ಪಕ್ಷದಲ್ಲಿ ಅಧಿಕಾರ ಅನುಭವಿಸಿ ಬೆನ್ನಿಗೆ ಚೂರಿ ಹಾಕಿದ ಸವದಿ ವಿಶ್ವಾಸಘಾತುಕ: ಎಂಪಿ ರೇಣುಕಾಚಾರ್ಯ

By Ravi Janekal  |  First Published Apr 15, 2023, 10:15 AM IST

ಮೂರು ಬಾರಿ ಶಾಸಕ, ಸಚಿವನಾಗಲು ಬಿಜೆಪಿ ಅವಕಾಶ ನೀಡಿತು್ತ. ಸೋತರೂ ಉಪ ಮುಖ್ಯಮಂತಿ್ರ ಹುದೆ್ದ ನೀಡಿದ್ದ ಪಕ್ಷ ತೊರೆದ ಲಕ್ಷ್ಮಣ ಸವದಿ ಒಬ್ಬ ವಿಶಾ್ವಸಘಾತುಕ ಎಂದು ಹೊನಾ್ನಳಿ ಶಾಸಕ ಎಂ.ಪಿ.ರೇಣುಕಾಚಾಯರ್ ಹರಿಹಾಯಿ್ದದಾ್ದರೆ.


ದಾವಣಗೆರೆ (ಏ.15) : ಮೂರು ಬಾರಿ ಶಾಸಕ, ಸಚಿವನಾಗಲು ಬಿಜೆಪಿ ಅವಕಾಶ ನೀಡಿತ್ತು. ಸೋತರೂ ಉಪ ಮುಖ್ಯಮಂತಿ್ರ ಹುದ್ದೆ ನೀಡಿದ್ದರು. ಆದರೂ ಇದೀಗ ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್ ಸೇರಿಕೊಂಡಿರುವ ಲಕ್ಷ್ಮಣ ಸವದಿ ಒಬ್ಬ ವಿಶ್ವಾಸಘಾತುಕ, ಸ್ವಾರ್ಥಿ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಹರಿಹಾಯ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ್ ಸವದಿ ಚುನಾವಣೆಯಲ್ಲಿ ಸೋತರೂ ಉಪ ಮುಖ್ಯಮಂತ್ರಿ ಮಾಡಲಾಗಿತ್ತು. ಪಕ್ಷದ ಋಣ ಮರೆತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದಾರೆ. ಇದು ವಿಶ್ವಾಸಘಾತುಕ. ಕಾಂಗ್ರೆಸ್ ಪಕ್ಷವು ಈಗಾಗಲೇ ಮಕಾಡೆ ಮಲಗಿದೆ. ಚುನಾವಣೆಯಲ್ಲಿ ಹೀನಾಯವಾಗಿ ಸೋಲುವುದು ನಿಶ್ಚಿತ ಎಂದರು.

Latest Videos

undefined

Karnataka Assembly Elections 2023: ಬಿಜೆಪಿ ತೊರೆದು ಸವದಿ ಕಾಂಗ್ರೆಸ್‌ಗೆ

 ಅಥಣಿಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ, ಲಕ್ಷ್ಮಣ ಸವದಿ(Laxman savadi)ಮತ್ತೆ ಶಾಸಕರೂ ಆಗಲ್ಲ. ಸೋತವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟ ನಮ್ಮಂತಹ ನಿಷ್ಠಾವಂತ ಬಿಜೆಪಿ ಕಾಯರ್ಕತರ್ರಿಗೆ ಪಕ್ಷ ಬಾಯಿ ಮುಚ್ಚಿಸಿತ್ತು. ನಾಲ್ಕೈದು ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಿಸುವಷ್ಟೂ ಸವದಿ ಸಮರ್ಥನಲ್ಲ. ಅಥಣಿ ಕ್ಷೇತ್ರದ ಜನರೇ ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ. ಅಧಿಕಾರ ಅನುಭವಿಸಿ ಈಗ ಬೆನ್ನಿಗೆ ಚೂರಿ ಹಾಕುವ ಸವದಿ ಪಕ್ಷದ್ರೋಹಿ, ವಿಶ್ವಾಸಘಾತುಕ ಎಂದು ಕಿಡಿಕಾರಿದರು.

ಪಕ್ಷ ತೊರೆದವರಿಗೆ ಬಾಗಿಲು ಬಂದ್‌: ಅರುಣ್‌ಸಿಂಗ್‌

ಬೆಂಗಳೂರು : ಪಕ್ಷವನು್ನ ಬಿಟ್ಟು ಹೋಗುವವರಿಗೆ ಸದ್ಯಕೆ್ಕ ಮತೆ್ತ ಪಕ್ಷದ ಬಾಗಿಲು ತೆರೆಯುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯರ್ದಶಿರ್ಯೂ ಆಗಿರುವ ಪಕ್ಷದ ರಾಜ್ಯ ಉಸು್ತವಾರಿ ಅರುಣ್‌ ಸಿಂಗ್‌ ಹೇಳಿದಾ್ದರೆ.

 

ಲಕ್ಷ್ಮಣ ಸವದಿ ಜತೆ ಇನ್ನು ಅನೇಕರು ಕಾಂಗ್ರೆಸ್ ಸೇರಲಿದ್ದಾರೆ; ಡಿ.ಕೆ. ಶಿವಕುಮಾರ್

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದಿ್ದಗಾರರೊಂದಿಗೆ ಮಾತನಾಡಿದ ಅವರು, ಐದಾರು ಮಂದಿ ಪಕ್ಷ ತೊರೆದರೂ ನಷ್ಟವೇನಿಲ್ಲ. ಕಾಂಗೆ್ರಸ್‌ ಸೇರಿದ ಬಳಿಕ ಅವರೇ ಪಶಾ್ಚತಾ್ತಪ ಪಡುತಾ್ತರೆ. ಬಿಜೆಪಿ ಪಕ್ಷದಲ್ಲಿ ಲಕ್ಷಾಂತರ ಕಾಯರ್ಕತರ್ರು ಶಾಸಕ, ಸಂಸದರಾಗದೇ ಕೆಲಸ ಮಾಡುತ್ತಲೇ ಇದ್ದಾರೆ. ಟಿಕೆಟ್‌ ಸಿಗದಿದ್ದಾಗ ಅಸಮಾಧಾನಗೊಳು್ಳವುದು ಸಹಜ. ಆದರೆ, ಉನ್ನತ ಸಾ್ಥನಗಳನು್ನ ಪಡೆದರೂ ಸಾ್ವಥರ್ಕಾ್ಕಗಿ ಪಕ್ಷ ತೊರೆಯುವುದನು್ನ ಜನರು ಮತು್ತ ಮತದಾರರು ಮರೆಯುವುದಿಲ್ಲ ಎಂದು ತೀಕ್ಷ$್ಣವಾಗಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತಿ್ರ, ವಿಧಾನ ಪರಿಷತ್‌ ಸದಸ್ಯ ಸಾ್ಥನ ನೀಡಲಾಯಿತು. ಅಲ್ಲದೆ ಪಕ್ಷದ ಉನ್ನತ ಸಮಿತಿಗಳಲೂ್ಲ ಸಾ್ಥನ ನೀಡಲಾಗಿತು್ತ. ಇದರ ಕುರಿತು ಅವರೇ ಯೋಚಿಸಬೇಕು ಎಂದರು.

click me!