ನನ್ನ ವಿರುದ್ಧ ಖೂಬಾ ಸಂಚು: ಬಿಜೆಪಿ ಸಂಸದನ ವಿರುದ್ಧವೇ ಗಂಭೀರ ಆರೋಪ ಮಾಡಿದ ಪ್ರಭು ಚವ್ಹಾಣ್!

By Kannadaprabha News  |  First Published May 18, 2023, 5:50 AM IST

ಔರಾದ್‌ನ ಬಿಜೆಪಿ ಶಾಸಕರಾಗಿ ಮರು ಆಯ್ಕೆಯಾಗಿರುವ ಮಾಜಿ ಸಚಿವ ಪ್ರಭು ಚವ್ಹಾಣ್‌ ಮತ್ತು ತಮ್ಮದೇ ಪಕ್ಷದ ಸಂಸದ ಭಗವಂತ ಖೂಬಾ ನಡುವಿನ ಜಗಳ ತಾರಕಕ್ಕೇರಿದ್ದು, ಬುಧವಾರ ಚವ್ಹಾಣ್‌ ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಜೀವಕ್ಕೆ ಅಪಾಯವಿದೆ ಎಂಬುದೂ ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದಾರೆ.


ಬೀದರ್‌ (ಮೇ.18) : ಔರಾದ್‌ನ ಬಿಜೆಪಿ ಶಾಸಕರಾಗಿ ಮರು ಆಯ್ಕೆಯಾಗಿರುವ ಮಾಜಿ ಸಚಿವ ಪ್ರಭು ಚವ್ಹಾಣ್‌ ಮತ್ತು ತಮ್ಮದೇ ಪಕ್ಷದ ಸಂಸದ ಭಗವಂತ ಖೂಬಾ ನಡುವಿನ ಜಗಳ ತಾರಕಕ್ಕೇರಿದ್ದು, ಬುಧವಾರ ಚವ್ಹಾಣ್‌ ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಜೀವಕ್ಕೆ ಅಪಾಯವಿದೆ ಎಂಬುದೂ ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ(BJP Candidate) ವಿರುದ್ಧವೇ ಔರಾದ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿ ಮೋಸ ಮಾಡಿದ್ದಾರೆ. ಅವರ ಬೆಂಬ​ಲಿಗ ಟೀಮ್‌​ನಿಂದ ನನ್ನ ಜೀವಕ್ಕೆ ಅಪಾ​ಯ​ವಿ​ದೆ. ಈ ಕುರಿ​ತಂತೆ ಪಕ್ಷದ ವರಿ​ಷ್ಠರು ಹಾಗೂ ಪೊಲೀ​ಸ​ರಿಗೆ ದೂರು ನೀಡು​ತ್ತಿ​ದ್ದೇ​ನೆ ಎಂದು ಚವ್ಹಾಣ್‌(Prabhu chauhan bjp candidate) ಆರೋಪಿಸಿದ್ದಾರೆ.

Latest Videos

undefined

‘ಸಿದ್ದು ಸಿಎಂ’ ಎಂದ ಪುಷ್ಪಾ ಅಮರನಾಥ, ಅಶೋಕ ಪಟ್ಟಣ್‌: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸುರ್ಜೇವಾಲ!

ಬುಧವಾರ ನಗ​ರ​ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ಹೆಸರಿನಲ್ಲಿ ಗೆಲವು ಸಾಧಿಸುತ್ತಿರುವ ಸಂಸದ ಭಗವಂತ ಖೂಬಾ(Bhagwanth Khuba MP) ಅವರ ಸಾಧನೆ ಜಿಲ್ಲೆಗೆ ಶೂನ್ಯವಾಗಿದೆ ಎಂದು ಆರೋ​ಪಿ​ಸಿ​ದರು.

ಬಿಜೆಪಿ ಅಭ್ಯರ್ಥಿಗಳನ್ನೇ ಸೋಲಿಸಲು ಸ್ಕೆಚ್‌ ಹಾಕಿ ತಂಡ ತಯಾ​ರು ಮಾಡಿಸಿದ್ದಾರೆ. ನನ್ನನ್ನು ಸೋಲಿಸಲು ಬಿ- ಟೀಮ್‌ ಮೂಲಕ ಕಾಂಗ್ರೆಸ್‌ಗೆ ಫಂಡಿಂಗ್‌ ಮಾಡಿಸಿದ್ದಾರೆ. ಕಳೆದ ಚುನಾವಣೆಯಲ್ಲೂ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾ​ರೆ. ಆದರೆ ನಾನು ಸುಮ್ಮನೆ ಕುಳಿತುಕೊಂಡೆ. ಅದಾ​ಗ್ಯೂ ಔರಾದ್‌ ಕ್ಷೇತ್ರದ ಜನ ಹಾಗೂ ಪಕ್ಷದ ಎಲ್ಲ ಶಕ್ತಿ ಕೇಂದ್ರಗಳ ಪ್ರಮುಖರು ನನ್ನ ಕೈ ಹಿಡಿದು ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಜನರ ಬಳಿ ತೆರಳಿ ನನ್ನನ್ನು 4ನೇ ಬಾರಿಗೆ ಗೆಲ್ಲಿಸಿದ್ದಾರೆ. ಅವರಿಗೆ ನಾನು ಚಿರ ಋುಣಿಯಾಗಿದ್ದೇನೆ ಎಂದರು.

