Priyank kharge: ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗ ಸಂಚು? ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ! ಹೇಳಿದ್ದೇನು?

Published : Jul 10, 2026, 12:35 PM ISTUpdated : Jul 10, 2026, 12:53 PM IST
Priyank kharge on rss and bjp

ಸಾರಾಂಶ

ಬೆಳಗಾವಿಯಲ್ಲಿಂದು ಆರೆಸ್ಸೆಸ್ ಸಭೆ ನಡೆಯುತ್ತಿರುವ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ರಾಮಮಂದಿರ, ಚುನಾವಣಾ ಆಯೋಗ, ಬಿಜೆಪಿ, ಎಸ್‌ಐಆರ್, ಬೆಳಗಾವಿ ಗಡಿ ಸಮಸ್ಯೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. 

ಬೆಳಗಾವಿ (ಜು.10): ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಸಂಘದ ಸರಸಂಘಚಾಲಕ ಡಾ.ಮೋಹನ್‌ ಭಾಗವತ್ ಸೇರಿ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಆರೆಸ್ಸೆಸ್ ಏನಾದ್ರೂ ಮಾಡಿಕೊಳ್ಳಲಿ ಆದ್ರೆ..

ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ಸಭೆ ನಡೆಸುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, 'ಅವ್ರು ಖಾಸಗಿಯಾಗಿ ಮೀಟಿ ಮಾಡಿಕೊಳ್ತಿದ್ದಾರೆ. ಏನಾದ್ರೂ ಮಾಡಿಕೊಳ್ಳಲಿ, ನಮಗೆ ತೊಂದರೆ ಇಲ್ಲ. ಟ್ರಾನ್ಸಫರೆನ್ಸಿ ತಗೊಂಡು ಬನ್ನಿ. ರಾಮ ಮಂದಿರದ ಹುಂಡಿ ಕಳ್ಳತನದ ಕ್ರೆಡಿಟ್ ಕೂಡ ತಗೊಳ್ಳಿ. ಬರೀ ಸೋಷಿಯಲ್ ಮೀಡಿಯಾದು ಹೇಳಿಕೆ ನೀಡೋದು ಅಲ್ಲ, ಹುಂಡಿ ಕಳ್ಳತನದಲ್ಲಿ ನಿಮಗೆಷ್ಟು ಪಾಲು ಬಂದಿದೆ, ಯಾರಾರು ಎಷ್ಟೆಷ್ಟು ಕೊಟ್ಟಿದ್ದಾರೆ ಅದನ್ನು ಹೇಳಲಿ, ಕಳ್ಳತನ ಮಾಡೋವರೆಗೆ ಯಾಕೆ ಸುಮ್ನಿದ್ರು? ಈಗ ಕ್ರಮದ ಬಗ್ಗೆ ಮಾತನಾಡ್ತಾರೆ ಎಂದು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗ ಸಂಚು: ಪ್ರಿಯಾಂಕ್ ಗಂಭೀರ ಅರೋಪ

ಇನ್ನು ರಾಜ್ಯ ಸರ್ಕಾರ ವಾಸಸ್ಥಳ ಪ್ರಮಾಣಪತ್ರ ನೀಡ್ತಿರೋದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ನಾವು ಶಾಸಕರು, ನಮ್ಮ ಕೆಲಸ ಶಾಸನ ಮಾಡೋದು. ಸರ್ಕಾರದಿಂದ ಅಧಿಕೃತವಾಗಿ ವಾಸಸ್ಥಳ ದೃಢೀಕರಣ ಪತ್ರ ಕೊಡ್ತೇವೆ. ನಾವೇನು ಪಕ್ಷದಿಂದ ಕೊಡ್ತಿದ್ದೇವಾ? ಎಂದು ಪ್ರಶ್ನಿಸಿದರು ಮುಂದುವರಿದು, SIR ನಲ್ಲಿರುವ ನ್ಯೂನತೆ ಸರಿಪಡಿಸಬೇಕು. ಒಂದೊಂದು ಪುಟ ಜಾಹೀರಾತು ಕೊಡ್ತಿದ್ದೀವಿ ಅಂದ್ರೆ ಎಸ್‌ಐಆರ್‌ಗೆ ನಮ್ಮ ಬೆಂಬಲ ಇದೆ ಅಂತಾ ಅಲ್ವಾ? ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದೆ. ಎಸ್‌ಐಆರ್‌ನಲ್ಲಿ ಯಾವುದೇ ಲಾಜಿಕ್ ಇಲ್ಲ, ಅರ್ಥವಿಲ್ಲ. ಅಡ್ಡಾದಿಡ್ಡಿಯಾಗಿ ಹೆಸರು ಡಿಲಿಟ್ ಮಾಡ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಇದೆಲ್ಲ ಆಯೋಗದ ಸಂಚು ಎಂದು ಗಂಭೀರ ಆರೋಪ ಮಾಡಿದರು.

