ವಿಜಯನಗರ: ನಾಲ್ಕು ಬಾರಿ ಗೆದ್ದದ್ದಾಯ್ತು, ಈ ಸಲ ಮಗನನ್ನ ಕಣಕ್ಕಿಳಿಸ್ತಾರಾ ಆನಂದ್‌ ಸಿಂಗ್‌?

By Girish Goudar  |  First Published Mar 4, 2023, 9:49 AM IST

ಕಳೆದ ದೊಂದು ವರ್ಷದಿಂದ ಸಚಿವ ಆನಂದ ಸಿಂಗ್ ಎಲ್ಲ ಕಾರ್ಯಕ್ರಮಗಳಿಗೂ ತಮ್ಮ ಪುತ್ರನನ್ನ ಮುಂದೆ ಬಿಡುತ್ತಿದ್ದಾರೆ.  ಸಮಾಜ ಸೇವಕರು ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಸಿದ್ಧಾರ್ಥ್ ಸಿಂಗ್ ಕ್ಷೇತ್ರದಲ್ಲಿ ಭರ್ಜರಿಯಾಗಿ ಓಡಾಡುತ್ತಿದ್ದಾರೆ.  


ವಿಜಯನಗರ(ಮಾ.04):  ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದದ್ದಾಯ್ತು. ಈ ಬಾರಿ ಮಗನನ್ನು ಕಣಕ್ಕಿಳಿಸೋ ಬಗ್ಗೆ ಆನಂದ್‌ ಸಿಂಗ್‌ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಹೌದು,  ಸಚಿವ ಆನಂದ ಸಿಂಗ್ ಅವರು ಹೊಸ ತಂತ್ರಗಾರಿಕೆಯನ್ನ ಹೆಣೆದಿದ್ದು ಮಗನ ಪರ ಅಲೆ ಎಬ್ಬಿಸಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರಂತೆ. 

ಕಳೆದ ದೊಂದು ವರ್ಷದಿಂದ ಸಚಿವ ಆನಂದ ಸಿಂಗ್ ಎಲ್ಲ ಕಾರ್ಯಕ್ರಮಗಳಿಗೂ ತಮ್ಮ ಪುತ್ರನನ್ನ ಮುಂದೆ ಬಿಡುತ್ತಿದ್ದಾರೆ.  ಸಮಾಜ ಸೇವಕರು ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಸಿದ್ಧಾರ್ಥ್ ಸಿಂಗ್ ಕ್ಷೇತ್ರದಲ್ಲಿ ಭರ್ಜರಿಯಾಗಿ ಓಡಾಡುತ್ತಿದ್ದಾರೆ.  

Tap to resize

Latest Videos

undefined

ಚುನಾವಣೆ ಹಿನ್ನಲೆ ಸಚಿವ ಆನಂದ ಸಿಂಗ್ ಮಾಸ್ಟರ್ ಪ್ಲಾನ್!

ಸಿದ್ದಾರ್ಥ್ ಸಿಂಗ್ ಎಲ್‌ಎಲ್‌ಬಿ ಪದವಿಯನ್ನು ಕಂಪ್ಲೀಟ್ ಮಾಡಿದ್ದಾರೆ. ಜನರ ಜೊತೆಗೆ ಹೇಗಿರಬೇಕು ಎನ್ನುವದು ಸೇರಿದಂತೆ ರಾಜಕೀಯ ಚಟುವಟಿಕೆ ಕುರಿತು ಟ್ರೈನಿಂಗ್ ನೀಡಲಾಗ್ತಿದೆ. ಗ್ರಾಮ ವಾಸ್ತವ್ಯದ ಹೆಸರಲ್ಲಿ ಜನರ ಜೊತೆಗೆ ಓಡಾಟ, ಕ್ರಿಕೆಟ್ ಟೂರ್ನಾಮೆಂಟ್, ಜಾತ್ರೆ, ಮದುವೆ ಹಬ್ಬ ಎಲ್ಲದಕ್ಕೂ ಸಿದ್ದಾರ್ಥ ಬರುತ್ತಾರೆ ಅಂತ ಆನಂದ ಸಿಂಗ್ ಹೇಳುತ್ತಾರೆ. 

ಆನಂದ ಸಿಂಗ್ ನಿಜಕ್ಕೂ ತಮ್ಮ ಮಗನನ್ನು ಕಣಕ್ಕಿಳಿಸ್ತಾರಾ? ಎಂಬ ಚರ್ಚೆ ಕೂಡ ಸಾಕಷ್ಟು ನಡೆಯುತ್ತಿದೆ. ಆದರೆ ಆನಂದ ಸಿಂಗ್ ನಡೆ ಮಾತ್ರ ಸಾಕಷ್ಟು ನಿಗೂಢವಾಗಿಯೇ ಇದೆ. ಇದೀಗ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಯ ಕಬಡ್ಡಿ ಆಟಕ್ಕೂ ಸಿದ್ದಾರ್ಥ ಸಿಂಗ್ ನೇತೃತ್ವ ನೀಡಲಾಗಿದೆ. ಆದ್ರೇ, ಈ ಬಗ್ಗೆ ತುಟಿ ಬಿಚ್ಚದ ಸಿದ್ದಾರ್ಥ ಸಿಂಗ್ ಅಪ್ಪನಿಗೆ ಕೆಲಸಕ್ಕೆ ಹೆಗಲು ನೀಡ್ತಿದ್ದೇನೆ. ರಾಜಕೀಯ ಬರೋದು ಚುನಾವಣೆ ಸ್ಪರ್ಧೆ ಮಾಡೋದು ನನಗಿಂತ ಅಪ್ಪನನ್ನು‌ ಕೇಳಿ ಅಂತ ಸಿದ್ದಾರ್ಥ ಸಿಂಗ್‌ ಜಾಣತನದಿಂದ ಜಾರಿಕೊಂಡಿದ್ದಾರೆ.  

click me!