ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ಲಾಕ್‌ಡೌನ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಯಾದಗಿರಿ, (ಮೇ.07): ರಾಜ್ಯದಲ್ಲಿ ಕೊರೋನಾ ಮಿತಿ ಮೀರುತ್ತಿದೆ. ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಕೊರೋನಾ ಕಂಟ್ರೋಲ್‌ಗೆ ಬರುತ್ತಿಲ್ಲ. ಇದರಿಂದ ಆಡಳಿತ ಪಕ್ಷದ ನಾಯಕರುಗಳಿಗೆ ಕರ್ನಾಟಕ ಲಾಕ್‌ಡೌನ್‌ಗೆ ಮನವಿ ಮಾಡುತ್ತಿದ್ದಾರೆ.
ಹೌದು... ಈ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದು, ನಿಮ್ಮ ಕೈ ಮಗಿತಿವಿ ಲಾಕ್‌ಡೌನ್ ಮಾಡಿ. ನಮಗೆ ಕೊಟ್ಟ ಅನುದಾನ ಎಲ್ಲಾ ವಾಪಸ್ ತಗೋಳಿ ಬೇಕಿದ್ರೆ. ಆದ್ರೆ ಬಡವರಿಗೆ ರೇಶನ್ ಕೊಡಿ. ಇಲ್ಲವೇ ಹಣ ಹಾಕಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
undefined
ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ: ವಾರದಲ್ಲಿ ಇದು 2ನೇ ಸಲ
ಸರ್ಕಾರಕ್ಕೆ ಸಾಲ ಆದ್ರೂ ಪರವಾಗಿಲ್ಲ ಲಾಕ್ ಡೌನ್ ಮಾಡಿ. ಜನತಾ ಕರ್ಫ್ಯೂದಿಂದ ನಾವು ಉಳಿಯುವುದಿಲ್ಲ. ಲಾಕ್ ಡೌನ್ ಮಾಡಿದ್ರೆ ಮಾತ್ರ ನಾವು ಉಳಿಯುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಡವರು ಸಾಲ ಮಾಡೋದು ಆಸ್ಪತ್ರೆ ಸೇರಿದಾಗ, ಮದುವೆ ಮಾಡಿದಾಗ ಮಾತ್ರ. ನಾವು ಆಸ್ಪತ್ರೆ ಸೇರುತ್ತಿದ್ದೆವೆ ಸಾಲ ಆದ್ರೂ ಚಿಂತೆಯಿಲ್ಲ ದಯವಿಟ್ಟು ನಾಲ್ಕು ವಾರಗಳ ಕಾಲ ಲಾಕ್ ಡೌನ್ ಮಾಡಿ ಎಂದು ಎಂದು ಒತ್ತಾಯಿಸಿದರು.