ನೋಡ್ತೀರಿ ಇನ್ನು ಆರು ತಿಂಗಳಲ್ಲಿ ಏನೇನು ಆಗುತ್ತೆ ಅಂತಾ. ನಿಮ್ಮ ನಾಗರಿಕತ್ವ ಹೇಗೆ ಪ್ರೂವ್ ಮಾಡ್ತೀರಿ? ಪಾಸ್‌ಪೋರ್ಟ್, ಟ್ರಾವೆಲ್ ಡಾಕ್ಯುಮೆಂಟ್ ಅಂತಾ ಕೇಳ್ತಾರೆ ಇದು ಆಯೋಗ ನಡೆದುಕೊಳ್ಳೋ ರೀತಿನಾ? ಎಂದು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದರು.

ಮರಾಠಿಗರಿಗೆ ಖರ್ಗೆ ಎಚ್ಚರಿಕೆ

ಬಿಜೆಪಿ-ಜೆಡಿಎಸ್‌ನವ್ರು ನಾಯಕತ್ವ ಉಳಿಸಿಕೊಳ್ಳಲು ದೊಂಬರಾಟ ಮಾಡ್ತಿದ್ದಾರೆ. ಅಡ್ಡಮತದಾನದಿಂದ ಬಿಜೆಪಿಗೆ ಮುಖಭಂಗವಾಗಿದ್ರೂ ಇನ್ನೂವರೆಗೆ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಬಿಜೆಪಿಯಲ್ಲಿ ಲೀಡರ್‌ಶಿಪ್ ಬಗ್ಗೆ ಗೊಂದಲ ಇದೆ. ಯಾರು ಯಾರ ಮೇಲೆ ಕ್ರಮ ತಗೊಳ್ಳೋಕಾಗದಷ್ಟು ಲೀಡರ್‌ಗಳ ನಡುವೆ ಗೊಂದಲ ಇದೆ ಎಂದು ಲೇವಡಿ ಮಾಡಿದರು. ಇದೇ ವೇಳೆ ಮಹಾರಾಷ್ಟ್ರ ಗಡಿ ಕ್ಯಾತೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾಡಿನ ನೆಲ, ಜಲ, ಭಾಷೆ ವಚಾರದ್ಲಲಿ ಯಾರೇ ಕೈಯಾಡಿಸಿದರೂ ನಾವು ಸುಮ್ಮನೆ ಇರೋಲ್ಲ, ನಿಮಗಿಂತ ಹೆಚ್ಚು ಪ್ರೀತಿ ಕನ್ನಡ, ಕನ್ನಡಿಗರ ಬಗ್ಗೆ ನಮಗೆ ಪ್ರೀತಿ ಇದೆ. ನಾವು ಯಾರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಅನ್ನೋದು ಯೋಚನೆ ಮಾಡಬೇಕು. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಚೋದಿಸುವ ಮಾತನಾಡುವುದಲ್ಲ ಎಂದು ಎಂದು ಮಹಾರಾಷ್ಟ್ರ ನಾಯಕರಿಗೆ ಎಚ್ಚರಿಕೆ ನೀಡಿದರು.

