ಬಿಜೆಪಿಯ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರು 40 ವರ್ಷದ ರಾಜಕೀಯ ಅನುಭವ, ಮೋದಿ ಬಲದೊಂದಿಗೆ ಲೋಕಸಭೆಗೆ ಹೋಗಲು ಸಿದ್ಧರಾಗಿದ್ದಾರೆ. ಇವರಿಗೆ ಮಾಜಿ ಶಾಸಕ ರಾಜು ಅಲಗೂರು ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ವಿಜಯಪುರ ಲೋಕಸಭಾ ಮತದಾನದ ಲೈವ್ ಅಪ್‌ಡೇಟ್ಸ್: ಸಂಜೆ 5 ಗಂಟೆವರೆಗೆ ಕೇವಲ 60.95 ಮತದಾನ
ವಿಜಯಪುರ (ಮೇ 07): ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವುದೇ ಇಲ್ಲ ಎಂದು ಹೇಳಲಾಗುತ್ತಿದ್ದರೂ, ಭರ್ಜರಿ ಲಾಭಿಯಿಂದ ಟಿಕೆಟ್ ಗಿಟ್ಟಿಸಿದ ರಮೇಶ್ ಜಿಗಜಿಣಗಿ ಪುನಃ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರಿಗೆ ಸೆಡ್ಡು ಹೊಡೆಯಲು ರಾಜು ಅಲಗೂರು ಅವರು ಕಣಕ್ಕಿಳಿದಿದ್ದು, ಮತದಾರರ ಆಶೀರ್ವಾದಕ್ಕೆ ಕಾತರರಾಗಿದ್ದಾರೆ. ಗೆಲುವಿನ ವಿಜಯಮಾಲೆ ಯಾರಿಗೆ ಸಿಗಲಿದೆ ಎನ್ನುವುದು ಜೂ.4ರಂದು ತಿಳಿಯಲಿದೆ.
ವಿಜಯಪುರ ಲೋಕಸಭಾ ಕ್ಷೇತ್ರವು ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ 40 ವರ್ಷದ ಅನುಭವವಿದ್ದು, ಮಾಜಿ ಕೇಂದ್ರ ಸಚಿವರೂ ಆಗಿದ್ದಾರೆ. ಈಗ ಮೋದಿ ಹಾಗೂ ಬಿಜೆಪಿ ಅಭಿವೃದ್ಧಿ ಕಾರ್ಯಗಳ ಬಲವೂ ಇದೆ. ಇನ್ನು ಪರಿಶಿಷ್ಟ ಜಾತಿ ಬಲಗೈ ಸಮುದಾಯದ ರಾಜು ಅಲಗೂರು ಅವರು ಈಗಾಗಲೆ 2 ಬಾರಿ ಶಾಸಕರಾಗುದ್ದರು. ಜೊತೆಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಜನಪ್ರಿಯರಾಗಿರುವ ಅವರು ಲೋಕಸಭೆಗೆ ಹೋಗಲು ಸಜ್ಜಾಗಿದ್ದಾರೆ. ಆದರೆ, ಯಾರಿಗೆ ವಿಜಯಮಾಲೆ ಸಿಗಲಿದೆ ಎನ್ನುವುದು ಜೂ.4ರಂದು ತಿಳಿಯಲಿದೆ.
India General Elections 2024 Live: ರಾಜ್ಯದಲ್ಲಿ ಕೊನೇ ಹಂತದ ಮತದಾನ, ಹಕ್ಕು ಚಲಾಯಿಸಿದ ಮೋದಿ ...
ವಿಜಯಪುರ ಜಿಲ್ಲೆಯ ಮತದಾರರ ವಿವರ:
ಒಟ್ಟು ಅಭ್ಯರ್ಥಿಗಳು - 8
ಒಟ್ಟು ಮತದಾರರು - 19,46,090
ಪುರುಷ ಮತದಾರರು - 9,87,974
ಮಹಿಳಾ ಮತದಾರರು - 9,57,906
ಇತರೆ - 210
ಒಟ್ಟು ಮತಗಟ್ಟೆಗಳು - 2,086
ವಿಜಯಪುರದ ಮತದಾನ ಮಾಡಿದ ವಿಡಿಯೋ ವೈರಲ್: ಮತದಾನ ಮಾಡಿ ದೃಶ್ಯವನ್ನ ಮೊಬೈಲ್‌ನಲ್ಲಿ ಚಿತ್ರಿಕರಿಸಿದ ಕೆಲವರು ಗುಪ್ತ ಮತದಾನವನ್ನು ಬಹಿರಂಗ ಪಡಿಸಿದ್ದಾರೆ. ಸ್ವತಃ ರಾಜಕೀಯ ಮುಖಂಡರ ಬೆಂಬಲಿಗರು ಸೇರಿದಂತೆ ಹತ್ತಾರು ಜನರಿಂದ ಗುಪ್ತ ಮತದಾನ ಬಹಿರಂಗವಾಗಿದೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ವೇಳೆ ದೃಶ್ಯ ಚಿತ್ರಿಕರಿಸಿಕೊಂಡ ಕೆಲ ಮತದಾರರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ್ದಲ್ಲದೇ, ಅದೆ ವಿಡಿಯೋ ಸ್ಟೇಟಸ್ ಹಾಕಿಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರಿಗೆ ಮತಹಾಕಿ ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರಕ್ಕೆ ಅಶ್ಲೀಲವಾಗಿ ಸನ್ನೆ ಮಾಡಿದ ವಿಡಿಯೋ ಸಹ ವೈರಲ್ ಆಗಿದೆ.
ಶಿವಮೊಗ್ಗ ಗಂಡನ ಸಾವಿಗೆ ಮತದಾನ ಸಮರ್ಪಿಸಿದ ಹೆಂಡತಿ; ಶವ ಬಿಟ್ಟುಬಂದು ಮತ ಹಾಕಿದ ಮಹಿಳೆ
ಬಿಜಾಪುರದಲ್ಲಿ ಸಂಜೆ 5 ಗಂಟೆವರೆಗೆ ವಿಧಾನಸಭಾ ಕ್ಷೇತ್ರವಾರು ಎಷ್ಟು?
ವಿಜಯಪುರ ನಗರ ಶೇ. 58.82
ಬಬಲೇಶ್ವರ ಶೇ.66.51
ನಾಗಠಾಣ ಶೇ.60.69
ಬಸವನಬಾಗೇವಾಡಿ ಶೇ.64.97
ಸಿಂಧಗಿ - ಶೇ.58.95
ಮುದ್ದೇಬಿಹಾಳ - ಶೇ.60.04
ದೇವರಹಿಪ್ಪರಗಿ ಶೇ.57.49
ಇಂಡಿ - ಶೇ.61.15
ಒಟ್ಟು ಶೇ.60.95 ಮತದಾನ