ಹಾಸನದ ಶಾಸಕರು ಹೊಳೆನರಸೀಪುರ ಹಾಗೂ ಹೇಮಾವತಿ ನಗರಕ್ಕೆ ಸವಾಲು ಹಾಕಿದ್ದಾರೆ. ಆದರೆ, ಹೊಳೆನರಸೀಪುರ ಹಾಗೂ ಹೇಮಾವತಿ ನಗರ ಒಂದಾದರೆ ಬಿಜೆಪಿ ಏನಾಗುತ್ತೆ ನೋಡಿ. ‘ಇಷ್ಟುದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ’ ಎಂದು ಹಾಸನದ ಶಾಸಕ ಪ್ರೀತಂಗೌಡರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು.
ಹಾಸನ (ಏ.20): ಹಾಸನದ ಶಾಸಕರು ಹೊಳೆನರಸೀಪುರ ಹಾಗೂ ಹೇಮಾವತಿ ನಗರಕ್ಕೆ ಸವಾಲು ಹಾಕಿದ್ದಾರೆ. ಆದರೆ, ಹೊಳೆನರಸೀಪುರ ಹಾಗೂ ಹೇಮಾವತಿ ನಗರ ಒಂದಾದರೆ ಬಿಜೆಪಿ ಏನಾಗುತ್ತೆ ನೋಡಿ. ‘ಇಷ್ಟು ದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ’ ಎಂದು ಹಾಸನದ ಶಾಸಕ ಪ್ರೀತಂ ಗೌಡರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು. ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ರಾರಯಲಿ ನಡೆಸಿದ್ದ ಬಿಜೆಪಿಯ ಪ್ರೀತಂ ಗೌಡ, ‘ಹೊಳೆನರಸೀಪುರ ಹಾಗೂ ಹೇಮಾವತಿ ನಗರ (ಹಾಸನದ ಸ್ವರೂಪ್ ಮನೆಯಿರುವ ಪ್ರದೇಶ)ಕ್ಕೆ ಕೇಳುವ ಹಾಗೆ ಘೋಷಣೆ ಕೂಗಿ’ ಎಂದು ಕಾರ್ಯಕರ್ತರಿಗೆ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಜ್ವಲ್, ಎಲ್ಲಿಂದಲೋ ಜನರನ್ನು ಕರೆದುಕೊಂಡು ಬಂದು ಶಕ್ತಿ ಪ್ರದರ್ಶನ ತೋರಿಸುವುದಲ್ಲ. ನಾಳೆ ನಾವೂ ತೋರಿಸ್ತೇವೆ. ಪಕ್ಕದ ಜಿಲ್ಲೆಯಿಂದ ಅಲ್ಲ, ಪಕ್ಕದ ತಾಲೂಕಿನಿಂದ ಅಲ್ಲ. ಇದೇ ಕ್ಷೇತ್ರದ ಜನರು ಬರ್ತಾರೆ ನೋಡಿ. ಇದಕ್ಕೆಲ್ಲಾ ನಾವು ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರುವುದಿಲ್ಲ. ಪ್ರೀತಿಯಿಂದ ಮತದಾರರೇ ಬರುತ್ತಾರೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ರಾಮಚಂದ್ರಗೆ ಮಂಡ್ಯ ಜೆಡಿಎಸ್ ಟಿಕೆಟ್: ಎಚ್‌ಡಿಕೆ ಸ್ಪರ್ಧೆ ಇಲ್ಲ
ಜೆಡಿಎಸ್ ಸ್ಟಾರ್ ಪ್ರಚಾರಕರಲ್ಲಿ ಗೌಡರ ಕುಟುಂಬದ ಪಾರುಪತ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸ್ಟಾರ್ ಪ್ರಚಾರಕರ ಹೆಸರನ್ನು ಪ್ರಕಟಿಸಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಸೇರಿದಂತೆ 27 ಮಂದಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಅವರಿಗೆ ಸ್ಟಾರ್ ಪ್ರಚಾರಕರ ಸ್ಥಾನವನ್ನು ನೀಡಲಾಗಿದೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಂಸದ ಕುಪ್ಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಸೂರಜ್ ರೇವಣ್ಣ, ಟಿ.ಎ.ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ ಅವರಿಗೆ ಅವಕಾಶ ನೀಡಲಾಗಿದೆ.
ಮುಖಂಡರಾದ ಬಿ.ಎಂ.ಫಾರೂಖ್, ಜಫ್ರುಲ್ಲಾಖಾನ್, ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ, ಅಪ್ಪಾಜಿಗೌಡ, ರಮೇಶ್‌ಗೌಡ, ಎ.ಪಿ.ರಂಗನಾಥ್, ನಜ್ಮಾ ನಜೀರ್, ಸಯ್ಯದ್ ರೋಷನ್ ಅಬ್ಬಾಸ್, ಸಲಾಂ ಪಾಷಾ, ಬಾಬು ಬುಕರಿ, ಬಸವರಾಜ್ ಕೊಡಾಂಬಲ್, ಶಾ ಉಲ್ ಹಕ್ ಬುಖಾರಿ, ಅಫ್ಜಲ್ ಅವರು ಸ್ಟಾರ್ ಪ್ರಚಾರಕರಾಗಿದ್ದಾರೆ.
ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಸಿಬಿಐ
ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಏ.20ರ ನಂತರ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಕಡೂರು ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ ಬಳಿಕ ಮಂಗಳವಾರ ಮಾತನಾಡಿದರು. ಆರೋಗ್ಯ ಸರಿ ಇಲ್ಲವಾದರೂ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದೇನೆ. ಪಕ್ಷವು ಪ್ರಚಾರದ ಪ್ರವಾಸದ ಕುರಿತು ಪಕ್ಷವು ನಿಗದಿಪಡಿಸಲಿದ್ದು, ತಾವು ಹೆಚ್ಚು ಮಾತನಾಡುವುದಿಲ್ಲ. ದತ್ತ ಅವರ ಪರ ಬಂದಿರುವ ಈ ಕಾರ್ಯಕ್ರಮಕ್ಕೂ, ರಾಜ್ಯಪ್ರವಾಸಕ್ಕೂ ಸಂಬಂಧವಿಲ್ಲ. ಪಕ್ಷವು ಅಧಿಕೃತವಾಗಿ ಎಲ್ಲಿ ಹೋಗಬೇಕು ಎಂದು ಕಾರ್ಯಕ್ರಮ ನಿಗದಿ ಮಾಡಿದಂತೆ ಪ್ರವಾಸ ಮಾಡುತ್ತೇನೆ ಎಂದರು.