ರಾಜ್ಯದಲ್ಲಿ ಇತ್ತೀಚೆಗೆ ಬಹುತೇಕ ಎಲ್ಲ ಸಚಿವರಿಗೂ ಉಸ್ತುವಾರಿ ಸ್ಥಾನ ಹಂಚಿಕೆ| ಯೋಗೇಶ್ವರ್ ಅವರಿಗೆ ಮಾತ್ರ ಈವರೆಗೆ ಉಸ್ತುವಾರಿ ಜಿಲ್ಲೆ ಹಂಚಿಕೆ ಮಾಡಿಲ್ಲ| ರಾಮನಗರದ ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟ ಯೋಗೇಶ್ವರ್| ಅರುಣ್ ಸಿಂಗ್‌ರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಯೋಗೇಶ್ವರ್|
ರಾಮನಗರ(ಮೇ.08): ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಸಚಿವ ಸಿ.ಪಿ. ಯೋಗೇಶ್ವರ್ ಅವರು ಶುಕ್ರವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಬಹುತೇಕ ಎಲ್ಲ ಸಚಿವರಿಗೂ ಉಸ್ತುವಾರಿ ಸ್ಥಾನ ಹಂಚಿಕೆ ಮಾಡಲಾಗಿದೆ. ಆದರೆ, ಯೋಗೇಶ್ವರ್ ಅವರಿಗೆ ಮಾತ್ರ ಈವರೆಗೆ ಉಸ್ತುವಾರಿ ಜಿಲ್ಲೆ ಹಂಚಿಕೆ ಮಾಡಿಲ್ಲ. ರಾಮನಗರದ ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯೋಗೇಶ್ವರ್ ಅವರು ಈ ಸಂಬಂಧ ಬೇಸರದಲ್ಲಿದ್ದಾರೆ ಎನ್ನಲಾಗುತ್ತಿದೆ.
ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ: ವಾರದಲ್ಲಿ ಇದು 2ನೇ ಸಲ
ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಅವರು ಅರುಣ್ ಸಿಂಗ್‌ರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.