ಬಿಜೆಪಿ ಪಂಚ ನಾಯಕರಿಗೆ ರಾಜಕೀಯ ಮರುಜೀವ ಕೊಟ್ಟ ಲೋಕಸಭಾ ಚುನಾವಣೆ

By Sathish Kumar KH  |  First Published Jun 4, 2024, 2:09 PM IST

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ನಾಯಕರಾಗಿದ್ದರೂ ಸೂತು ಸುಣ್ಣವಾಗಿದ್ದ ಬಿಜೆಪಿಯ ಪಂಚ ನಾಯಕರಿಗೆ ಲೋಕಸಭಾ ಚುನಾವಣೆ ಮರುಜೀವ ಕೊಟ್ಟಿದೆ.


ಬೆಂಗಳೂರು (ಜೂ 04): ರಾಜ್ಯದಲ್ಲಿ ಕಳೆದ ವರ್ಷ 2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ನಾಯಕರಾಗಿದ್ದರೂ ಸೂತು ಸುಣ್ಣವಾಗಿದ್ದ ಬಿಜೆಪಿಯ ಪಂಚ ನಾಯಕರಿಗೆ ಲೋಕಸಭಾ ಚುನಾವಣೆ ಮರುಜೀವ ಕೊಟ್ಟಿದೆ.

ರಾಜ್ಯದ ವಿಧಾನಸಭಾ ಚುನಾವನೆಯಲ್ಲಿ ಸೋತು ಕೆಲವರು ಮನೆ ಸೇರಿದ್ದರೆ, ಇನ್ನು ಕೆಲವರು ವಿಧಾನ ಪರಿಷತ್‌ನಲ್ಲಿ ಪುನಃ ರಾಜಕೀಯ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದರು. ಆದರೂ, ಬಿಜೆಪಿ ನಾಯಕರು ತಮ್ಮ ಪ್ರಭಾವ ಕಡಿಮೆಯಾಗಿಲ್ಲ ಚಾನ್ಸ್ ಕೊಟ್ಟು ನೋಡಿ ಎಂದು ಬಿಜೆಪಿ ಹೈಕಮಾಂಡ್‌ನಿಂದ ಟಿಕೆಟ್‌ ಗಿಟ್ಟಿಸಿಕೊಂಡು ಲೋಕಸಭಾ ಅಖಾಡದಲ್ಲಿ ಸ್ಪರ್ಧಿಸಿದವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಬಿಜೆಪಿಯ ಪ್ರಮುಖ ನಾಯಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ವಿ.ಸೋಮಣ್ಣ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿ ರಾಜಕೀಯ ಮರುಜೀವ ಪಡೆದುಕೊಂಡಿದ್ದಾರೆ.

Tap to resize

Latest Videos

undefined

Mandya Lok Sabha elections: ಜೆಡಿಎಸ್ ಭದ್ರಕೋಟೆ ಮಂಡ್ಯ ಉಳಿಸಿಕೊಂಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ದೇಶದ 18ನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 2 ಹಂತದ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಏ.26ರಂದು 14 ಕ್ಷೇತ್ರಗಳಾದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮತದಾನವಾಗಿದೆ. ಎರಡನೇ ಹಂತದಲ್ಲಿ ಮೇ 7ರಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಸೇರಿ 14 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ರಾಜ್ಯದಲ್ಲಿ ಒಟ್ಟು 5,47,25,675 ಮತದಾರರಿದ್ದು, ಈ ಪೈಕಿ 3,86,57,725 ಜನರು ಮತದಾನ ಮಾಡುವ ಮೂಲಕ ಶೇ.70.64 ಜನರು ಮತ ಚಲಾಯಿಸಿದ್ದಾರೆ. ಮತದಾನ ನಡೆದ ಒಂದು ತಿಂಗಳ ಬಳಿಕ ಇಂದು (ಜೂ.4ರಂದು) ಫಲಿತಾಂಶ ಪ್ರಕಟವಾಗುತ್ತಿದೆ. ಇದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶ ಅತ್ಯಂತ ಕುತೂಹಲವನ್ನು ಕೆರಳಿಸಿದೆ. ಮತ್ತೊಂದೆಡೆ ಮೈಸೂರಿನ ಮಹಾರಾಜರು ಸ್ಪರ್ಧಿಸಿದ ಕ್ಷೇತ್ರ, ಅಶ್ಲೀಲ ವಿಡಿಯೋ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ ಹಾಸನ ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಹೆಚ್ಚು ಜನರ ಚಿತ್ತ ನೆಟ್ಟಿದೆ. ಸುಮಾರು 10ಕ್ಕೂ ಅಧಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು ತಮ್ಮ ಸಹೋದರರು, ಮಕ್ಕಳು, ಪತ್ನಿಯರನ್ನು ಕಣಕ್ಕಿಳಿಸಿದ್ದು 2ನೇ ತಲೆಮಾರಿನ ರಾಜಕೀಯ ಬೆಳೆಸಲು ಮುಂದಡಿಯಿಟ್ಟಿದ್ದಾರೆ.

click me!