ಯುಜಿಸಿ ಪ್ರಶ್ನೆ ಪತ್ರಿಕೆ ಸೋರಿಕೆ:

ಯುಜಿಸಿ ಪ್ರಶ್ನೆ ಪತ್ರಿಕೆ ಬಗ್ಗೆ ರಾಹುಲ್ ಗಾಂಧಿಯವರು ಆರೋಪ ಮಾಡಿದ್ದಲ್ಲ, ಅದ ಸತ್ಯ. ಯುಜಿಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಇದೇ ಮೊದಲಲ್ಲ, ಹತ್ತು ವರ್ಷದಲ್ಲಿ ಎಷ್ಟೊಂದು ಪೇಪರ್ ಲೀಕ್ ಆಗಿದೆ. ಇಂಥ ಸಮಸ್ಯೆಗಳಾದಾಗ ಮೋದಿ ದೇಶ ಬಿಟ್ಟು ಓಡಿಹೋಗ್ತಾರೆ. ಎಲ್ಲದಕ್ಕೂ ಕ್ರೆಡಿಟ್ ತಗೊಳ್ತಾರಲ್ಲ, ಇದಕ್ಕೂ ತಗೊಳ್ಳಲಿ. ಎಷ್ಟೊಂದು ಅಮಾಯಕ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇದಕ್ಕೆ ಯಾರು ಹೊಣೆ? ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯೋ ಶಕ್ತಿ ಪ್ರಧಾನಿ ಮೋದಿಗೆ ಇಲ್ವ? ಹಾಗಾದ್ರೆ ಧರ್ಮೇಂದ್ರ ಪ್ರಧಾನ್ ಅವರು ಮೋದಿಗಿಂತ ಪವರ್ ಫುಲ್ ಅಂತಾಯ್ತು? ಎಂದು ಲೇವಡಿ ಮಾಡಿದರು.

ಲವ್ ಜಿಹಾದ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಇನ್ನು ದಾವಣಗೆರೆ ಲವ್ ಜೆಹಾದ್ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ ಅವರು, ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ದಾಳಿ ಮಾಡೋ ಬದಲು ಪೊಲೀಸ್ ಠಾಣೆಗೆ ದೂರು ಕೊಡಿ, ಕಾನೂನು ಪ್ರಕಾರ ಏನಿದೆಯೋ ನಾವು ನೋಡ್ತೇವೆ. ಅದುಬಿಟ್ಟು ನೀವೇ ಪ್ಯಾರಲರ್ ಆಗಿ ಕ್ರಮ ತೆಗೆದುಕೊಂಡ್ರೆ ಅದನ್ನ ನಾವು ಒಪ್ಪೋದಿಲ್ಲ. ನಾವು ಕಾನೂನು ಪ್ರಕಾರ ಕ್ರಮ ತಗೊಳ್ತೇವೆ. ನೀವು ನೈತಿಕ ಪೊಲೀಸ್‌ಗಿರಿ ಮಾಡ್ತಿವಿ ಅಂದ್ರೆ ಅದ್ನನ ನಾವು ಒಪ್ಪೋಲ್ಲ. ಹೀಗಾಗಿ ಇಂಥ ಸಂದರ್ಭದಲ್ಲಿ ನಾವು ನಿಮ್ಮ ಮೇಲೆಯೂ ಕ್ರಮ ತಗೊಳ್ಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bengal Rajya sabha bypolls: ಬಂಗಾಳದಲ್ಲಿ ಮತ್ತೆ ಚುನಾವಣಾ ಕಾವು! ಬಿಜೆಪಿ ಗೆಲ್ಲುವ ಕುದುರೆ, ಮಮತಾಗೆ 'ಮಾಡು ಇಲ್ಲ ಮಡಿ' ಎಲೆಕ್ಷನ್!
ರಾಮ ಮಂದಿರ ಅಭಿಯಾನಕ್ಕೆ ಮಸಿ ಬಳಿಯುವ ಯತ್ನ? ಹುಂಡಿ ಕಳವು, ಎಲೆಕ್ಷನ್ ಮೇಲೆ ಎಫೆಕ್ಟ್?