ಹ್ಯಾಕಿಂಗ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಘಟನೆಗಳ ಬೆನ್ನಲ್ಲೇ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಫೇಸ್‌ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಹುಡುಗಿ, ಕಾರು ಸೇರಿದಂತೆ ಇತರ ಫೋಟೋಗಳನ್ನು ಹಾಕಿದ ಘಟನೆ ನಡೆದಿದೆ.
ಬೆಂಗಳೂರು(ಆ.26) ಸೈಬರ್ ಕ್ರೈಮ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸಾಮಾಜಿಕ ಮಾಧ್ಯಗಳನ್ನು ಹ್ಯಾಕ್ ಮಾಡಿ ದುರುಪಯೋಗ ಪಡಿಸಿಕೊಳ್ಳುವ ಅಪಾಯ ಹೆಚ್ಚಾಗಿದೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಫೇಸ್‌ಬುಕ್ ಖಾತೆಯನ್ನು ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ. ಖಾತೆ ಹ್ಯಾಕ್ ಮಾಡಿದ ಬಳಿಕ ದುರಪಯೋಗ ಮಾಡಿದ್ದಾರೆ. ಕುಮಾರಸ್ವಾಮಿ ಫೇಸ್‌ಬುಕ್ ಖಾತೆಯ ಪ್ರೊಫೈಲ್ ಇಮೇಜ್ ಹಾಗೂ ಇತರ ಕೆಲ ಇಮೇಜ್ ಬದಲಿಸಿದ್ದಾರೆ. ವಿದೇಶಿ ಹುಡುಗಿಯ ಫೋಟೋ ಪೋಸ್ಟ್ ಮಾಡಲಾಗಿದೆ.
ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದಾರೆ. ಅದರಲ್ಲೂ ಇತ್ತೀಚೆಗಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೆಚ್‌ಡಿಕೆ ಸಾಮಾಜಿಕ ಮಾಧ್ಯದಲ್ಲೂ ಭಾರಿ ಪ್ರಚಾರ ನಡೆಸಿದ್ದರು. ಸರ್ಕಾರದ ವಿರುದ್ದ ವಾಗ್ದಾಳಿ, ತಿರುಗೇಟು, ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇಂದು ಏಕಾಏಕಿ ಹೆಚ್‌ಡಿ ಕುಮಾರಸ್ವಾಮಿ ಫೇಸ್‌ಬುಕ್ ಪ್ರೊಫೈಲ್ ಪಿಕ್ಟರ್ ದಿಢೀರ್ ಬದಲಾಗಿದೆ.
ಕಾವೇರಿ ಹೋರಾಟದಿಂದ ಜೆಡಿಎಸ್ ದೂರ; ರೈತರ ಪರವಾಗಿ ಧ್ವನಿ ಎತ್ತದ ಮಣ್ಣಿನ ಮಕ್ಕಳು!
ಹೆಚ್‌ಡಿ ಕುಮಾರಸ್ವಾಮಿ ಇಮೇಜ್ ಬದಲು ವಿದೇಶಿ ಹುಡುಗಿ, ಸೂಪರ್ ಕಾರು ಸೇರಿದಂತೆ ಇತರ ಫೋಟೋಗಳು ಕಾಣಿಸಿಕೊಂಡಿದೆ. ಹಲವರು ಈ ಕುರಿತು ಸಂದೇಶ ರವಾನಿಸಿದ್ದಾರೆ. ತಕ್ಷಣವೇ ಕುಮಾರಸ್ವಾಮಿ ಸಾಮಾಜಿಕ ಮಾಧ್ಯಮಗಳ ನಿರ್ವಹಣಾ ತಂಡ ಫೇಸ್‌ಬುಕ್ ಖಾತೆಯನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಹ್ಯಾಕರ್ಸ್ ಬದಲಿಸಿದ ಪಿಕ್ಚರ್ ಬದಲಿಸಿದ್ದಾರೆ. ಮತ್ತೆ ಹೆಚ್‌ಡಿ ಕುಮಾರಾಸ್ವಾಮಿ ಫೋಟೋ ಬಳಿಸಿದ್ದಾರೆ. ಹ್ಯಾಕ್ ಮಾಡಿದ ಕಿಡಿಗೇಡಿಗಳು ಮತ್ತೆ ಇದೇ ರೀತಿ ಮಾಡುವ ಸಾಧ್ಯತೆ ಇದೆ. ಇದರಿಂದ ಕಾನೂನು ಕ್ರಮ ಕೈಗೊಳ್ಳಲು ಜೆಡಿಎಸ್ ಮುಂದಾಗಿದೆ. ಹಲವು ನಾಯಕರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ದುರುಪಯೋಗ ಪಡಿಸಿದ ಉದಾಹರಣೆಗಳಿವೆ.
ರಾಮನಗರದಲ್ಲಿ ಹಿಡಿತ ಕಳೆದುಕೊಳ್ತಾ ಜೆಡಿಎಸ್..? ದಳಪತಿಗಳ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಕಾಂಗ್ರೆಸ್..!
ಕಾಂಗ್ರೆಸ್ ಸರ್ಕಾರದ ವಿರುದ್ದ ಸತತ ವಾಗ್ದಾಳಿ ನಡೆಸುತ್ತಿರುವ ಹೆಚ್‌ಡಿ ಕುಮಾರಸ್ವಾಮಿ ಕೆಲ ದಾಖಲೆ ಬಿಡುಗಡೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತೀಚೆಗೆ ಸರ್ಕಾರ ಪತನದ ಕುರಿತು ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ನಲ್ಲಿಯೇ ಕಿತ್ತಾಟ ಶುರುವಾಗಿದ್ದು, ಈ ಸರ್ಕಾರ ಐದು ವರ್ಷ ಇರುವುದಿಲ್ಲ. ಕಾರ್ಯಕರ್ತರು ಭಯಪಡಬೇಕಾದ ಅಗತ್ಯವಿಲ್ಲ. ಜೆಡಿಎಸ್ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ.
ಯಶವಂತಪುರ ವಿಧಾನಸಭೆ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಹಣ ಏನಾಯಿತು? ಅದನ್ನು ರೈಲಿಗೆ ತೆಗೆದುಕೊಂಡು ಹೋದರಾ? ರಸ್ತೆ ಮಾಡದೆಯೇ ಬಿಲ್ ಮಾಡಿಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿ ನೋಡಿದರೆ ಈಗ ತನಿಖೆ ಮಾಡುತ್ತಿದ್ದಾರೆ. ಕಳ್ಳ ಬಿಲ್ ಮಾಡಿಕೊಂಡಿರುವವರನ್ನು ಕರೆದುಕೊಂಡು ಹೋಗಿ ಏನು ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಕಳೆದ ಬಾರಿ ಸೋಲು ಅನುಭವಿಸಿರುವ ಜವರಾಯಿಗೌಡ ಅವರನ್ನೇ ಮುಂದಿನ ಚುನಾವಣೆಗೂ ಕಣಕ್ಕಿಳಿಸಲಾಗುವುದು ಎಂಬುದನ್ನು ಈಗಲೇ ಹೇಳುವುದಿಲ್ಲ. ಆ ವೇಳೆಯ ಸನ್ನಿವೇಶ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.