ಕರ್ನಾಟಕದ ಸಚಿವರೊಬ್ಬರಿಗೆ ವಕ್ಕರಿಸಿದ ಕೊರೋನಾ..!

By Suvarna News  |  First Published Jul 26, 2020, 2:33 PM IST

ಕೊರೋನಾ ಮಹಾಮಾರಿ ಇದೀಗ ಕರ್ನಾಟಕದ ಓರ್ವ ಸಚಿವರಿಗೆ ವಕ್ಕರಿಸಿಕೊಂಡಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಆತಂಕ ಶುರುವಾಗಿದೆ.
 


ಬಳ್ಳಾರಿ,(ಜುಲೈ,26): ಅರಣ್ಯ ಸಚಿವ, ವಿಜಯನಗರ (ಹೊಸಪೇಟೆ) ಶಾಸಕ ಹಾಗೂ ಬಳ್ಳಾರಿ ಜಿಲ್ಲೆ ಕೋವಿಡ್ ಉಸ್ತುವಾರಿಯಾಗಿರುವ ಆನಂದ್ ಸಿಂಗ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಶುಕ್ರವಾರ ಕೋವಿಡ್ ಪರೀಕ್ಷೆ ಮಾಡಿಸಿದ್ದ ಆನಂದ್ ಸಿಂಗ್ ಅವರಿಗೆ ಶನಿವಾರ ರಾತ್ರಿ ವರದಿ ಬಂದಿದ್ದು, ಕೊರೋನಾ ಇರುವುದು ಖಚಿತವಾಗಿದೆ. ಆದರೆ ಯಾವ ರೋಗಲಕ್ಷಣವಿಲ್ಲದೆ ಸಚಿವರಿಗೆ ಕೊರೋನಾ ಇರುವುದು ಕಂಡುಬಂದಿದೆ.

Tap to resize

Latest Videos

ಕೋವಿಡ್‌ ಆಸ್ಪತ್ರೆಗೆ ಭೇಟಿ: ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಸಚಿವ ಆನಂದ ಸಿಂಗ್‌

ರೋಗಲಕ್ಷಣವಿಲ್ಲದ ಕಾರಣ ಆನಂದ್ ಸಿಂಗ್, ಹೊಸಪೇಟೆ ನಿವಾಸದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.  ತಮ್ಮ ಕಾರು ಚಾಲಕನಿಗೆ ಇತ್ತೀಚಿಗೆ ಸೋಂಕು ಪತ್ತೆಯಾದ ಹಿನ್ನೆಲೆ ಸಚಿವ ಆನಂದ್ ಸಿಂಗ್ ಅವರು ಹೋಂ ಕ್ವಾರಂಟೈನ್ ನಲ್ಲಿದ್ದರು. 

ಅಲ್ಲದೇ ಅವರು ಇತ್ತೀಚೆಗೆ ಬಳ್ಳಾರಿಯಲ್ಲಿ ಕೋವಿಡ್ ವಾರ್ಡ್ ಒಳಗೆ ಹೋಗಿ ಸೋಂಕಿತರ ಅಹವಾಲುಗಳನ್ನು ಆಲಿಸಿ, ಆತ್ಮಸ್ಥೈರ್ಯ ತುಂಬಿದ್ದರು.

click me!