ಮತ್ತೆ ಬಿಎಸ್‌ವೈ ಸಂಪುಟ ವಿಸ್ತರಣೆ? ಯಾರಿಗೆಲ್ಲಾ ಸಿಗುತ್ತೆ ಮಂತ್ರಿಗಿರಿ?

By Kannadaprabha NewsFirst Published Feb 13, 2020, 8:30 AM IST
Highlights

ಮತ್ತೆ ಬಿಎಸ್‌ವೈ ಸಂಪುಟ ವಿಸ್ತರಣೆ?| ಇನ್ನೂ 6 ಸ್ಥಾನ ಖಾಲಿ| ಹೈಕಮಾಂಡ್‌ ಒಪ್ಪಿದರೆ ಅಧಿವೇಶನಕ್ಕೂ ಮೊದಲೇ ವಿಸ್ತರಣೆ

ಬೆಂಗಳೂರು[ಫೆ.13]: ಬಜೆಟ್‌ ಅಧಿವೇಶನಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೂರನೇ ಹಂತದ ಸಂಪುಟ ವಿಸ್ತರಣೆ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಮಾತು ಆಡಳಿತಾರೂಢ ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

ಎಲ್ಲವನ್ನೂ ಮೀರಿ ಹೆಬ್ಬಾರ್‌ಗೆ ಮಂತ್ರಿಗಿರಿ ಸಿಕ್ಕಿದ್ದು ಹೇಗೆ! ದೇಶಪಾಂಡೆ ಅಧ್ಯಾಯ ಕೊನೆ?

ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ತೀರ್ಮಾನ ಕೈಗೊಳ್ಳದೇ ಇದ್ದರೂ ವರಿಷ್ಠರು ಅನುಮತಿ ನೀಡಿದರೆ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಉಳಿದಿವೆ. ಈ ಪೈಕಿ ಎರಡು ಸ್ಥಾನಗಳನ್ನು ಪಕ್ಷದ ಹಿರಿಯ ಶಾಸಕರಾದ ಉಮೇಶ್‌ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಅವರಿಗೆ ನೀಡುವ ಸಂಭವವಿದೆ. ಆದರೆ, ವರಿಷ್ಠರು ವಿಸ್ತರಣೆಗೆ ಹಸಿರು ನಿಶಾನೆ ತೋರುತ್ತಾರೆಯೇ ಅಥವಾ ಜೂನ್‌ನಲ್ಲಿ ವಿಧಾನಪರಿಷತ್‌ ಚುನಾವಣೆ ಮುಗಿಯುವವರೆಗೆ ಬ್ರೇಕ್‌ ಹಾಕುತ್ತಾರೆಯೇ ಎಂಬುದು ಕುತೂಹಲವಿದೆ.

ಬಯಸಿದ ಖಾತೆ ಸಿಗದ್ದಕ್ಕೆ ಬೇಸರ, ಖಾತೆ ಬೆನ್ನಲ್ಲೇ ಸಿಡಿದ ಅತೃಪ್ತಿ!

ಕಳೆದ ವಾರ ನಡೆದ ಸಂಪುಟ ವಿಸ್ತರಣೆ ವೇಳೆಯೇ ಉಮೇಶ್‌ ಕತ್ತಿ, ಲಿಂಬಾವಳಿ ಜೊತೆಗೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು ಸಂಪುಟ ಸೇರುವ ಬಗ್ಗೆ ಬಹುತೇಕ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಯೋಗೇಶ್ವರ್‌ ಸೇರ್ಪಡೆಗೆ ಪಕ್ಷದ ಶಾಸಕರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕೇವಲ ಅನ್ಯ ಪಕ್ಷಗಳಿಂದ ಬಂದ ಅರ್ಹ ಶಾಸಕರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಯಿತು.

ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!