ಸಂಪುಟ ವಿಸ್ತರಣೆಯ ಬ್ರೇಕಿಂಗ್: ಭಾವೀ ಸಚಿವರಿಗೆ ರೆಡಿಯಾಗಿ ನಿಂತಿವೆ ಕಾರುಗಳು

Published : Feb 05, 2020, 02:58 PM ISTUpdated : Feb 05, 2020, 03:55 PM IST
ಸಂಪುಟ ವಿಸ್ತರಣೆಯ ಬ್ರೇಕಿಂಗ್: ಭಾವೀ ಸಚಿವರಿಗೆ ರೆಡಿಯಾಗಿ ನಿಂತಿವೆ ಕಾರುಗಳು

ಸಾರಾಂಶ

ಸಂಪುಟ ವಿಸ್ತರಣೆಯ ಮತ್ತೊಂದು ಬಿಗ್ ಬ್ರೇಕಿಂಗ್| ದಾಖಲೆ  ಸಮೇತ ಪಾಲಿಟಿಕಲ್ ನ್ಯೂಸ್ ಬ್ರೇಕಿಂಗ್| ಸುವರ್ಣ ನ್ಯೂಸ್ ನಲ್ಲಿ ಸಂಪುಟ ವಿಸ್ತರಣೆಯ ಪಕ್ಕಾ ನ್ಯೂಸ್| ಭಾವೀ ಸಚಿವರಿಗಾಗಿ ರೆಡಿಯಾಗಿ ನಿಂತಿವೆ ಹೊಸ ಕಾರುಗಳು| ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ ನೂತನ ಸಚಿವರಿಗಾಗಿ ಕಾರು ರೆಡಿ| ಸಚಿವರಿಗಾಗಿ ಸಾಲಾಗಿ ನಿಂತ 16 ಇನ್ನೋವಾ ಕ್ರಿಸ್ಟಾ ಕಾರುಗಳು 

ಬೆಂಗಳೂರು (ಫೆಬ್ರವರಿ 05); ಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ (ಗುರುವಾರ) ನಡೆಯಲಿದ್ದು,  13 ಶಾಸಕರಿಗೆ ಸಚಿವ ಸ್ಥಾನ ನೀಡುವುದು ಗ್ಯಾರಂಟಿ ಎಂದು ಬಿಎಸ್​ವೈ ಈಗಾಗಲೇ ತಿಳಿಸಿದ್ದಾರೆ. 

"

ಆದರೆ, ಆ 13 ಜನ ಯಾರು ಎಂಬುದು ಮಾತ್ರ ಈವರೆಗೆ ಫೈನಲ್ ಆಗಿಲ್ಲ.  10 ನೂತನ ಶಾಸಕರು ಸಂಪುಟಕ್ಕೆ ಸೇರುವುದು ಪಕ್ಕಾ ಆಗಿದೆ. ಸಿ.ಪಿ. ಯೋಗೇಶ್ವರ್ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ ಕೊನೆ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಭಯ ಎಲ್ಲರಲ್ಲೂ ಇದೆ.

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಆದ್ರೆ, ಯಾರಿಗೆ ಸಚಿವ ಸ್ಥಾನ ಎನ್ನುವುದು ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಯಾರಿಗೆಲ್ಲ ಸಚಿವ ಸ್ಥಾನ ಸಿಗುತ್ತೆ ಎನ್ನುವುದು ಫಿಕ್ಸ್ ಆಗಿದೆ. ಹೇಗೆಂದರೆ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಭಾವೀ ಸಚಿವರಿಗೆ ಸರ್ಕಾರಿ ಕಾರು ಅಲರ್ಟ್ ಮಾಡಲಾಗಿದೆ. 

ನೂತನ ಸಚಿವರಿಗಾಗಿ ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ ಕಾರು ರೆಡಿ ನಿಂತಿವೆ. ಹಾಗಾದ್ರೆ ಯಾರಿಗೆಲ್ಲ ಕಾರು ಸಿಕ್ಕಿದೆ ಎನ್ನುವ ವಿವರ ಈ ಕೆಳಗಿನಂತಿವೆ.

1.ರಮೇಶ್ ಜಾರಕಿಹೊಳಿ- (ಇನ್ನೋವಾ ಕ್ರಿಸ್ಟ) KA-01, G-6184
2.ಬೈರತಿ ಬಸವರಾಜ್-  (ಇನ್ನೋವಾ ಕ್ರಿಸ್ಟ)  KA-01, G-6178 
3. ನಾರಾಯಣಗೌಡ- (ಇನ್ನೋವಾ ಕ್ರಿಸ್ಟ) KA-41, G-2727
4.ಡಾ.ಕೆ.ಸುಧಾಕರ್-  (ಇನ್ನೋವಾ ಕ್ರಿಸ್ಟ) KA-03, G-8910
5.ಬಿ.ಸಿ,ಪಾಟೀಲ್-(ಇನ್ನೋವಾ ಕ್ರಿಸ್ಟ) KA-43, G-0009
6. ಆನಂದ್ ಸಿಂಗ್-(ಇನ್ನೋವಾ ಕ್ರಿಸ್ಟ) KA-01, G-4999
7. ಎಸ್‌.ಟಿ.ಸೋಮಶೇಖರ್-(ಇನ್ನೋವಾ)  KA-05, G-0009
8. ಶಿವರಾಮ್ ಹೆಬ್ಬಾರ್-(ಇನ್ನೋವಾ)  KA-01, G-6000

ಇದನ್ನೂ ನೋಡಿ: 10 ಮಂದಿಗೆ ಮಾತ್ರ ಸಚಿವಗಿರಿ

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