
ಬೆಂಗಳೂರು, [ಜ.10]: ಲೋಕಸಭಾ ಚುನಾವಣೆಗೆ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಅರೋಪ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮಧ್ಯಂತರ ತೀರ್ಪು ಸೋಮವಾರಕ್ಕೆ [ಜನವರಿ 13] ಕಾಯ್ದಿರಿಸಿದೆ.
ಪ್ರಜ್ವಲ್ ರೇವಣ್ಣ ಅವರು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದ್ರೆ, ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಕೋರ್ಟ್‌ನಿಂದ ನೋಟಿಸ್ ಬಂದಿಲ್ಲ : ಬಂದ್ರೆ ಹೋಗ್ತೀನಿ’
ಇಂದು [ಶುಕ್ರವಾರ] ಹೈಕೋರ್ಟ್ ಏಕಸದಸ್ಯಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಪ್ರಜ್ವಲ್ ಪರವಾಗಿ ಹಿರಿಯ ವಕೀಲರಾದ ಉದಯ್ ಹೊಳ್ಳ ವಾದ ಮಂಡಿಸಿದ್ರೆ, ಎ.ಮಂಜು ಪರ ವಕೀಲ ಪ್ರಮೀಳ ನೇಸರ್ಗಿ ಪ್ರತಿವಾದ ಮಾಡಿದರು. ಎರಡೂ ಕಡೆಯಿಂದ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಾಧೀಶ ಮೈಕಲ್ ಡಿ ಕುನ್ಹಾ, ಮಧ್ಯಂತರ ತೀರ್ಪನ್ನು ಇದೇ ಸೋಮವಾರಕ್ಕೆ ಕಾಯ್ದಿರಿಸಿದರು.
ತಿರಸ್ಕಾರವಾಗುತ್ತಾ ಪ್ರಜ್ವಲ್ ರೇವಣ್ಣ ನಾಮಪತ್ರ ?
ಎಲೆಕ್ಷನ್ ಪಿಟಿಷನ್ ನಲ್ಲಿ ಎ.ಮಂಜು ಅವರ ನಾಮಿನೇಷನ್ ಫೈಲ್ ಪ್ರತಿ ಹಾಕಿಲ್ಲ. ಇದರಿಂದ ಅವರು ಎಲೆಕ್ಷನ್ ಪಿಟಿಷನ್ ಚಾಲೆಂಜ್ ಮಾಡಲು ಸಾಧ್ಯವಿಲ್ಲ ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ಕೆಲ ಅರ್ಜಿಗಳನ್ನ ವಜಾಗಳಿಸಿದೆ. ಈ ವೇಳೆ ಹೈಕೋರ್ಟ್ ವಜಾಗೊಳಿಸಿರುವ ಕೆಲ ಕೇಸ್ ಗಳ ದಾಖಲೆಗಳನ್ನು (ಸೈಟೇಷನ್) ಪ್ರಜ್ವಲ್ ಪರ ವಕೀಲರಾದ ಉದಯ್ ಹೊಳ್ಳ ಕೋರ್ಟ್ ಗೆ ಸಲ್ಲಿಸಿದರು.
ಮತ್ತೊಂದೆಡೆ ಮಂಜು ಪರ ವಕೀಲ ಪ್ರಮೀಳ ನೇಸರ್ಗಿ, ಇದೇ ತರಹನಾದ ಕೇಸ್ ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ಕೆಲ ಹಿಂದಿನ ದಾಖಲೆಗಳನ್ನು (ಸೈಟೇಷನ್) ಕೋರ್ಟ್ ಗೆ ಸಲ್ಲಿಸಿದರು. ಇದನೆಲ್ಲ ಆಲಿಸಿರುವ ಕೋರ್ಟ್, ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದೆ.
ಸದ್ಯ ಸೋಮವಾರ ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಸಂಸದ ಪ್ರಜ್ವಲ್ ರಾಜಕೀಯ ನಿಂತಿದ್ದು ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.