ಡಿಕೆಶಿ ಇದ್ದ ಕೊಠಡಿಯನ್ನೇ ಪಡೆದ ಸೈನಿಕ,  ಸಲಹೆ ಕೊಟ್ಟಿದ್ದು ಯಾರಂತೆ!

Published : Jan 28, 2021, 04:32 PM IST
ಡಿಕೆಶಿ ಇದ್ದ ಕೊಠಡಿಯನ್ನೇ ಪಡೆದ ಸೈನಿಕ,  ಸಲಹೆ ಕೊಟ್ಟಿದ್ದು ಯಾರಂತೆ!

ಸಾರಾಂಶ

ತನ್ನ ರಾಜಕೀಯ ಬದ್ದ ವೈರಿ ಕೊಠಡಿಯನ್ನೇ ಪಡೆದಿರುವ ಸಚಿವ ಸಿ ಪಿ ಯೋಗೇಶ್ವರ್/ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಿಂದೆ ಪಡೆದಿದ್ದ  ಕೊಠಡಿಯನ್ನೇ ಪಡೆದಿರುವ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್/ ರಮೇಶ್ ಜಾರಕಿಹೋಲಿ ಸಲಹೆ ಮೇರೆಗೆ ಕೊಠಡಿ ಪಡೆದುಕೊಂಡ ಸೈನಿಕ/  ಕೊಠಡಿ ಸಂಖ್ಯೆ 336, 337 ಸಂಖ್ಯೆಯ ಕೊಠಡಿ ಪಡೆದ ಯೋಗೇಶ್ವರ್

ಬೆಂಗಳೂರು(ಜ. 28)  ತನ್ನ ರಾಜಕೀಯ ಬದ್ದ ವೈರಿ ಕೊಠಡಿಯನ್ನೇ ಸಚಿವ ಸಿ ಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಿಂದೆ ಪಡೆದಿದ್ದ  ಕೊಠಡಿಯನ್ನೇ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ.

ವಿಧಾನಸೌಧದ ಕೊಠಡಿ ಸಂಖ್ಯೆ 336, 337 ಸಂಖ್ಯೆಯ ಕೊಠಡಿ ಪಡೆದ ಯೋಗೇಶ್ವರ್ ಪೂಜೆ ನೆರವೇರಿಸಿದ್ದಾರೆ.  ಈ ಹಿಂದೆ 20111 ರಲ್ಲಿ ಸಚಿವರಾಗಿದ್ದಾಗ ಈ ಕೊಠಡಿಯಲ್ಲೇ ಕರ್ತವ್ಯ. ನಿರ್ವಹಿಸಿದ್ದ ಯೋಗೇಶ್ವರ್ ಈಗ ಮತ್ತೊಮ್ಮೆ ಅಧಿಕಾರ ಸ್ಥಾಪಿಸಿದ್ದಾರೆ.

ಪರಿಷತ್‌ ಗಾಗಿ ಒಂದಾದ ಬಿಜೆಪಿ-ಜೆಡಿಎಸ್

ಈ ಕೊಠಡಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈಗಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯನಿರ್ವಹಿಸಿದ್ದರು. ಸಹಜವಾಗಿಯೇ ಸಿಪಿ ಯೋಗೇಶ್ವರ್ ಈ ಕೊಠಡಿ ಪಡೆದಿರೋದಕ್ಕೆ ಕಾರಣ ಏನು..?  ಎಂಬ ಪ್ರಶ್ನೆ ಸಹ ಮೂಡಿದೆ.

ರಮೇಶ ಜಾರಕಿಹೊಳಿ ಸೂಚನೆಯಂತೆ ಸಚಿವ ಸಿಪಿ ಯೋಗೇಶ್ವರ್ ಈ ಕೊಠಡಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  ಇನ್ನೊಂದು ಕಡೆ ಡಿಕೆಶಿ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆ ಪಡೆದಿರುವ ಸಚಿವ ರಮೇಶ್ ಜಾರಕಿಹೊಳಿ ಪಡೆದುಕೊಂಡು ಹಲವು ದಿನ ಕಳೆದಿದೆ. ಇದೀಗ ತನ್ನ ಆಪ್ತನಿಗೆ ಡಿಕೆಶಿ ಇದ್ದ ಕೊಠಡಿ ಕೊಡಿಸಿದ ರಮೇಶ್ ಜಾರಕಿಹೊಳಿ ಕೊಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಾಯುಕ್ತ ಬಲೆಗೆ ಅಬಕಾರಿ ಅಧಿಕಾರಿಗಳು: ಪುತ್ರ ವಿನಯ್ ತಿಮ್ಮಾಪುರ ಹೆಸರು ಕೇಳಿಬಂದಿದ್ದಕ್ಕೆ ಸಚಿವ ಗರಂ!
ಜಿಟಿಡಿಗೆ ಎಂಟ್ರಿ ಇಲ್ಲ, ಮೈತ್ರಿಯಲ್ಲಿ ಚಾಮರಾಜ ಕ್ಷೇತ್ರದ ಬೇಡಿಕೆ, ದೇವೇಗೌಡರ ಜತೆ ಸಭೆ ಬಳಿಕ ಸಾ.ರಾ. ಮಹೇಶ್ ಹೇಳಿಕೆ