ಸಂವಿಧಾನ ಕಾನೂನು ಬಗ್ಗೆ ಭಯವಿಲ್ಲದ ಸಿದ್ದರಾಮಯ್ಯಗೆ ಏನೆಂದು ಕರೆಯಬೇಕು?: ಸಿಟಿ ರವಿ

By Kannadaprabha News  |  First Published Oct 6, 2024, 11:42 AM IST

ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರಲ್ಲ ಎಂದು ಹೇಳುತ್ತಿದ್ದರಂತೆ. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಯಾರಿಗೂ ಹೆದರಲ್ಲ. ಬಿಜೆಪಿ-ಜೆಡಿಎಸ್‌ಗೂ ಹೆದರಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ ಕಾನೂನು, ಸಂವಿಧಾನಕ್ಕೆ ಹೆದರದ ಇವರಿಗೆ ಏನೆನ್ನಬೇಕು? ಸಿಟಿ ರವಿ ವಾಗ್ದಾಳಿ


ಚಿಕ್ಕಮಗಳೂರು (ಅ.6) : ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರಲ್ಲ ಎಂದು ಹೇಳುತ್ತಿದ್ದರಂತೆ. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಯಾರಿಗೂ ಹೆದರಲ್ಲ. ಬಿಜೆಪಿ-ಜೆಡಿಎಸ್‌ಗೂ ಹೆದರಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರನ್ನು ನಾವು ಏನೆಂದು ಕರೆಯಬೇಕು? ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಕಾನೂನು ಬಗ್ಗೆ ಭಯವಿಲ್ಲ. ನೈತಿಕ ಪ್ರಜ್ಞೆಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಆದರೆ ಸಿದ್ದರಾಮಯ್ಯ ಜನರಿಗಿಂತ ದೊಡ್ಡವರಾ ಎಂದು ಪ್ರಶ್ನಿಸಿದರು.

Tap to resize

Latest Videos

undefined

ಸಿಎಂ ಸಿದ್ದರಾಮಯ್ಯ ಜನ ತಿಳ್ಕೊಂಡಷ್ಟು ಪರಿಶುದ್ಧರೇನಲ್ಲ: ಸಿಟಿ ರವಿ ವಾಗ್ದಾಳಿ

ರಾಯಚೂರಿನಲ್ಲಿ ನಡೆದ ಸಿದ್ದರಾಮಯ್ಯ ಅವರ ಸ್ವಾಭಿಮಾನ ಸಮಾವೇಶ ಕುರಿತು ಮಾತನಾಡಿದ ಅವರು ಅಧಿಕಾರ, ಹಣ ಉಪಯೋಗಿಸಿಕೊಂಡು ಯಾವ ಸಮಾವೇಶ ಬೇಕಾದರೂ ಮಾಡಬಹುದು. ಆದರೆ ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಧ್ಯವಿಲ್ಲ. ಭ್ರಷ್ಟಾಚಾರ ಭ್ರಷ್ಟಾಚಾರವೇ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಅದು ಪ್ರಕೃತಿ ಧರ್ಮ ಎಂದು ಹೇಳಿದರು.

ಮತ್ತೆ ಮುನ್ನೆಲೆಗೆ ಬಂದ ಜಾತಿ ಜನಗಣತಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮುಂದುವರೆದರೆ ಸಮಸ್ಯೆ ಇಲ್ಲ. ಆದರೆ ಸಮಾಜ ಒಡೆಯಲು, ಜಾತಿ ಎತ್ತಿಕಟ್ಟಲು, ರಾಜಕೀಯಕ್ಕಾಗಿ ಜಾತಿಗಣತಿ ಮಾಡುವುದಾದರೆ ಯಾರೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು, ಸಿ.ಟಿ.ರವಿ ಸಿಎಂ ಆಗಬೇಕು: ಗಣಪತಿ ಹುಂಡಿಯಲ್ಲಿ ಬೇಡಿಕೆಯ ಚೀಟಿಗಳು

ಎಚ್.ಎಂ.ರೇವಣ್ಣ ಮೀಸಲಾತಿಗೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರೋಧವಿದೆ ಎಂದು ಆರೋಪಿಸಿದ್ದಾರೆ. ಆದರೆ ಮೀಸಲಾತಿಗೆ ವಿರೋಧ ಮಾಡಿದ್ದು ಆರ್‌ಎಸ್‌ಎಸ್ ಅಥವಾ ಬಿಜೆಪಿ ಅಲ್ಲ ಬದಲಾಗಿ ನೆಹರು. ಅವರು ರಾಹುಲ್ ಗಾಂಧಿ ಅವರ ಮುತ್ತಜ್ಜ, ಇಂದಿರಾಗಾಂಧಿ ತಂದೆ, ರಾಜೀವ್ ಗಾಂಧಿ ಅಜ್ಜ. ಅಭಿವೃದ್ಧಿ, ದಕ್ಷತೆಗೆ ಮೀಸಲಾತಿ ಅಡ್ಡಿಯಾಗುತ್ತೆಂದು ರಾಜ್ಯದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ನೆಹರು ಎಂದರು.

click me!