ್ದ ಕೆಲಸವೇ ಸಿದ್ದರಾಮಯ್ಯ ಮನೆಗೆ ದೌಡಾಯಿಸಿದ್ದರು. ದೋಸ್ತಿ ಸರ್ಕಾರದಲ್ಲಿ ನಂತರ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದರು.
ಒಟ್ಟಿನಲ್ಲಿ ಸಿದ್ದರಾಮಯ್ಯ ಸುತ್ತಲಿದ್ದ ಒಂದು ಆಪ್ತವಲಯ ದೂರವಾಗಿದ್ದು ಇನ್ನೊಂದು ಆಪ್ತ ವಲಯ ಸಿದ್ಧವಾಗಿದೆ. ಜಮೀರ್ ಪರಮಾಪ್ತರಾಗುತ್ತಿದ್ದಾರೆ. ಮುಂದಿನ ರಾಜಕಾರಣದ ಲೆಕ್ಕಾಚಾರ ಏನಿದೆಯೋ?