ಸರ್ಕಾರ ಸತ್ತು ಹೋಗಿದೆ, ಸತ್ತ ಆಡಳಿತದ ಹೆಣವನ್ನ ಸಿದ್ದರಾಮಯ್ಯ ಮುಂದೆ, ಡಿಕೆಶಿ ಹಿಂದೆ ಹೊತ್ತಿದ್ದಾರೆ- ಪ್ರತಾಪ್ ಸಿಂಹ

Published : Jan 15, 2026, 10:30 AM IST
Pratap Simha-CM Siddaramaiah

ಸಾರಾಂಶ

ರಾಜ್ಯ ಸರ್ಕಾರದ ಆಡಳಿತವನ್ನು 'ಸತ್ತ ಹೆಣ'ಕ್ಕೆ ಹೋಲಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹೆಣವನ್ನು ಹೊತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಮೈಸೂರು (ಜ.15): 'ರಾಜ್ಯದಲ್ಲಿ ಪ್ರಸ್ತುತ ಆಡಳಿತ ವ್ಯವಸ್ಥೆ ಸತ್ತು ಹೋಗಿದೆ. ಆದರೂ, ಈ ಸರ್ಕಾರ ಅವಧಿಗೆ ಮುನ್ನವೇ ಬಿದ್ದು ಹೋಗುವುದಿಲ್ಲ. ಆದರೆ, ಈ ಸತ್ತ ಆಡಳಿತದ ಹೆಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಹೊತ್ತಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿಂದೆ ಹೊತ್ತಿದ್ದಾರೆ' ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ, ದೇವರಾಜ ಅರಸು ಆಗಲು ಸಾಧ್ಯವಿಲ್ಲ

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಸತ್ತಿದೆ. ಸತ್ತ ಆಡಳಿದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊತ್ತಿದ್ದಾರೆ, ಡಿಕೆ ಹಿಂದೆ ಹೊತ್ತಿದ್ದಾರೆ. ಆಡಳಿತದ ಹೆಣವನ್ನು ಮುಂದೆ ಹೊರಲು ಡಿ.ಕೆ. ಶಿವಕುಮಾರ್ ಯತ್ನಿಸುತ್ತಿದ್ದಾರೆ. ಆದರೆ, ಹೆಣ ಹೊರುವಾಗ ಮುಂದೆ ಯಾರಾದರೂ ಹೊರಲಿ, ಹಿಂದೆ ಯಾರಾದರೂ ಹೊರಲಿ. ಅದರಲ್ಲೇನೂ ವ್ಯತ್ಯಾಸ ಇಲ್ಲ. ಸಿದ್ದರಾಮಯ್ಯ ಯಾವತ್ತಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬಹಳ ಬೇಗ ಜನರ ಮನಸ್ಸಿನಿಂದ ದೂರ ಆಗುತ್ತಾರೆ. ಜನ ಸಿದ್ದರಾಮಯ್ಯರನ್ನು ಮರೆಯುವ ದಿನಗಳು ಬಹಳ ದೂರವಿಲ್ಲ ಎಂದರು.

ಡಿ.ಕೆ. ಶಿವಕುಮಾರ್ ಜೊತೆ ಪೈಪೋಟಿ ಮಾಡುತ್ತಾ ಇನ್ನಷ್ಟು ದಿನ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು. ಆದರೆ, ಇದರಿಂದ ಏನೂ ಪ್ರಯೋಜನ ಇಲ್ಲ. ಜನ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನೂ ಎರಡೂವರೆ ವರ್ಷ ಈ ಸತ್ತ ಆಡಳಿತ ಸಹಿಸಿಕೊಳ್ಳಲೇಬೇಕು. ಈ ಸರಕಾರ ಏನು ಬೀಳುವುದಿಲ್ಲ. ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು ಅಷ್ಟೆ ಎಂದು ಮಾರ್ಮಿಕವಾಗಿ ನುಡಿದರು.

ಸಿದ್ದರಾಮಯ್ಯ ಬಾಯಿಯೇ ಬಚ್ಚಲಾಗಿದೆ

ಶಿಡ್ಲಘಟ್ಟ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ವಿಚಾರದ ಬಗ್ಗೆ ಮಾತನಾಡಿ, ಅಧಿಕಾರಿಗೆ ಧಮ್ಕಿ ಹಾಕಿದ ಪುಡಾರಿಯನ್ನು ಒದ್ದು ಒಳಗೆ ಹಾಕಿ. ಸಿಎಂ ಸಿದ್ದರಾಮಯ್ಯ ಅವರ ಬಾಯಿಯೇ ಬಚ್ಚಲಾಗಿದೆ. ಅವರೇ ಯಾರಿಗೂ ಮರ್ಯಾದೆ ಕೊಡಲ್ಲ. ಇದನ್ನೆ ಅವರ ಪಕ್ಷದವರು ಅನುಸರಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬಳಸುವ ಭಾಷೆ ಸರಿ ಇದ್ದರೆ, ಅವರ ಕಾರ್ಯಕರ್ತರದು ಸರಿ ಇರುತ್ತಿತ್ತು. ಈ ಹಿಂದೆ ಐಎಎಸ್ ಅಧಿಕಾರಿಗೆ ಸಿದ್ದರಾಮಯ್ಯ ಭಂಟ ನಿಂದಿಸಿದ್ದರು. ಇಂತಹ ಹಲವು ಘಟನೆ ನಡೆದಿವೆ. ಈಗ ಮುಂದುವರಿದಿದೆ. ರಾಜ್ಯವನ್ನು ಮೊದಲು ಫ್ಲೆಕ್ಸ್ ಮುಕ್ತ ಮಾಡಿ. ನನ್ನ ಫೋಟೋ ಇದ್ದರು ಕೂಡ ಫ್ಲೆಕ್ಸ್ ತೆಗೆಸಿ ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಏಟಿಗೆ 3 ಹಕ್ಕಿ ಹೊಡೆದ ಸಿಎಂ ಸಿದ್ದರಾಮಯ್ಯ; ಡಿ.ಕೆ.ಶಿವಕುಮಾರ್, ಬಿಜೆಪಿ & ಜೆಡಿಎಸ್ ಪ್ಲಾನ್ ಫ್ಲಾಪ್!
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಆಗಲ್ಲ: ಡಿಕೆ ಬ್ರದರ್ಸ್‌ ನಿಗೂಢ ಪೋಸ್ಟರ್‌ ಸಂಚಲನ