ಮಾನನಷ್ಟ ಪ್ರಕರಣ: ಕೋರ್ಟ್‌ನಲ್ಲಿ ದೇವೇಗೌಡರಿಗೆ ಹಿನ್ನಡೆ

By Suvarna News  |  First Published Jan 17, 2021, 10:23 PM IST

ಮಾನನಷ್ಟ ಪ್ರಕರಣ ಒಂದರಲ್ಲಿ ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಹಿನ್ನಡೆಯಾಗಿದೆ. ಏನಿದು ಪ್ರಕರಣ?


ಬೆಂಗಳೂರು, (ಜ.17): 10 ಕೋಟಿ ರೂ. ಮಾನನಷ್ಟ ಪ್ರಕರಣದ ರಿಟ್‌ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡಗೆ ಹಿನ್ನಡೆಯಾಗಿದೆ.

ರಿಟ್ ಅರ್ಜಿ ವಜಾಗೊಳಿಸಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ತೀರ್ಪು ನೀಡಿದೆ. ಇದಲ್ಲದೆ, 9 ತಿಂಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ಸಹ ನೀಡಿದೆ.

Tap to resize

Latest Videos

ಲೋಕಸಭೆ ಸೋಲು ನೆನೆದು ನಿಖಿಲ್ ಕುಮಾರಸ್ವಾಮಿ ಭಾವುಕ

ಏನಿದು ಪ್ರಕರಣ?
2012ರಲ್ಲಿ ದೇವೇಗೌಡರ ವಿರುದ್ಧ ನೈಸ್ ಸಂಸ್ಥೆ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಅಲ್ಲದೇ ನೈಸ್‌ ಸಂಸ್ಥೆ 10 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ಸಹ ಕೋರಿತ್ತು.

ಆರೋಪ ಸಮರ್ಥನೆಗೆ ಸಾಕ್ಷ್ಯ ಒದಗಿಸಲು ಕೋರ್ಟ್​ ಅವಕಾಶ ನೀಡಿತ್ತು. ಹಲವು ಅವಕಾಶ ನೀಡಿದ್ರೂ ಸಾಕ್ಷ್ಯ ವಿಚಾರಣೆ ನಡೆಸದ ಹಿನ್ನೆಲೆಯಲ್ಲಿ H.D.ದೇವೇಗೌಡರ ಸಾಕ್ಷ್ಯವನ್ನು ಮುಕ್ತಾಯಗೊಳಿಸಲಾಗಿತ್ತು.

ಹೀಗಾಗಿ, ಪ್ರತಿವಾದಿ ಸಾಕ್ಷ್ಯ ವಿಚಾರಣೆಗೆ ಅವಕಾಶ ಕೋರಿ ದೇವೇಗೌಡರು ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಇವರ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. 

click me!