ಉಡುಪಿ: ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಬಿಡುಗಡೆ ಮಾಡಿದ ಸುರ್ಜೇವಾಲ

By Kannadaprabha News  |  First Published Mar 4, 2023, 12:13 PM IST

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಶುಕ್ರವಾರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಭರವಸೆಗಳ ಗ್ಯಾರಂಟಿ ಕಾರ್ಡ್‌ ಬಿಡುಗಡೆಗೊಳಿಸಿದರು.


ಉಡುಪಿ (ಮಾ.4) : ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಶುಕ್ರವಾರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಭರವಸೆಗಳ ಗ್ಯಾರಂಟಿ ಕಾರ್ಡ್‌ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಪಕ್ಷದ ಎಲ್ಲಾ ಕಾರ್ಯಕರ್ತರು ತಮ್ಮ ಕ್ಷೇತ್ರದ ಪ್ರತಿಯೊಬ್ಬರ ಮನೆಗೆ ತೆರಳಿ, ಪಕ್ಷದ ಯೋಜನೆಗಳನ್ನು ತಿಳಿಸಿ. ಸವಲತ್ತು ಕೇಳುವವರ ಅವರ ವಿಳಾಸ, ಮೊಬೈಲ್‌ ಸಂಖ್ಯೆ ಪಡೆದು, ಅವರಿಗೆ ಪಕ್ಷದ ಭರವಸೆಗಳ ಗ್ಯಾರೆಂಟಿ ಕಾರ್ಡ್‌ ನೀಡಿ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವರ ಮನೆಗೆ ಸವಲತ್ತುಗಳು ತಲುಪಲಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ(Dhruvanarayana) ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರ(Assembly constituency)ದಲ್ಲಿ 40 ಸಾವಿರ ಗ್ಯಾರಂಟಿ ಕಾರ್ಡ್‌(Guarantee Card)ಗಳನ್ನು ಹಂಚಲು ತಯಾರಿ ನಡೆಸಲಾಗಿದೆ. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು ಮತದಾರರಿಗೆ ತಲುಪಿಸಬೇಕು ಎಂದರು.

Tap to resize

Latest Videos

undefined

ಪುತ್ರನ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ:  ₹8 ಕೋಟಿ ನಗದು ಪತ್ತೆಯಾಗ್ತಿದ್ದಂತೆ ಶಾಸಕ ಮಾಡಾಳ್ ನಾಪತ್ತೆ!

ಎಐಸಿಸಿ(KPCC) ಕಾರ್ಯದರ್ಶಿ ರೋಝಿ ಜಾನ್‌, ಪಕ್ಷದ ನಾಯಕರಾದ ಮಧು ಬಂಗಾರಪ್ಪ, ವಿನಯ್‌ ಕುಮಾರ್‌ ಸೊರಕೆ, ಗೋಪಾಲ ಪೂಜಾರಿ, ಜಿಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಾಸಕ ಮಾಡಾಳರನ್ನು ಬಂಧಿಸಲು ಒತ್ತಾಯ:

ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪ(Madal virupakshappa)ರನ್ನು ತಕ್ಷಣ ಬಂಧಿಸಬೇಕು, ಈ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ(CM Basavaraj Bommai) ರಾಜೀನಾಮೆ ಕೊಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ(Randeep singh surjewala) ಆಗ್ರಹಿಸಿದ್ದಾರೆ.

ಅವರು ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಬಿಜೆಪಿ ಶಾಸಕ(BJP MLA)ನ ಪುತ್ರನ ಭ್ರಷ್ಟಾಚಾರದ ಕುರಿತು ಪ್ರತಿಕ್ರಿಯಿಸಿದರು.

ಕೆಎಸ್‌ಡಿಎಲ್‌(KSDL) ಅಧ್ಯಕ್ಷ, ಶಾಸಕ ವಿರೂಪಾಕ್ಷ ಮನೆಯಲ್ಲಿ 6 ಕೋಟಿ ರು. ಅಕ್ರಮ ಹಣ ಪತ್ತೆಯಾಗಿದೆ ಎಂದರೆ ಬೊಮ್ಮಾಯಿ ಮೂಗಿನ ಕೆಳಗೆ ನಡೆಯುತ್ತಿರುವ ಭ್ರಷ್ಟಾಚಾರ ಬಯಲಾಗಿದೆ. ಒಂದು ವಾರದಲ್ಲಿ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕು, ಭ್ರಷ್ಟಾಚಾರ ಮತ್ತು ಲೂಟಿಯ ಸಂಪೂರ್ಣ ದಾಖಲೆಯನ್ನು ತೆರೆದಿಡಬೇಕು ಎಂದವರು ಆಗ್ರಹಿಸಿದರು.

ಮಾಡಾಳ್ ವಿರೂಪಾಕ್ಷಪ್ಪ ರಾಜಕೀಯ ಜೀವನ ಅಂತ್ಯ?: ಹೊಸ ಅಭ್ಯರ್ಥಿಗೆ ಬಿಜೆಪಿ ತಲಾಶ್..!

ಈ ಘಟನೆಯಿಂದ ಬಿಜೆಪಿ ಎಂದರೆ ಭ್ರಷ್ಟಜನತಾ ಪಾರ್ಟಿ(Bhrasta janata party) ಎಂದು ಸಾಬೀತಾಗಿದೆ, ಬೊಮ್ಮಾಯಿ ಸರ್ಕಾರ ಶೇ 40ರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ರಾಜ್ಯವೇ ತಲೆತಗ್ಗಿಸುವಂತಾಗಿದೆ.

ಬಿಜೆಪಿಯವರು ಮೈಸೂರು ಸ್ಯಾಂಡಲ್‌ ಸುವಾಸನೆಯನ್ನೇ ಭ್ರಷ್ಟಮಾಡಿಬಿಟ್ಟಿದ್ದಾರೆ. ಸಾಬೂನಿನಿಂದ ಎಷ್ಟುಭ್ರಷ್ಟಾಚಾರವಾಗಿದೆ? ಈ ಹಣ ಎಲ್ಲಿಗೆ ಹೋಗಿದೆ? ಅದರಲ್ಲಿ ಬಸವರಾಜ್‌ ಬೊಮ್ಮಾಯಿಯವರಿಗೆ, ಇತರರಿಗೆ ಎಷ್ಟುಪಾಲು ಇದೆ ? ಸಿಎಂ ಯಾಕೆ ಮೌನವಾಗಿದ್ದಾರೆ? ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಿಲ್ಲ ಯಾಕೆ? ಶಾಸಕ ವಿರೂಪಾಕ್ಷಪ್ಪ ತಲೆಮರೆಸಿಕೊಳ್ಳಲು ಬಿಟ್ಟಿದ್ಯಾಕೆ? ನರೇಂದ್ರ ಮೋದಿ, ಜೆಪಿ ನಡ್ದಾ, ಅಮಿತ್‌ ಶಾ ಎಲ್ಲಿದ್ದೀರಿ? ಇಡಿ, ಸಿಬಿಐ ಯಾವಾಗ ಕರ್ನಾಟಕಕ್ಕೆ ಬರುತ್ತದೆ? ಇತರ ಶಾಸಕರು ಮಂತ್ರಿಗಳ ಮನೆಗೆ ಯಾವಾಗ ದಾಳಿ ಮಾಡುತ್ತೀರಿ? ಎಂದೆಲ್ಲಾ ಸರಣಿ ಪ್ರಶ್ನೆಗಳನ್ನು ಕೇಳಿದ ಸುರ್ಜೆವಾಲ, ನಾಡಿನ ಜನರ ಪರವಾಗಿ ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದರು.

click me!