ಬ್ಯಾಡಗಿ ಕಾಂಗ್ರೆಸ್: ಸಂಧಾನ ಯಶಸ್ವಿ, ಬಂಡಾಯ ಕೈಬಿಟ್ಟ ಎಸ್‌ಆರ್ ಪಾಟೀಲ್

By Kannadaprabha NewsFirst Published Apr 16, 2023, 10:36 AM IST
Highlights

ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಸಿಡಿದೆದ್ದಿದ್ದ ಎಸ್‌.ಆರ್‌. ಪಾಟೀಲ ಅವರೊಂದಿಗೆ ರಾಜ್ಯ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಈ ಮೂಲಕ ಬಂಡಾಯದ ಕಹಳೆ ಊದಿದ್ದ ಪಾಟೀಲ ಅದರಿಂದ ಹಿಂದೆ ಸರಿದು ಪಕ್ಷದ ಅಧಿಕೃತ ಅಭ್ಯರ್ಥಿ ಬಸವರಾಜ ಶಿವಣ್ಣನವರ ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದ್ದಾರೆ.

ಬ್ಯಾಡಗಿ (ಏ.15) : ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಸಿಡಿದೆದ್ದಿದ್ದ ಎಸ್‌.ಆರ್‌. ಪಾಟೀಲ ಅವರೊಂದಿಗೆ ರಾಜ್ಯ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಈ ಮೂಲಕ ಬಂಡಾಯದ ಕಹಳೆ ಊದಿದ್ದ ಪಾಟೀಲ ಅದರಿಂದ ಹಿಂದೆ ಸರಿದು ಪಕ್ಷದ ಅಧಿಕೃತ ಅಭ್ಯರ್ಥಿ ಬಸವರಾಜ ಶಿವಣ್ಣ(Basavaraj Shivanna)ನವರ ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಅಭ್ಯರ್ಥಿ ಬಸವರಾಜ ಶಿವಣ್ಣನವರ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದು ನಿಜ. ಎಲ್ಲ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಕಾಂಗ್ರೆಸ್‌ ರಾಜ್ಯ ನಾಯಕರು ಕರೆದು ಸಂಧಾನ ಮಾಡಿದರು. ಕಳೆದ 40 ವರ್ಷದಿಂದ ಪ್ರಾಮಾಣಿಕವಾಗಿ ದುಡಿದು ಕಟ್ಟಿದ ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.

ವಿಜಯಪುರ: ಕಾಂಗ್ರೆಸ್‌ ನಾಯಕ ಎಸ್‌.ಆರ್‌. ಪಾಟೀಲ್‌ ಫೋಟೋ ಇರುವ ರಾಶಿ ರಾಶಿ ಗಿಫ್ಟ್‌ ಪತ್ತೆ..!

ಅಭ್ಯರ್ಥಿ ಬಸವರಾಜ ಶಿವಣ್ಣನವರ ಮಾತನಾಡಿ, ದುರಾಡಳಿತ, ಭ್ರಷ್ಟಾಚಾರ, ಕಮಿಷನ್‌ ದಂಧೆ ಸೇರಿದಂತೆ ರಾಜ್ಯ ಲೂಟಿ ಮಾಡಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಬಡವರ ಜೀವ ಹಿಂಡುತ್ತಿರುವ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣವಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತದಿಂದ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಬಡವರಿಗೆ ಕಾಂಗ್ರೆಸ್‌ ಪಕ್ಷವೇ ಆಧಾರ ಎಂಬುದು ಸರ್ವಕಾಲಿಕ ಸತ್ಯ. ರಾಜ್ಯ ಜನತೆಗೆ ನೀಡುತ್ತಿರುವ ಉಚಿತ ವಿದ್ಯುತ್‌ ಸೇರಿದಂತೆ ಹಲವು ಯೋಜನೆಗಳ ಗ್ಯಾರಂಟಿ ಕಾರ್ಡ್‌ ಮನೆ-ಮನೆಗೆ ತಲುಪಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕಿದೆ. ಅಂದಾಗ ಮಾತ್ರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದರು.

ತಾಲೂಕಾಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ಎಲ್ಲ ಮುಖಂಡರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಪಕ್ಷಕ್ಕೆ ದುಡಿದಲ್ಲಿ ಮಾತ್ರ ಅಭ್ಯರ್ಥಿ ಗೆಲುವು ಸಾಧ್ಯ ಎಂದರು.

 

ನನಗೆ ಪಕ್ಷ ಎಲ್ಲ ಕೊಟ್ಟಿದೆ, ಅಸಮಾಧಾನ ಪ್ರಶ್ನೆಯೇ ಇಲ್ಲ:ಮಾಜಿ ಸಚಿವ ಎಸ್.ಆರ್. ಪಾಟೀಲ

ಭೀರಪ್ಪ ಬಣಕಾರ, ಶಂಕರಗೌಡ ಪಾಟೀಲ್‌, ಸುರೇಶಗೌಡ ಪಾಟೀಲ (ದಿಡಗೂರು), ಶಿವಪ್ಪ ಅಂಬಲಿ, ರಾಜು ಶಿಡೇನೂರ, ಪ್ರಕಾಶ ಬನ್ನಿಹಟ್ಟಿ, ಖಾದರಸಾಬ್‌ ದೊಡ್ಮನಿ, ದುರ್ಗೇಶ ಗೋಣೆಮ್ಮನರ, ಡಿ.ಎಚ್‌. ಬುಡ್ಡನಗೌಡ್ರ, ರಮೇಶ ಮೋಟೆಬೆನ್ನೂರ, ರಮೇಶ ಸುತ್ತಕೋಟಿ ಭಾಗವಹಿಸಿದ್ದರು.

click me!