ಉಪಚುನಾವಣೆ ಬೆನ್ನಲ್ಲೇ ಗ್ರಾಮ ಪಂಚಾಯತ್ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಕೋರ್ಟ್ ಸೂಚನೆ ಬೆನ್ನಲ್ಲೇ ರಾಜ್ಯ ಸರ್ಕಾರವೂ ಸಹ ಸಹಮತ ವ್ಯಕ್ತಪಡಿಸಿಸಿದೆ.
ಬೆಂಗಳೂರು, (ನ.15): ಮೂರು ವಾರದೊಳಗೆ ಗ್ರಾಮ ಪಂಚಾಯತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟ ಮಾಡಲು ಈಗಾಗಲೇ ಹೈಕೋರ್ಟ್ ನಿರ್ದೇಶ ನೀಡಿದೆ. ಇದರ ಬೆನ್ನಲ್ಲೇ ಇದೀಗ ಗ್ರಾಮ ಸಮರಕ್ಕೆ ರಾಜ್ಯ ಸರ್ಕಾರ ಸಹಮತ ವ್ಯಕ್ತಪಡಿಸಿದೆ.
ಉಪಚುನಾವಣೆ ನೆಪವೊಡ್ಡಿ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವಂತೆ ರಾಜ್ಯ ಸರ್ಕಾರ ಚುನಾವಣೆ ಆಯೋಗಕ್ಕೆ ತಿಳಿಸಿತ್ತು. ಅಲ್ಲದೇ ಚುನಾವಣೆ ಎದುರಿಸಲು ಆರಂಭದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹಿಂದೇಟು ಹಾಕಿದ್ದವು.
ಗ್ರಾಮ ಪಂಚಾಯತಿ ಎಲೆಕ್ಷನ್‌ಗೆ ಗ್ರೀನ್ ಸಿಗ್ನಲ್: ಆಯೋಗಕ್ಕೆ ಕೋರ್ಟ್ ಮಹತ್ವದ ಸೂಚನೆ....!
ಆದ್ರೆ, ಮೊನ್ನೇ ಕೋರ್ಟ್ ಇದರಲ್ಲಿ ಸರ್ಕಾರದ ಒಪ್ಪಿಗೆ ಬೇಕಾಗಿಲ್ಲ. ಚುನಾವಣೆ ಆಯೋಗ ಇನ್ನು 3 ತಿಂಗಳ ಒಳಗೆ ದಿನಾಂಕ ಪ್ರಕಟಿಸಬೇಕೆಂದು ಕರ್ನಾಟಕ ಹೈಕೋರ್ಟ್ ಸೂಚಿಸಿತ್ತು. ಇದರ ಬೆನ್ನಲ್ಲೇ ಇದೀಗ ಸರ್ಕಾರ ಸಹ ಗ್ರಾಮ ಪಂಚಾಯಿತಿ ಚುನಾವಣೆಗೆ ಸಹಮತ ವ್ಯಕ್ತಪಡಿಸಿದೆ.
ಇದರಿಂದ ಗ್ರಾಮ ಪಂಚಾಯಿತಿ ಚುನಾವಣೆ ಗರಿಗೆದರಿದೆ. ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲೂ ಸಹ ಗ್ರಾಮಪಂಚಾಯತಿ ಚುನಾವಣೆ ಬಗ್ಗೆ ಚರ್ಚೆ ನಡೆದಿದ್ದು, ಚುನಾವಣೆಗೆ ರೆಡಿ ಎಂದು ಉಸ್ತುವಾರಿ ಸಚಿವರು ಸಹ ಹೇಳಿದ್ದಾರೆ. ಇದರಿಂದ ಗ್ರಾಮ ಸಮರಕ್ಕೆ ವೇದಿಕೆ ಸಿದ್ಧವಾಗಿದೆ.