'ಲೋಟಸ್ ಮಹಲ್ ಕಮಲ ಕೀಳಲಾಗುತ್ತದೆಯೇ, ಹಸ್ತ ಕತ್ತರಿಸುವುದೆ?'

By Suvarna News  |  First Published Jun 24, 2021, 4:14 PM IST

* ಶಿವಮೊಗ್ಗದಲ್ಲಿ ಕೈ-ಕಮಲ ವಾರ್
* ವಿಮಾನ ನಿಲ್ದಾಣ ಪ್ರವೇಶ ದ್ವಾರಕ್ಕೆ ಬಳಸಿಕದ ಚಿಹ್ನೆ ಮತ್ತು ರಾಜಕಾರಣ
* ಕಮಲ ಅಭಿವೃದ್ಧಿಯ ಸಂಕೇತ ಎಂದು ಈಶ್ವರಪ್ಪ ವ್ಯಾಖ್ಯಾನ
* ಸಲ್ಲದ ರಾಜಕಾರಣವನ್ನು ಸಹಿಸುವುದಿಲ್ಲ


ಶಿವಮೊಗ್ಗ(ಜೂ. 24) ಕಮಲ ಅಭಿವೃದ್ಧಿಯ ಸಂಕೇತವಾಗಿದ್ದು ಅದನ್ನ ವಿಮಾನ ನಿಲ್ದಾಣದ ಪ್ರವೇಶ ದ್ವಾರಕ್ಕೆ ಬಳಸಲಾಗಿದೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಿಜೆಪಿ ತನ್ನ ಪಕ್ಷದ ಚಿಹ್ನೆ ಬಳಸಿದೆ ಇದರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು.

ಸುಂದರೇಶ್ ಹೇಳಿಕೆಗೆ ಟಾಂಗ್ ಕೊಟ್ಟಿರುವ ಸಚಿವ ಈಶ್ವರಪ್ಪ, ಕಾಂಗ್ರೆಸ್ ಎಲ್ಲಾದರಲ್ಲೂ ರಾಜಕೀಯ ಮಾಡುತ್ತಿದೆ. ಲಸಿಕೆ ವಿಚಾರವನ್ನೂ ಸಹ ಬಿಡಲಿಲ್ಲ. ಬಾಯಿಗೆ ಬಂದಂತೆ ಮಾತನಾಡಿತು. ಈಗ ವಿಮಾನ ನಿಲ್ದಾಣಕ್ಕೆ ಕಮಲದ ಗುರುತಿನ ಪ್ರವೇಶ ದ್ವಾರ ಬಳಸುವ ಮೂಲಕ ಬಿಜೆಪಿ ತನ್ನ ಪಕ್ಷದ ಚಿಹ್ನೆ ಸ್ಥಾಪಿಸುತ್ತಿದೆ ಎನ್ನುವ ಮೂಲಕ  ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

Latest Videos

undefined

ಸಿಪಿ ಯೋಗೇಶ್ವರ್‌ಗೆ ಸಿಎಂ ಬಹುದೊಡ್ಡ ಆಫರ್

ಇದು ಸಾರ್ವಜನಿಕರ ತೆರಿಗೆ ಹಣವೇ. ಆದರೆ ಕಮಲ ಅಭಿವೃದ್ಧಿಯ ಸಂಕೇತ, ಕಮಲದ ಬಳಕೆ ಇದ್ದರೆ ಅಭಿವೃದ್ಧಿ ಆಗಲಿದೆ. ಮನೆಗಳ ದೇವರ ಫೋಟೊದಲ್ಲಿ ಕಮಲ ಇದ್ದರೆ ಬಿಜೆಪಿಯ ಪಕ್ಷದ ಚಿಹ್ನೆ ಎಂದು ಕಿತ್ತು ಹಾಕಲು ಕಾಂಗ್ರೆಸ್ ಹೊರಟಂತಿದೆ. ಲೋಟಸ್ ಮಹಲ್ ಇದೆ ಅದರಲ್ಲಿ ಕಮಲ ಬಳಸಲಾಗಿದೆ ಎಂದು ಕಿತ್ತು ಹಾಕಲು ಸಾಧ್ಯವೇ? ಹಸ್ತವಿದ್ದರೆ ಅದನ್ನ ಕಡಿದು ಹಾಕಿ ಎಂದು ಹೇಳಲು ಬಿಜೆಪಿ ಮುಂದಾಗದು ಎಂದರು. 

click me!