ಸಿಎಂ ಬೆನ್ನ ಹಿಂದೆ ದೆಹಲಿಗೆ ಹೊರಟ ರೇಣುಕಾಚಾರ್ಯ ಮತ್ತು ತಂಡ!

By Suvarna News  |  First Published Jul 15, 2021, 4:05 PM IST

* ಮತ್ತೆ ದೆಹಲಿಗೆ ಹೊರಟ ರೇಣುಕಾ ಟೀಂ
* ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವುದೇ ಸರಿ ಅಲ್ಲ
* ಕೊರೋನಾದಿಂದ ಜನರನ್ನು ಕಾಪಾಡುವುದು ನಮ್ಮ ಹೊಣೆ
* ಕನಸು ಕಾಣುವವರು ಅದನ್ನೇ ಇಟ್ಟುಕೊಂಡು ಎಂಜಾಯ್ ಮಾಡಲಿ


ಬೆಂಗಳೂರು(ಜು. 15)  ಲೋಕಸಭಾ ಅಧಿವೇಶನ 19 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ 21-22 ರಂದು ಕೆಲವು ಶಾಸಕರು ದೆಹಲಿಗೆ ಹೋಗಬೇಕು ಅಂತಿದ್ದೇವೆ. ಸಿಎಂ ಅವರನ್ನು ಬದಲಾಯಿಸಬೇಕು ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ. ಬದಲಾವಣೆ ಮಾಡೋ ಅಧಿಕಾರ ಒಬ್ಬಿಬ್ಬರ ಕೈಯ್ಯಲ್ಲಿಲ್ಲ. ಅಂಥವರು ರಾಜ್ಯದ ಜನರ ಮುಂದೆ ವಿಲನ್ ಆಗ್ತಾರೆ  ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ಆಗಿ ಎರಡು ವರ್ಷ ಆಯ್ತು. ಒಳ್ಳೆಯ ಕೆಲಸ ಮಾಡ್ತಿದ್ದಾರೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಉತ್ತಮ ಕೆಲಸ ಮಾಡ್ತಿದ್ದಾರೆ. ರೇಣುಕಾಚಾರ್ಯ ನಂತ ಒಬ್ಬಿಬ್ಬರಿಂದ ಯಡಿಯೂರಪ್ಪ ಸಿಎಂ ಆಗಿಲ್ಲ. ಎಲ್ಲ ಶಾಸಕರು ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೂತೋ ದೆಹಲಿಯಲ್ಲಿ ಲಾಬಿ ಮಾಡಿದರೆ ಅದೆಲ್ಲ ಆಗಲ್ಲ. ಕೋವಿಡ್ ನಿಂದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಜವಾಬ್ದಾರಿ ಎಂದು ಹೊನ್ನಾಳಿ ಶಾಸಕರು ಹೇಳಿದ್ದಾರೆ.

Latest Videos

undefined

ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆಗೆ ಕಾಲ ಬಂತು

ವಿನಾಕಾರಣ ರಾಜಕಾರಣ ಮಾಡಬಾರದು ಅಂತ ವರಿಷ್ಟರು ಹೇಳಿದ್ದಾರೆ. ಏನೇ ಇದ್ದರೂ ನಾಲ್ಕು ಗೋಡೆಯ ಮಧ್ಯೆ ಮಾತನಾಡಬೇಕು. ಶಾಸಕರ ಸಹಿ ಸಂಗ್ರಹ ಮಾಡುವುದಕ್ಕೆ ಅರುಣ್ ಸಿಂಗ್ ಬರುವಾಗ ನಿರ್ಧರಿಸಿದ್ದು ಸತ್ಯ. ಆದರೆ ಯಡಿಯೂರಪ್ಪ ಹಾಗೂ ಅಧ್ಯಕ್ಷರು ಸಹಿ ಸಂಗ್ರಹ ಬೇಡ ಅಂತ ಖಡಾಖಂಡಿತವಾಗಿ ಹೇಳಿದ್ದರು. ಸಹಿ ಮಾಡಿಸಿದ್ದು ಸತ್ಯ, ತೋರಿಸಿದ್ದು ಸತ್ಯ. ಆದರೆ ಕೇಂದ್ರದ ವರಿಷ್ಠರಿಗೆ ಅದನ್ನು ನಾನು ಕೊಡ್ತೀನಿ ಅಂತ ಹೇಳಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಸಹಜವಾಗಿಯೇ ಸಿಎಂ ರಾಜ್ಯದ ಅಭಿವೃದ್ಧಿಗೋಸ್ಕರ ದೆಹಲಿಗೆ ಹೋಗಬಹುದು. ಆದರೆ ಅದನ್ನು ಕೇಳುವಷ್ಟು ದೊಡ್ಡವನೂ ನಾನಲ್ಲ. ನನ್ನ ಹತ್ರ ಹೇಳುವಷ್ಟು ಸಣ್ಣವರೂ ಅವರಲ್ಲ. ಯಾರು ಪದೇ ಪದೇ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರಿಗೆ ಈಗಾಗಲೇ ಹೇಳಿಯಾಗಿದೆ. ಕೆಲವರು ಹಗಲು ಕನಸು ಕಾಣ್ತಾರೆ. ಯಾರ್ ಯಾರಿಗೆ ಯಾವ ಕನಸು ಬೀಳತ್ತೋ...ಎಂಜಾಯ್ ಮಾಡಲಿ... ಎಂದು ಚಟಾಕಿ ಹಾರಿಸಿದರು. 

 

click me!