ಜಿಲ್ಲೆಗೊಬ್ಬರು ‘ಸಿಎಂ’ ಕೂಗೆದ್ದೀತು!| ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವ್ಯಂಗ್ಯ| ರಾಜ್ಯದಲ್ಲಿ ಮತ್ತಷ್ಟುಡಿಸಿಎಂ, ಸಚಿವ ಸ್ಥಾನಕಾಂಕ್ಷಿಗಳಿರುವುದನ್ನು ಕಾಣುತ್ತಿದ್ದೇವೆ| ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದರೂ ರಾಜಪ್ರಭುತ್ವ ಮಾತ್ರ ಇನ್ನೂ ಹೋಗಿಲ್ಲ
ದಾವಣಗೆರೆ[ಫೆ.03]: ಮೂವರು ಉಪ ಮುಖ್ಯಮಂತ್ರಿಗಳಿರುವ ರಾಜ್ಯದಲ್ಲಿ ಮತ್ತಷ್ಟುಡಿಸಿಎಂ, ಸಚಿವ ಆಕಾಂಕ್ಷಿಗಳಿದ್ದು, ಇದೇ ಸ್ಥಿತಿ ಮುಂದುವರಿದರೆ ಜಿಲ್ಲೆಗೊಬ್ಬ ಮುಖ್ಯಮಂತ್ರಿ ಕೇಳುವ ಕಾಲ ಬಂದರೂ ಅಚ್ಚರಿ ಇಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.
ನಗರದ ಕುಂದುವಾಡ ರಸ್ತೆ ಶಿವಗಂಗಾ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ರೋಟರಿ ಸಂಸ್ಥೆ 36ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಮಂಗಳೂರು ಹೀಗೆ ಪ್ರತಿ ಜಿಲ್ಲೆಗೆ ಮುಖ್ಯಮಂತ್ರಿ ಒತ್ತಡ ಬಂದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.
ಹುನಗುಂದ: ಅತ್ಯಾಚಾರಿಗೆ ಗಲ್ಲುಶಿಕ್ಷೆಯೇ ಆಗಲಿ ಎಂದ ಸಂತೋಷ ಹೆಗ್ಡೆ
ಶಾಸಕನಾಗುವ ಆಸೆ. ನಂತರ ಡಿಸಿಎಂ, ಮುಖ್ಯಮಂತ್ರಿ ಹಂಬಲ. ಹೀಗಾಗಿ ರಾಜ್ಯದಲ್ಲಿ ಮೂವರು ಡಿಸಿಎಂಗಳಿದ್ದಾರೆ. ಇನ್ನೂ ಕೆಲವರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದರು.
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದರೂ ರಾಜಪ್ರಭುತ್ವ ಬಿಟ್ಟು ಹೋಗಿಲ್ಲವೆಂಬುದಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆಯೇ ಸಾಕ್ಷಿಎಂದು ವಿಷಾದಿಸಿದರು.
'ಹಿಂದೆ ಜೈಲಿಗೋದವರನ್ನು ಬಹಿಷ್ಕರಿಸುತ್ತಿದ್ರು, ಆದರೆ ಇದೀಗ ಸ್ವಾಗತಿಸ್ತಿದ್ದಾರೆ'
ಜೈಲಲ್ಲಿದ್ದು ಜಾಮೀನಿನ ಮೇಲೆ ಹೊರ ಬಂದ ವ್ಯಕ್ತಿಗೆ ಮೆರವಣಿಗೆ ಮಾಡಿ, ಹೂವು, ಹಣ್ಣಿನ ಹಾರ, ತುರಾಯಿ ಹಾಕಿ ಕಳಂಕಿತನನ್ನು ವಿಜೃಂಭಿಸುತ್ತಾ, ಮೆರವಣಿಗೆ ಮಾಡುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಪೌರತ್ವ ಕಾಯ್ದೆ ತಿದ್ದುಪಡಿ ಪ್ರತಿಭಟನೆಗೆ ಪ್ರತಿಕ್ರಿಯಿಸಿ, ಪ್ರತಿಭಟನೆ ತಪ್ಪಲ್ಲ. ಆದರೆ, ಅದು ಹಿಂಸಾತ್ಮಕವಾಗಿರಬಾರದು. ಮೊದಲು ದೇಶದ ಕಾನೂನನ್ನು ಗೌರವಿಸಬೇಕು. ವಿರೋಧವಿದ್ದರೆ ಅದು ಕಾನೂನು ಚೌಕಟ್ಟಿನಲ್ಲಿ ಚರ್ಚೆಯಾಗಬೇಕು ಎಂದು ಅಭಿಪ್ರಾಯಪಟ್ಟರು.