ಚುನಾವಣೆ ಎಂದರೆ ವಿರೋಧ ಪಕ್ಷದವರೊಂದಿಗೆ ಇರುತ್ತವೆ. ಆದರೆ ಔರಾದ್‌ನಲ್ಲಿ ಭಗವಂತ ಖೂಬಾ ಮತ್ತು ಬಿಜೆಪಿ ಮಧ್ಯ ಚುನಾವಣೆ ನಡೆದಿದೆ. ನಾನು ಪಕ್ಷವನ್ನು ತಾಯಿ ಸಮಾನ ತಿಳಿದಿದ್ದೇನೆ. ಪಕ್ಷ ನನಗೆ ಬಹಳಷ್ಟುನೀಡಿದೆ. ಆದರೆ ಒಬ್ಬ ಪಕ್ಷದ ಸಂಸದನಾಗಿ ಅದೇ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ನನ್ನನ್ನು ಸೋಲಿಸುವ ಎಲ್ಲ ರೀತಿಯ ಕುತಂತ್ರಗಳನ್ನು ಬಳಸಿರುವುದು ನೋವಿನ ಸಂಗತಿಯಾಗಿದೆ ಎಂದ​ರು.

ಕಮಲನಗರ-ಬೀದರ್‌ ಹೆದ್ದಾರಿ ಡಬಲ್‌ ಪ್ಯಾಚಿಂಗ್‌:

ಔರಾದ್‌ನಲ್ಲಿ ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ತಮ್ಮ ಬಿ-ಟೀಮ್‌ ಅವರಿಂದ ಹೇಳಿಕೆ ನೀಡಿಸುತ್ತಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರೇ ಬೀದರ್‌-ಕಮಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿ ಮೂರು ವರ್ಷ ಆಗಿಲ್ಲ. ಡಬಲ್‌ ಪ್ಯಾಚಿಂಗ್‌ ನಡೆದಿದೆ ಎಂಬು​ವ​ದನ್ನು ಅರಿ​ಯಲಿ ಎಂದು ತಿಳಿ​ಸಿ​ದ​ರು.

ಸಿಪೆಟ್‌ ಕಾಲೇಜು ಆರಂಭಿಸಲು ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ಮಾಡಿಸಿದ್ದೀರಿ. ಕಾಲೇ​ಜಿನ ವ್ಯಾಪ್ತಿ ನಿಮ್ಮದೇ ಸಚಿವ ಖಾತೆಯಾಗಿದೆ. ಆದರೆ ಇಲ್ಲಿಯವರೆಗೆ ಕಾಮಗಾರಿ ಏಕೆ ಆರಂಭಗೊಂಡಿಲ್ಲ ಎಂದು ಕೇಂದ್ರ ಸಚಿವ ಭಗ​ವಂತ ಖೂಬಾ ಅವ​ರನ್ನು ಪ್ರಭು ಚವ್ಹಾ​ಣ್‌ ಪ್ರಶ್ನಿಸಿದರು.

ಕೇಂದ್ರ​ಕ್ಕೆ ದೂರು:

ಭಗವಂತ ಖೂಬಾ ಅವರು ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಎಲ್ಲ ರೀತಿಯ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಎಲ್ಲ ದಾಖಲಾತಿಗಳೊಂದಿಗೆ ಪ್ರಧಾನ ಮಂತ್ರಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ದೂರು ನೀಡುತ್ತಿದ್ದೇನೆ ಎಂದರು.

Sexual Harassment Case; ಬಂಧನ ಭೀತಿಯಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಪಾರು

ಭಗವಂತ ಖೂಬಾ ಹಾಗೂ ಅವರ ಬಿ-ಟೀಮ್‌ನಿಂದ ನನ್ನ ಜೀವಕ್ಕೆ ಅಪಾ​ಯ​ವಿದೆ. ಹೀಗಾಗಿ ಐಜಿ ಹಾಗೂ ಎಸ್‌ಪಿಗೆ ದೂರು ಕೊಡುತ್ತಿದ್ದೇನೆ ಎಂದು ಪ್ರಭು ಚವ್ಹಾಣ್‌ ಆರೋ​ಪಿ​ಸಿ​ದ​ರು.

ಬಿಜೆಪಿ ಅಭ್ಯರ್ಥಿಗಳನ್ನೇ ಸೋಲಿಸಲು ಸ್ಕೆಚ್‌ ಹಾಕಿ ತಂಡ ತಯಾ​ರು ಮಾಡಿಸಿದ್ದಾರೆ. ನನ್ನನ್ನು ಸೋಲಿಸಲು ಬಿ- ಟೀಮ್‌ ಮೂಲಕ ಕಾಂಗ್ರೆಸ್‌ಗೆ ಫಂಡಿಂಗ್‌ ಮಾಡಿಸಿದ್ದಾರೆ. ಚುನಾವಣೆ ಎದುರಾಳಿ ಪಕ್ಷದವರೊಂದಿಗೆ ಇರುತ್ತದೆ. ಆದರೆ ಔರಾದ್‌ನಲ್ಲಿ ಭಗವಂತ ಖೂಬಾ ಮತ್ತು ಬಿಜೆಪಿ ಮಧ್ಯ ಚುನಾವಣೆ ನಡೆದಿದೆ. ಒಬ್ಬ ಪಕ್ಷದ ಸಂಸದನಾಗಿ ಅದೇ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಸೋಲಿಸಲು ಎಲ್ಲ ರೀತಿಯ ಕುತಂತ್ರ ಮಾಡಿದ್ದು ನೋವಿನ ಸಂಗತಿ. ಇಷ್ಟೆಲ್ಲ ಅಪಸವ್ಯಗಳ ನಡುವೆಯೂ ಔರಾದ್‌ ಜನ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ನನ್ನನ್ನು 4ನೇ ಬಾರಿ ಗೆಲ್ಲಿಸಿದ್ದಾರೆ. ಅವರಿಗೆ ನಾನು ಚಿರ ಋುಣಿ.

- ಪ್ರಭು ಚವ್ಹಾಣ, ಔರಾದ್‌ ಬಿಜೆಪಿ ಶಾಸಕ

click me!