ಮನವಿ ತಳ್ಳಿಹಾಕಿದ ಕೋರ್ಟ್: ಡಿಕೆ ಶಿವಕುಮಾರ್‌ಗೆ ಸಿಬಿಐ ಸಂಕಷ್ಟ...!

Published : Jul 22, 2020, 08:41 PM ISTUpdated : Jul 22, 2020, 10:30 PM IST
ಮನವಿ ತಳ್ಳಿಹಾಕಿದ ಕೋರ್ಟ್: ಡಿಕೆ ಶಿವಕುಮಾರ್‌ಗೆ  ಸಿಬಿಐ ಸಂಕಷ್ಟ...!

ಸಾರಾಂಶ

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಡಿಕೆ ಶಿವಕುಮಾರ್, ಕೆಪಿಸಿಸಿ ಪಟ್ಟ ಅಲಂಕರಿಸಿ ಪಕ್ಷ ಸಂಟಘನೆಯಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಡಿಕೆಶಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಬೆಂಗಳುರು, (ಜುಲೈ.22): ತಮ್ಮ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ರದ್ದು ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಶಶಿಕುಮಾರ್ ಮನವಿಯನ್ನು ಕರ್ನಾಟಕ  ಹೈಕೋರ್ಟ್ ತಳ್ಳಿಹಾಕಿದೆ.

ದೆಹಲಿಯ ಡಿಕೆಶಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಅದರಂತೆ ಈ ಬಗ್ಗೆ ಸಿಬಿಐ ಪರಿಶೀಲನೆ ನಡೆಸುತ್ತಿದೆ. 

ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಜುಲೈ 22ರ ಟಾಪ್‌ 10 ಸುದ್ದಿ

ಈ ತನಿಖೆಯನ್ನು ರದ್ದು ಮಾಡುವಂತೆ ಡಿಕೆ ಶಿವಕುಮಾರ್ ಆಪ್ತ ಶಶಿಕುಮಾರ್ ಶಿವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಶಶಿಕುಮಾರ್ ಶಿವಣ್ಣ ಅವರ ಅರ್ಜಿಯಲ್ಲಿ ವಜಾಗೊಳಿಸಿದೆ.  

ಇದೇ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಸುಮಾರು 50 ದಿನಗಳ ಕಾಲ ಜೈಲಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ಡಿಕೆಶಿ, ಕೆಪಿಸಿಸಿ ಸಾರಥಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಮಧ್ಯೆ ಈ ಸಿಬಿಐ ತನಿಖೆ ಸಂಕಷ್ಟ ಎದುರಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ
ಕರಾವಳಿಯಲ್ಲಿ ಶಿವಗಿರಿ ಮಠ ಶಾಖೆಗೆ 5 ಎಕರೆ: ಸಿಎಂ ಸಿದ್ದರಾಮಯ್ಯ ಭರವಸೆ