Karnataka Election Results 2023: ಕೈ ಹಿಡಿದ ಸಮುದಾಯಕ್ಕೆಲ್ಲ ಕಾಂಗ್ರೆಸ್‌ನಿಂದ ಡಿಸಿಎಂ ಹುದ್ದೆ

By Gowthami KFirst Published May 14, 2023, 4:11 PM IST
Highlights

ಯಾರಾಗ್ತಾರೆ ರಾಜ್ಯದ ಸಿಎಂ ಎಂಬ ಚರ್ಚೆಯ ನಡುವೆಯೇ  ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮೂರು ಸಮುದಾಯಕ್ಕೆ ಡಿಸಿಎಂ ಹುದ್ದೆ ಕೊಡಲು ಚಿಂತನೆ ಇದೆ ಎನ್ನಲಾಗಿದೆ.

ತುಮಕೂರು (ಮೇ.14): ಕರ್ನಾಟಕ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ರಾಜ್ಯದ ಸಿಎಂ ಯಾರೆಂಬ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಯಾರಲ್ಲಿ ಸಿಎಂ ಆಗುತ್ತಾರೆ ಎಂಬುದು  ಈಗ ಬಹು ಚರ್ಚಿತ ವಿಷಯವಾಗಿದ್ದು, ಇಡೀ ರಾಜ್ಯದ ಜನತೆ ಚಿತ್ತ ಇಟ್ಟಿದೆ. ಈ ನಡುವೆ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

Karnataka Election Results 2023: ಬರೋಬ್ಬರಿ ಶೇ. 4ರಷ್ಟು ವೋಟ್‌ ಶೇರ್‌ ಏರಿಸಿಕೊಂಡ ಕಾಂಗ್ರೆಸ್‌,

ಕಾಂಗ್ರೆಸ್ ನಲ್ಲೀಗ ಡಿಸಿಎಂ ಹುದ್ದೆ ಪ್ರಸ್ತಾಪವಾಗಿದ್ದು, ಮೂರು ಪ್ರಮುಖ‌ ಸಮುದಾಯಗಳಿಗೆ ಡಿಸಿಎಂ ಹುದ್ದೆ ಗ್ಯಾರಂಟಿ ಎನ್ನಲಾಗುತ್ತಿದೆ. ದಲಿತ, ಲಿಂಗಾಯತ ಮತ್ತು ಮುಸ್ಲಿಂ ಸಮುದಾಯಕ್ಕೆ ಅದೃಷ್ಟ ಹೆಚ್ಚಿದೆ. ಪಕ್ಷಕ್ಕೆ ಬೆಂಬಲಿಸಿದ ಸಮುದಾಯದ ವಿಶ್ವಾಸ ಉಳಿಸಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಕಾಂಗ್ರೆಸ್ ನಿಂದ ಡಿಸಿಎಂ ಸೂತ್ರ ಜಾರಿ ಮಾಡಲು ಚಿಂತನೆ ನಡೆದಿದ್ದು, ಭಾರೀ ಬೆಂಬಲ ನೀಡಿದ ಸಮುದಾಯವನ್ನು ‌ಲೋಕಾಸಭಾ ಚುನಾವಣೆ ತನಕ ಹಿಡಿದಿಟ್ಟುಕೊಳ್ಳಲು ಲೆಕ್ಕಾಚಾರ ಹಾಕಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‌ಜಾತಿ ಕಾರ್ಡ್ ಪ್ಲೇ ಮಾಡಲು ಚಿಂತನೆ ನಡೆದಿದ್ದು, ಮೂರು ಡಿಸಿಎಂ ಗಳಾದರೆ ಅವಕಾಶ ಪಡೆಯಲು ತೆರೆಮರೆಯಲ್ಲಿ ಲಾಭಿ ನಡೆಯುತ್ತಿದೆ.

ನಾನು ಸೋತು ಸಿದ್ದರಾಮಯ್ಯಗೆ ಸಹಕಾರ ಕೊಟ್ಟಿರುವೆ, ಪರೋಕ್ಷವಾಗಿ ನಾನೇ ಸಿಎಂ ಎಂ

ಇನ್ನೊಂದೆಡೆ ಸಿದ್ದರಾಮಯ್ಯ ರನ್ನು ಸಿಎಂ ಮಾಡುವಂತೆ ಕುರುಬರು ಆಗ್ರಹಿಸಿದ್ದಾರೆ. ಕುರುಬರ ಸಂಘದ ನೇತೃತ್ವದಲ್ಲಿ ನಾಯಕರು ಸಭೆ ನಡೆಸಿದ್ದಾರೆ.

click me!