ರಾಹುಲ್‌ ಗಾಂಧಿ ಜೊತೆ ಪ್ರಯಾಣ ಖುಷಿ ನೀಡಿತು: ಡೆಲಿವರಿ ಬಾಯ್‌!

Published : May 08, 2023, 07:23 AM IST
ರಾಹುಲ್‌ ಗಾಂಧಿ ಜೊತೆ ಪ್ರಯಾಣ ಖುಷಿ ನೀಡಿತು: ಡೆಲಿವರಿ ಬಾಯ್‌!

ಸಾರಾಂಶ

ಚುನಾವಣಾ ಪ್ರಚಾರದ ಅಂಗವಾಗಿ ಬೆಂಗಳೂರಿನಲ್ಲಿ ಡೆಲಿವರಿ ಕೆಲಸಗಾರರ ಜತೆ ಸಂವಾದ ನಡೆಸಿದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು, ಡೆಲಿವರಿ ಯುವಕನ ಬೈಕ್‌ನಲ್ಲೇ ಸಾಮಾನ್ಯ ಜನರಂತೆ ಹಿಂಬದಿ ಸವಾರರಾಗಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು.

ಬೆಂಗಳೂರು (ಮೇ.08): ಚುನಾವಣಾ ಪ್ರಚಾರದ ಅಂಗವಾಗಿ ಬೆಂಗಳೂರಿನಲ್ಲಿ ಡೆಲಿವರಿ ಕೆಲಸಗಾರರ ಜತೆ ಸಂವಾದ ನಡೆಸಿದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು, ಡೆಲಿವರಿ ಯುವಕನ ಬೈಕ್‌ನಲ್ಲೇ ಸಾಮಾನ್ಯ ಜನರಂತೆ ಹಿಂಬದಿ ಸವಾರರಾಗಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು. 

ಬೆಂಗಳೂರಿನ ಐಕಾನಿಕ್‌ ಏರ್‌ಲೈನ್ಸ್‌ ಹೋಟೆಲ್‌ನಲ್ಲಿ ಅಸಂಘಟಿತ ಡೆಲಿವರಿ ಕಾರ್ಮಿಕರು ಮತ್ತು ಡಂಜೊ, ಸ್ವಿಗ್ಗಿ, ಜೊಮ್ಯಾಟೋ, ಬ್ಲಿಂಕಿಟ್‌ ಡೆಲಿವರಿ ಹುಡುಗರ ಜತೆ ರಾಹುಲ್‌ ಗಾಂಧಿ ಸಂವಾದ ನಡೆಸಿದರು.  ಸಂವಾದ ಬಳಿಕ ಎಂ.ಜಿ. ರಸ್ತೆ ಹಾಗೂ ಸೇಂಟ್‌ ಮಾರ್ಕ್ಸ್ ವೃತ್ತದ ನಡುವಿನ ಏರ್‌ಲೈನ್ಸ್‌ ಹೋಟೆಲ್‌ನಿಂದ ವಸಂತನಗರದ ಶಾಂಘ್ರಿಲಾ ಹೋಟೆಲ್‌ ಕಡೆಗೆ ರಾಹುಲ್‌ ಗಾಂಧಿ ತೆರಳಬೇಕಿತ್ತು. 

ಪ್ರಧಾನಿ ಮೋದಿ ಮೆಗಾ ಪ್ರಚಾರಕ್ಕೆ ತೆರೆ: ಕಡೇ ದಿನ ಬೆಂಗಳೂರಲ್ಲಿ ರೋಡ್‌ ಶೋ

ಈ ವೇಳೆ ಸಂವಾದ ಮುಗಿಸಿಕೊಂಡು ತೆರಳಲು ಮುಂದಾಗಿದ್ದ ಡೆಲಿವರಿ ಯುವಕನ ಬೈಕ್‌ನ ಹಿಂಬದಿಯಲ್ಲಿ ಹೆಲ್ಮೆಟ್‌ ಧರಿಸಿಕೊಂಡು ಕುಳಿತ ರಾಹುಲ್‌ ಗಾಂಧಿ ಶಾಂಘ್ರಿಲಾ ಹೋಟೆಲ್‌ಗೆ ತೆರಳುವಂತೆ ಸೂಚನೆ ನೀಡಿದರು. ಇದರಿಂದ ಅಚ್ಚರಿಗೊಂಡ ಡೆಲಿವರಿ ಯುವಕ ಬಳಿಕ ರಾಹುಲ್‌ ಗಾಂಧಿ ಅವರನ್ನು ಕರೆದುಕೊಂಡು ಶಾಂಘ್ರಿಲಾ ಹೋಟೆಲ್‌ನತ್ತ ತೆರಳಿದರು. ಡೆಲಿವರಿ ಯುವಕನ ಜತೆ ರಾಹುಲ್‌ ಗಾಂಧಿ ಅವರು ರಾಜ್ಯ ಸರ್ಕಾರದ 40 ಪರ್ಸೆಂಟ್‌ ಭ್ರಷ್ಟಾಚಾರ, ಜನ ವಿರೋಧಿ ನೀತಿಗಳು ಹಾಗೂ ಡೆಲಿವರಿ ಕೆಲಸಗಾರರ ಸಮಸ್ಯೆಗಳನ್ನು ಕೇಳಿದರು ಎಂದು ಕಾಂಗ್ರೆಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬಹಳ ಖುಷಿಯಾಯಿತು: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಶೀಲನ್‌, ಮೊದಲಿಗೆ ಹಿಂಬದಿ ಯಾರೋ ಬಂದು ಕೂತಾಗ ಯಾರು ಎಂಬುದು ಗೊತ್ತಾಗಲಿಲ್ಲ. ಬಳಿಕ ಹಿಂದೆ ತಿರುಗಿ ರಾಹುಲ್‌ ಗಾಂಧಿ ಅವರನ್ನು ನೋಡಿ ಕ್ಷಣಕಾಲ ಭಯವಾಯಿತು. ಅವರನ್ನು ರಾಹುಲ್‌ ಗಾಂಧಿ ಅವರನ್ನು ಶಾಂಘ್ರಿಲಾ ಹೋಟೆಲ್‌ವರೆಗೂ ಕರೆದುಕೊಂಡು ಬಂದೆ. ಗಾಡಿ ಓಡಿಸುವಾಗಲೂ ಗಣ್ಯ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂಬ ಭಯವಿತ್ತು. ಬಳಿಕ ತುಂಬಾ ಖುಷಿಯಾಯಿತು. ಇದು ನನ್ನ ಜೀವನದಲ್ಲಿ ಅವಿಸ್ಮರಣೀಯ ಘಟನೆ ಎಂದು ಖುಷಿ ಹಂಚಿಕೊಂಡರು.

ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಮರೆತ ಕಾಂಗ್ರೆಸ್‌: ಸಚಿವ ಅಮಿತ್‌ ಶಾ ಕಿಡಿ

ರಾಹುಲ್‌ ಗಾಂಧಿ ಅವರ ಮಾತುಗಳನ್ನು ವಿವರಿಸಿದ ಅವರು, ಡೆಲಿವರಿ ಬಾಯ್ಸ್‌ಗೆ ರಾಜಸ್ತಾನದಲ್ಲಿ ಜೀವ ವಿಮೆ ಮಾಡಿಸಲಾಗಿದೆ. ಕರ್ನಾಟಕದಲ್ಲಿನ ಡೆಲಿವರಿ ಬಾಯ್ಸ್‌ಗೂ ಅದೇ ರೀತಿ ವಿಮೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!