ರಾಜಕಾರಣಿಗಳು ವಿವಾದಗಳಿಗೆ ತುತ್ತಾಗೋದು ಕಾಮನ್. ಸಾಮಾಜಿಕ ಜೀವನದಲ್ಲಿರುವ ರಾಜಕಾರಣಿಗಳು ಸ್ವಲ್ಪ ಯಡವಿದ್ರು ಅದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತೆ. ಒಂದೊಂದು ಬಾರಿ ತಪ್ಪು ಇಲ್ಲದೆ ಹೋದರು ಸಾಮಾಜಿಕ ಜಾಲತಾಣಗಳ ಅಡ್ಡಪರಿಣಾಮ ಬಾರಿ ವಿವಾದವನ್ನ ಸೃಷ್ಟಿ ಮಾಡಿಬಿಡುತ್ವೆ.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.24): ರಾಜಕಾರಣಿಗಳು ವಿವಾದಗಳಿಗೆ ತುತ್ತಾಗೋದು ಕಾಮನ್. ಸಾಮಾಜಿಕ ಜೀವನದಲ್ಲಿರುವ ರಾಜಕಾರಣಿಗಳು ಸ್ವಲ್ಪ ಯಡವಿದ್ರು ಅದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತೆ. ಒಂದೊಂದು ಬಾರಿ ತಪ್ಪು ಇಲ್ಲದೆ ಹೋದರು ಸಾಮಾಜಿಕ ಜಾಲತಾಣಗಳ ಅಡ್ಡಪರಿಣಾಮ ಬಾರಿ ವಿವಾದವನ್ನ ಸೃಷ್ಟಿ ಮಾಡಿಬಿಡುತ್ವೆ. ಬಬಲೇಶ್ವರ ಶಾಸಕ ಎಂ ಬಿ ಪಾಟೀಲ್ ವಿಚಾರದಲ್ಲು ಆಗಿದ್ದು ಇದೆ. ಸಾರ್ವಜನಿಕ ಸಭೆಯಲ್ಲಿ ಎಲ್ಲರ ಎದುರು ಅಶ್ಲೀಲವಾಗಿ ಮಾತನಾಡಿದ ಯುವಕನಿಗೆ ಪಾಠ ಕಲಿಸಿದ ಎಂ ಬಿ ಪಾಟೀಲ್ ಮೇಲೆ ಹಲ್ಲೆ ಮಾಡಿದ್ರು ಎನ್ನುವ ಗುರುತರ ಆರೋಪ ಕೇಳಿ ಬಂದಿದೆ..
ಅಶ್ಲೀಲ ಮಾತನಾಡಿದ್ದಕ್ಕೆ ಯುವಕನ ಮೇಲೆ ಎಂ ಬಿ ಪಾಟೀಲ್ ಗರಂ: ಅಸಲಿಗೆ ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ದೇವಾಪೂರ ಗ್ರಾಮದಲ್ಲಿ. ಇದೆ ಗ್ರಾಮದಲ್ಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ಸಭೆ ಹಮ್ಮಿಕೊಂಡಿದ್ದರು. ಗ್ರಾಮಸ್ಥರ ಜೊತೆಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಯುವಕನೊಬ್ಬ ಸಭೆಯಲ್ಲಿ ಮಾತನಾಡಲು ಅವಕಾಶ ಕೇಳಿದ್ದಾನೆ. ಆದ್ರೆ ಅಲ್ಲಿ ಸೇರಿದವರು ನೀನು ಇನ್ನು ಸಣ್ಣವ ಸಭೆಯಲ್ಲಿ ಅದೇನ್ ಮಾತಾಡ್ತಿಯಾ ಅಂತಾ ತಕರಾರು ಮಾಡಿದ್ದಾರೆ. ಆದರೂ ಎಂ ಬಿ ಪಾಟೀಲ್ ಅವಕಾಶ ನೀಡಿದ್ರಂತೆ.
ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ: ರಾಜೀವ್ ಚಂದ್ರಶೇಖರ್
ಆಗ ದೇವಾಪೂರ ಗ್ರಾಮದ ಮಲ್ಲಿಕಾರ್ಜುನ ದೇಗುಲದ ಬಳಿ ರಸ್ತೆಯಲ್ಲಿ ಮೊಳಕಾಲಿನಷ್ಟು ನೀರು ನಿಲ್ಲುತ್ತವೆ ಎಂದು ಗಮನಕ್ಕೆ ತಂದಿದ್ದಾನೆ. ಈ ವೇಳೆ ಇದಕ್ಕೆ ಯಾರು ಜವಾಬ್ದಾರಿ ಎಂದು ಜೋರು ಮಾಡಿದ್ದಾನೆ. ಅಲ್ಲಿದ್ದ ಗ್ರಾಮದ ಹಿರಿಯರೊಬ್ಬರು ಇಂತಹ ಸಣ್ಣ ಸಮಸ್ಯೆಯನ್ನ ಪಂಚಾಯ್ತಿ ಅವರ ಹತ್ರ ಕೇಳಬೇಕು. ಅದನ್ನ ಬಿಟ್ಟು ಶಾಸಕರ ಬಳಿ ಕೇಳಿದ್ರೆ ಹೇಗೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಹುಡುಗ ಬುದ್ಧಿ ಹೇಳಲು ಬಂದ ಹಿರಿಯನಿಗೆ ಅಶ್ಲೀಲವಾಗಿ ನಿಂದಿಸಿದ್ದಾನೆ. ಇದರಿಂದ ಎದುರಿಗೆ ನಿಂತಿದ್ದ ಶಾಸಕ ಎಂ ಬಿ ಪಾಟೀಲ್‌ಗೆ ಸಿಟ್ಟು ಬಂದಿದೆ. ಹಿರಿಯರಿಗೆ ಹೀಗೆ ಅಶ್ಲೀಲವಾಗಿ ನಿಂದಿಸ್ತಾರಾ ಎಂದು ಕಪಾಳಕ್ಕೆ ಬಾರಿಸಿ ಬುದ್ಧಿ ಹೇಳಿದ್ದಾರೆ.
ಅದೆ ವಿಡಿಯೋ ವೈರಲ್, ಹಲ್ಲೆ ಮಾಡಿರುವ ಆರೋಪ: ಹೀಗೆ ಅಶ್ಲೀಲವಾಗಿ ಮಾತನಾಡಿದ ಯುವಕನಿಗೆ ಎಂ ಬಿ ಪಾಟೀಲ್ ಬುದ್ಧಿ ಹೇಳುತ್ತ ಕೆನ್ನೆಗೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಸ್ಯೆ ಹೇಳಲು ಬಂದ ಯುವಕನ ಮೇಲೆ ಎಂ ಬಿ ಪಾಟೀಲ್ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅಸಲಿಗೆ ಎಂ ಬಿ ಪಾಟೀಲ್ ಯುವಕನಿಗೆ ಬುದ್ಧಿ ಹೇಳುವ ಬರದಲ್ಲಿ ಕಪಾಳ ಮೋಕ್ಷ ಮಾಡಿದ್ದು ಇಲ್ಲಿ ತಪ್ಪು ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗ್ತಿದೆ.
ಹಾಸನಕ್ಕೆ ಇಂದು ಶಾ ಭೇಟಿ: ನಮಗೆ ದೇವೇಗೌಡ, ಕುಮಾರಣ್ಣನೇ ಸಾಕು, ಇನ್ಯಾರು ಬೇಡ ಎಂದ ಎಚ್.ಡಿ.ರೇವಣ್ಣ
ಸುವರ್ಣ ನ್ಯೂಸ್.ಕಾಮ್‌ಗೆ ಎಂ ಬಿ ಪಾಟೀಲ್ ಸ್ಪಷ್ಟನೆ: ಇನ್ನು ಇಡೀ ಘಟನೆಯ ಬಗ್ಗೆ ಮೊಬೈಲ್ ಮೂಲಕ ಪ್ರತಿಕ್ರಿಯೆ ನೀಡಿರುವ ಎಂ ಬಿ ಪಾಟೀಲ್ ಸ್ಥಳದಲ್ಲಿ ನಡೆಸ ಅಸಲಿ ವಿಚಾರವನ್ನ ಸುವರ್ಣ ನ್ಯೂಸ್.ಕಾಮ್ ಎದುರು ಬಿಚ್ಚಿಟ್ಟಿದ್ದಾರೆ. ಅದು ಹಲ್ಲೆ ಅಲ್ಲ, ನಾನು ಹಲ್ಲೆಯನ್ನು ಮಾಡೋಣಲ್ಲ. ಯುವಕ ಸಭೆಯಲ್ಲಿ ಹಿರಿಯರೊಬ್ಬರಿಗೆ ತೀರಾ ಅಶ್ಲೀಲ ಪದಗಳಲ್ಲಿ ನಿಂದಿಸಿದ್ದಕ್ಕೆ ನನಗೆ ಸಿಟ್ಟು ಬಂತು. ಹೀಗಾಗಿ ಕೆನ್ನೆಗೆ ಎರಡು ಬಾರಿಸಿದ್ದೇನೆ. ನಾನು ಕೂಡ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಣ್ಣ ಹುಡುಗ ತಪ್ಪು ಮಾಡಿದಾಗ ತಿದ್ದಿ ಹೇಳಿದ್ದೇನೆ ಎಂದಿದ್ದಾರೆ. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.