ನಾವು ಗ್ಯಾರಂಟಿ ಕೊಟ್ಟಿದ್ದೇವೆ ಅಂತಾ ಟೀಕೆ ಮಾಡುತ್ತಿದ್ದರು. ಆದರೆ ಈಗ ಅವರೇ ಗ್ಯಾರಂಟಿ ನೀಡಲು ಹೊರಟಿದ್ದಾರೆ. ನಮ್ಮನ್ನು ಕಾಪಿ ಮಾಡ್ತಿದ್ದಾರೆಂದು ಹೇಳಬೇಕಾಗುತ್ತೆ. ಬಿಜೆಪಿ ಗ್ಯಾರಂಟಿಗಳನ್ನ. ಜನರು ಒಪ್ಪೋದು ಬಿಡೋದು ಜನಗಳ ತೀರ್ಮಾನಕ್ಕೆ ಬಿಡೋಣ ಎಂದು ಗೃಹ ಸಚಿವ ಪರಮೇಶ್ವರ ವ್ಯಂಗ್ಯ ಮಾಡಿದರು.
ತುಮಕೂರು (ಏ.14): ಕುಮಾರಸ್ವಾಮಿಯವರು ರಾಜ್ಯದ ಸಿಎಂ ಆಗಿದ್ದವರು. ನಮ್ಮ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಮಾತಾಡಲಿ, ನಮ್ಮ ಯೋಜನೆಗಳು ಸರಿಯಿಲ್ಲ ಅಂತಾ ಬೇಕಾದರೆ ಹೇಳಲಿ. ಆದರೆ ರಾಜ್ಯದ ತಾಯಂದಿರು ದಾರಿ ತಪ್ಪಿದ್ದಾರೆಂದು ಹೇಳಿದ್ದಾರೆ. ಯಾವ ಅರ್ಥದಲ್ಲಿ ಹೇಳಿದ್ದಾರೆ. ಹಳ್ಳಿ ಭಾಷೆಯಲ್ಲಿ ಅದಕ್ಕೆ ಕೆಟ್ಟ ಅರ್ಥ ಬರುತ್ತದೆ. ಹಾಗಾಗಿ ಅವರ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು ಎಂದು ಗೃಹ ಸಚಿವ ಪರಮೇಶ್ವರ್ ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿತಪ್ಪಿದ್ದಾರೆಂಬ ಎಚ್‌ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಇಂದು ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಸರ್ಕಾರದ ಯೋಜನೆಗಳ ಬಗ್ಗೆ ಟೀಕಿಸಲಿ ಆದರೆ ರಾಜ್ಯದ ಮಹಿಳೆಯರು, ತಾಯಂದಿರ ಬಗ್ಗೆ ಹಾಗೆ ಮಾತಾಡೋದು ಸರಿಯಲ್ಲ. ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ರೆ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು ಎಂದರು.
undefined
70 ವರ್ಷ ದಾಟಿದವರಿಗೂ ಆಯುಷ್ಮಾನ್ ಯೋಜನೆ, ಬುಲೆಟ್ ಟ್ರೈನ್ ವಿಸ್ತರಣೆ: ಇಲ್ಲಿದೆ ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್
ನಮ್ಮ ಕಾರ್ಯಕಕ್ರಮ, ಯೋಜನೆಗಳನ್ನು ವಿರೋಧಿಸುವುದರಲ್ಲಿ ಯಾವುದೇ ತಕಾರರಿಲ್ಲ. ಆದರೆ ಈ ರೀತಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತಗಳನ್ನಾಡಬಾರದು. 'ಆ ಅರ್ಥದಲ್ಲಿ ನೀವು ಹೇಳಿದ್ರೆ ಮಹಿಳೆಯರ ಕ್ಷಮೆ ಕೇಳಬೇಕು' ಎಂದರು ಮುಂದುವರಿದು, ಯಾರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ ಅವರಿಗೆ ಸಹಾಯಯಾಗಲಿ ಅಂತಾ ಈ ಕಾರ್ಯಕ್ರಮ ಯೋಜನೆ ಮಾಡಿದ್ದೇವೆ. ಅದು ಸಹಿಸೋಕೆ ಆಗಿಲ್ಲ ಅಂದರೆ ಬೇರೆ ವಿಚಾರ ಆದರೆ ಹೀಗೆ ಹೇಳಬಾರದು ಎಂದರು.
ಇನ್ನು ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾವು ಗ್ಯಾರಂಟಿ ಕೊಟ್ಟಿದ್ದೇವೆ ಅಂತಾ ಟೀಕೆ ಮಾಡುತ್ತಿದ್ದರು. ಆದರೆ ಈಗ ಅವರೇ ಗ್ಯಾರಂಟಿ ನೀಡಲು ಹೊರಟಿದ್ದಾರೆ. ನಮ್ಮನ್ನು ಕಾಪಿ ಮಾಡ್ತಿದ್ದಾರೆಂದು ಹೇಳಬೇಕಾಗುತ್ತೆ. ಜನರು ಒಪ್ಪೋದು ಬಿಡೋದು ಜನಗಳ ತೀರ್ಮಾನಕ್ಕೆ ಬಿಡ್ತಿನಿ. ನಮಗೆ 15ಲಕ್ಷ ಕೊಡ್ತೀವಿ ಅಂದ್ರು ಆ ಸುಳ್ಳುಗಳು ಗ್ಯಾರಂಟಿ ರೂಪದಲ್ಲಿ ಇದ್ದವು. 2014-2019 ರ ಸುಳ್ಳು ಗಳು ಸತ್ಯವಾಗಲಿಲ್ಲ. ಅದೇ ರೀತಿ ಈಗ ಹೇಳುವ ಗ್ಯಾರಂಟಿ ಸುಳ್ಳುಗಳ ಕಂತೆ ಅಂತಾ ಹೇಳಬೇಕಾಗುತ್ತೆ ಎಂದು ಬಿಜೆಪಿ ಪ್ರಣಾಳಿಕೆ ಬಗ್ಗೆ ವ್ಯಂಗ್ಯ ಮಾಡಿದರು.