ಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದಿದ್ದ ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಸಂಬಂಧ ದಾಖಲಿಸಿದ್ದ 40ಕ್ಕೂ ಹೆಚ್ಚು ಕೇಸುಗಳನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಇದೀಗ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಚಿಕ್ಕಮಗಳೂರು (ಅ.14): ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದಿದ್ದ ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಸಂಬಂಧ ದಾಖಲಿಸಿದ್ದ 40ಕ್ಕೂ ಹೆಚ್ಚು ಕೇಸುಗಳನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಇದೀಗ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಹುಬ್ಬಳ್ಳಿ ಗಲಭೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಹೀಗಾಗಿ ಕೇಸ್ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಸಿಟಿ ರವಿ ಕೇಸ್ ಸಹ ವಾಪಸ್ ಪಡೆಯಲಾಗಿದೆ ಎಂದು ಹೇಳಿದೆ. ಈ ಬಗ್ಗೆ ಬಿಜೆಪಿ ಮಾಜಿ ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, 'ನನ್ನ ಮೇಲೆ ಯಾವ ಕೇಸ್ ಇತ್ತು? ತೆಗೀರಿ ಅಂದೋರು ಯಾರು? ಯಾರು ಅರ್ಜಿ ಸಲ್ಲಿಸಿದ್ರು? ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
undefined
ಕೋರ್ಟ್ ಅನುಮತಿಸಿದರಷ್ಟೇ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್: ಸಿದ್ದರಾಮಯ್ಯ
ಹೌದು. ಹುಬ್ಬಳ್ಳಿ ಗಲಭೆಯಲ್ಲಿನ ಆರೋಪಿಗಳನ್ನು ಬಿಡುಗಡೆಗೊಳಿಸಲು ಸಿಟಿ ಅವರ ಕೇಸ್ ಯಾಕೆ ವಾಪಸ್ ಪಡೆಯಬೇಕಾಗಿತ್ತು. ಅಷ್ಟಕ್ಕೂ ಸಿಟಿ ರವಿ ಮೇಲೆ ಇದ್ದ ಕೇಸ್ ಯಾವುದು? ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ? ಇಲ್ಲ,ಹಾಗಾದರೆ ಕೇಸ್ ವಾಪಸ್ ಪಡೆದಿದ್ದು ಹೇಗೆ? ಎಂಬುದು ಪ್ರಶ್ನೆಯಾಗಿದೆ.
ನನ್ನ ಮೇಲೆ ಯಾವ ಕೇಸ್ ಇತ್ತು?
ನನ್ನ ಮೇಲೆ ಯಾವುದೇ ಕೇಸ್ ಇಲ್ಲ. ಅಷ್ಟಕ್ಕೂ ನಾನು ಯಾವುದೇ ಕೇಸ್ ತೆಗೆಯಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿಲ್ಲ, ಅರ್ಜಿ ಸಲ್ಲಿಕೆ ಮಾಡಿಲ್ಲ. ನನ್ನ ಮೇಲಿನ ಕೇಸ್ ಇದ್ದರೆ ತೆಗೆಯಿರಿ ಎಂದು ನಾನೂ ಹೇಳೋದಿಲ್ಲ. ಆ ಪರಿಸ್ಥಿತಿ ಬಂದರೆ ನ್ಯಾಯಾಲಯಕ್ಕೆ ಹೋಗಿ ಕಾನೂನು ಹೋರಾಟ ಮಾಡುತ್ತೇನೆ ಹೊರತು ಇವರ ಬಳಿ ಭಿಕ್ಷೆ ಬೇಡಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ರಾಷ್ಟ್ರದ್ರೋಹಿಗಳನ್ನು ರಕ್ಷಿಸುತ್ತಿದೆ: ಸಂಸದ ಕಾಗೇರಿ ಕಿಡಿ
ನಾನು ಯಾವ ಠಾಣೆಗೆ ಬೆಂಕಿ ಹಚ್ಚಿದ್ದೇನೆ, ಎಲ್ಲಿ ಕಲ್ಲು ಹೊಡೆದಿದ್ದೇನೆ ಕಾಂಗ್ರೆಸ್ ನಾಯಕರು ಹೇಳಲಿ. ಪೊಲೀಸರ ಮೇಲೆ ಹಲ್ಲೆ ಮಾಡಿ ಸ್ಟೇಷನ್ ಗೆ ಬೆಂಕಿ ಹಚ್ಚಿದ ದೇಶದ್ರೋಹಿ ಆರೋಪಿಗಳ ವಿರುದ್ಧದ ಪ್ರಕರಣ ರದ್ದು ಮಾಡುತ್ತಿದ್ದೀರಿ. ಈ ಪ್ರಕರಣದಲ್ಲಿ ಆಗಿನ ಪೊಲೀಸರೇ ಹೇಳುವಂತೆ ಸ್ವಲ್ಪ ತಡಮಾಡಿದ್ರೆ ಪೊಲೀಸರ ಹೆಣಗಳು ಬಿಳುತ್ತಿದ್ದವು. ಆ ರೀತಿ ಪೊಲೀಸರ ಮೇಲೆ ಕಲ್ಲು ತೂರಿದ್ದ ಮತಾಂಧರು. ಹಿಂದೆ ಪಿಎಫ್‌ಐ ಕೇಸ್ ವಾಪಸ್ ಪಡೆದಿದ್ದಕ್ಕೆ ರಾಜು, ರುದ್ರೇಶ್ ಸೇರಿದಂತೆ 21 ಜನ ಹಿಂದೂಗಳ ಹತ್ಯೆ ಮಾಡಲಾಯಿತು. ಹಿಜಾಬ್ ಪರ ಹೋರಾಟ ಮಾಡಿ ರಾಜ್ಯಾದ್ಯಂತ ಘರ್ಷಣೆಗೆ ಕಾರಣರಾದ ಆರೋಪಿಗಳ ಕೇಸ್ ಸಹ ವಾಪಸ್ ಪಡೆದಿದ್ದೀರಿ, ಆದರೆ ಹಿಜಾಬ್ ವಿರುದ್ಧ ಹೋರಾಟ ಮಾಡಿದವರ ಕೇಸ್ ವಾಪಸ್ ಪಡೆದಿಲ್ಲ. ಟೋಪಿ ಹಾಕೋನು ಯಾರು ಅಂತೆಲ್ಲ ಗುರುತಿಸಿ ಕೆಲಸ ಮಾಡುತ್ತಿದ್ದೀರಿ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.