ಬಿಜೆಪಿ ಹಿರಿಯ ಶಾಸಕ ನಿಧನ: ಸಂತಾಪ ಸೂಚಿಸಿದ ರಾಜಕೀಯ ಮುಖಂಡರು

Published : Jan 17, 2021, 07:00 PM ISTUpdated : Jan 17, 2021, 07:05 PM IST
ಬಿಜೆಪಿ ಹಿರಿಯ ಶಾಸಕ ನಿಧನ: ಸಂತಾಪ ಸೂಚಿಸಿದ ರಾಜಕೀಯ ಮುಖಂಡರು

ಸಾರಾಂಶ

ಬಿಜೆಪಿ ಹಿರಿಯ ಶಾಸಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕರ ನಿಧನಕ್ಕೆ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಪದುಚೆರಿ, (ಜ.17): ಬಿಜೆಪಿ ಶಾಸಕ ಹಾಗೂ ಬಿಜೆಪಿ ಘಟಕದ ಖಜಾಂಚಿ ಕೆ.ಜಿ.ಶಂಕರ್(70) ನಿಧನರಾಗಿದ್ದಾರೆ. ಇಂದು (ಭಾನುವಾರ) ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ ಮಗಲಿದ್ದ ಅವರಿಗೆ ಹೃದಯಘಾತವಾಗಿದ್ದು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಕೊನೆಯುಸಿರೆಳೆದಿರುವುದಾಗಿ ಕುಟುಂಬ ತಿಳಿಸಿದೆ.

ಕಾರು ಅಪಘಾತ: ಸಚಿವರಿಗೆ ಗಂಭೀರ ಗಾಯ, ಪತ್ನಿ ಸೇರಿ ಇಬ್ಬರು ಸಾವು

ಶಂಕರ್​ ಅವರು ಕೇಂದ್ರಾಡಳಿತ ಪ್ರದೇಶದ ನಾಮನಿರ್ದೇಶಿತ ಶಾಸಕರಾಗಿದ್ದರು. ಇನ್ನು ಶಾಸಕರ ಸಾವಿಗೆ ಲೆಫ್ಟಿನೆಂಟ್​ ಗವರ್ನರ್​ ಸೇರಿ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್​ ಕಿರಣ್​ ಬೇಡಿ, ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ, ವಿಧಾನಸಭೆ ಸ್ಪೀಕರ್ ವಿ.ಪಿ. ಶಿವಕೋಲುಂಡು, ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸಮಿನಾಥನ್ ಮತ್ತು ವಿಧಾನಸಭೆ ಕಾರ್ಯದರ್ಶಿ ಆರ್ ಮುನುಸಾಮಿ ಮೃತರ ಅಂತಿಮ ದರ್ಶನ ಪಡೆದುಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