
ಬೆಂಗಳೂರು[ಡಿ.11]: ಉಪಚುನಾವಣೆಯಲ್ಲಿ ಗೆದ್ದಿರಲಿ ಅಥವಾ ಸೋತಿರಲಿ, ಹಿಂದಿನ ಒಗ್ಗಟ್ಟು ಮುಂದುವರೆಸಲು ಅರ್ಹ ಮತ್ತು ಅನರ್ಹ ಶಾಸಕರು ನಿರ್ಧರಿಸಿದ್ದಾ
ಫಲಿತಾಂಶದ ಮರುದಿನವಾದ ಮಂಗಳವಾರ ರಾತ್ರಿ ಪಂಚತಾರಾ ಹೋಟೆಲ್‌ನಲ್ಲಿ ಔತಣ ಕೂಟದೊಂದಿಗೆ ಸಭೆ ನಡೆಸಿದ ಈ ಶಾಸಕರು ಬಿಜೆಪಿ ಸರ್ಕಾರದಲ್ಲೂ ಒಗ್ಗಟ್ಟಿನಿಂದ ಮುಂದುವರೆಯುವ ತೀರ್ಮಾನ ಕೈಗೊಂಡರು. ಸಚಿವ ಸ್ಥಾನ ಪಡೆಯುವುದಾಗಲಿ ಅಥವಾ ಮುಂದೆ ಖಾತೆಗಳ ಹಂಚಿಕೆಯಾ ಗಲಿ, ಎಲ್ಲದರಲ್ಲೂ ಜೊತೆಯಾಗಿ ಇರುವುದು ಸೂಕ್ತ. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಒಗ್ಗಟ್ಟು ಮುರಿದಲ್ಲಿ ದುರ್ಬಲರಾಗುತ್ತೇವೆ ಎಂಬ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಉಪಚುನಾವಣೆಯಲ್ಲಿ ಹನ್ನೊಂದು ಮಂದಿ ಗೆಲುವು ಸಾಧಿಸಿದ್ದಾರೆ. ಇಬ್ಬರು ಸೋಲುಂಡಿದ್ದಾರೆ. ಸೋತವರಿಗೂ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ಮುಂದೆ ಸಚಿವರನ್ನಾಗಿ ಮಾಡಬೇಕು ಎಂಬ ಪಟ್ಟು ಹಿಡಿಯಲು ಇವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಗೆದ್ದು ಅರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜು, ಬಿ.ಸಿ.ಪಾಟೀಲ್, ನಾರಾಯಣಗೌಡ, ಕೆ.ಗೋಪಾಲಯ್ಯ, ಮಹೇಶ್ ಕುಮಟಳ್ಳಿ, ಡಾ.ಕೆ.ಸುಧಾಕರ್ ಅವರಲ್ಲದೆ ಪರಾಜಿತ ಅಭ್ಯರ್ಥಿ ಎಚ್. ವಿಶ್ವನಾಥ್, ಅನರ್ಹ ಶಾಸಕರಾದ ಮುನಿರತ್ನ, ಪ್ರತಾಪ್‌ಗೌಡ ಪಾಟೀಲ್ ಅವರೂ ಇದ್ದರು. ಜತೆಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಎಸ್‌ಪಿ ಶಾಸಕ ಎನ್.ಮಹೇಶ್ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.