ಮೂವರು ಸಚಿವರು ಒಟ್ಟಿಗೆ ಕಾಫಿ ಕುಡಿದಿದ್ದೇವೆ; ಯಾವುದೇ ಮೀಟಿಂಗ್ ನಡೆಸಿಲ್ಲ: ಗೃಹ ಸಚಿವ ಸ್ಪಷ್ಟನೆ

By Ravi Janekal  |  First Published Oct 3, 2024, 1:18 PM IST

ನಾನು ಮೈಸೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ್ದು ನಿಜ. ಆದರೆ ಯಾವುದೇ ಮೀಟಿಂಗ್ ಮಾಡಿಲ್ಲ. ಕಾಫಿ ಕುಡಿದಿದ್ದೇವೆ, ಊಟ ಮಾಡಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಸ್ಪಷ್ಟನೆ ನೀಡಿದರು.


ತುಮಕೂರು (ಅ.3): ನಾನು ಮೈಸೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ್ದು ನಿಜ. ಆದರೆ ಯಾವುದೇ ಮೀಟಿಂಗ್ ಮಾಡಿಲ್ಲ. ಕಾಫಿ ಕುಡಿದಿದ್ದೇವೆ, ಊಟ ಮಾಡಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಸ್ಪಷ್ಟನೆ ನೀಡಿದರು.

ಮೈಸೂರು ದಸರಾ ಉದ್ಘಾಟನೆ ವೇಳೆ ಮೂವರು ಸಚಿವರ ಜೊತೆ ಮೀಟಿಂಗ್ ನಡೆಸಿದ ಕುರಿತು  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ನಾವು ಮಹದೇವಪ್ಪ ಅವರ ಮನೆಗೆ ಹೋಗಿದ್ದೆವು. ಮುಖ್ಯಮಂತ್ರಿಗಳನ್ನು ಬೇರೆ ಬೇರೆ ವಿಚಾರದಲ್ಲಿ ಭೇಟಿಯಾಗಬೇಕಿತ್ತು.  ಅದಕ್ಕಾಗಿ ಮಹದೇವಪ್ಪ ಅವರ ಮನೆಗೆ ಹೋಗಿದ್ದೆ. ನಾನು ನಿಮ್ಮ ಮನೆಯ ಬಳಿ ಬರುತ್ತೇನೆ ಒಟ್ಟಿಗೆ ಸಿಎಂ ಭೇಟಿ ಹೋಗೋಣ ಅಂತಾ ಹೇಳಿದ್ದೆ. ಹೀಗಾಗಿ  ಮನೆಗೆ ಹೋಗಿದ್ದೆ. ಜೊತೆಗೆ ಅಲ್ಲೇ ಪಕ್ಕದಲ್ಲಿ ಸತೀಶ್ ಜಾರಕಿಹೊಳಿ ಮನೆಯೂ ಇದೆ. ನಾನು ಬರುತ್ತೇನೆ ಎಂದು ಅವರೂ ಬಂದ್ರು ಎಂದರು.

Tap to resize

Latest Videos

undefined

ಮೈಸೂರು ದಸರಾ ಉದ್ಘಾಟನೆ ಮಾಡಿ 5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ!

ನಾವು ಮೂವರು ಮಾತನಾಡಿಕೊಂಡು ಪವರ್ ಕಾರ್ಪೊರೇಷನ್ ನಲ್ಲಿದ್ದ ಸಿಎಂ ಅವರನ್ನು ಭೇಟಿ ಮಾಡಲು ಹೋದೆವು. ಅದಕ್ಕೆ ಬೇರೆ ರೀತಿ ಅರ್ಥೈಸುವ ಅಗತ್ಯ ಇಲ್ಲ.  ಸಿಎಂ ಸ್ಥಾನದ ಕುರಿತಾದ ಯಾವುದೇ ಚರ್ಚೆಗಳು ನಡೆದಿಲ್ಲ ಅಂತ ಕ್ಲಾರಿಫೈ ಮಾಡುತ್ತಿದ್ದೇನೆ. ನಾವು ಸಿಎಂ ಗೆ ಮಾರಲ್ ಆಗಿದ್ದೇವೆ, 136 ಶಾಸಕರು ಇದ್ದೇವೆ. ನಾವೆಲ್ಲ ಸಚಿವರು ಸಿಎಂ ಅವರ ಜೊತೆ ಇದ್ದೇವೆ. ಅದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಯಾರೂ ಬೇರೆ ಇದ್ದೇವೆ ಎಂದು ಹೇಳಿಲ್ಲವಲ್ಲ. ಕಾಫಿ ಕುಡಿಯಲು ಹೋದರೆ ಅದು ಸಭೆ ಆಗಲ್ಲ. ಒಬ್ಬರಿಬ್ಬರು ಹೋದರೆ ಅದು ಅದೇನು ವಿಶೇಷತೆ ಏನಲ್ಲ. ಕನಿಷ್ಠ ಒಂದು 10 ಜನನಾದ್ರೂ ಸೇರಿದ್ರೆ ಅದನ್ನ ನೀವು ಅರ್ಥೈಸಬಹುದು ಎಂದರು.

ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಾಸಕ ಜಿಟಿ ದೇವೇಗೌಡ! ಬಿಜೆಪಿ ಜೆಡಿಎಸ್ ದೋಸ್ತಿ ನಾಯಕರ ವಿರುದ್ಧ ವಾಗ್ದಾಳಿ!

ಇನ್ನು ಮೂಲ ಮತ್ತು ವಲಸಿಗ ಕಾಂಗ್ರೆಸ್ ಎಂಬ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವರು, ಸುರೇಶ್ ಗೌಡ ಯಾರು, ಅವರೇನು ಕಾಂಗ್ರೆಸ್ ಪಕ್ಷದವರಾ? ಬೆಂಕಿ ಹಚ್ಚುವ ಕೆಲಸ ಅವರದು. ಅದಕ್ಕೆ ಅವರು ಆ ರೀತಿ ಹೇಳಿದ್ದಾರೆ.  ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಎಷ್ಟು ವರ್ಷಗಳಾಯಿತು. ಎರಡು ಸರಿ ಸಿಎಂ ಆಗಿದ್ದಾರೆ, ಇನ್ನು ಹೇಗೆ ಹೊರಗಿನವರು ಆಗುತ್ತಾರೆ? ಅವರಿಗೆ ಅರ್ಥ ಆಗಿಲ್ಲ ಅಷ್ಟೆ ಅವರ ಮಾತಿಗೆ ಮಹತ್ವ ಕೊಡಬೇಕಿಲ್ಲ ಎಂದರು. ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ಆಗಿದೆ. ಪೊಲೀಸರು ಏನು ಕ್ರಮ ತಗೊಳ್ಬೇಕೋ ಅದನ್ನ ತೆಗೆದುಕೊಳ್ತಾರೆ ಎಂದರು.

click me!