ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್

Published : Apr 03, 2023, 11:01 PM IST
ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್

ಸಾರಾಂಶ

ಕಾಂಗ್ರೆಸ್‌ನವರು ಜನರ ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್‌ ಕೊಡುವ ಮೂಲಕ ಮತ ಕೇಳುತ್ತಿದ್ದಾರೆ. ಅವರ ಗ್ಯಾರಂಟಿ ಕಾರ್ಡ್‌ಗೆ ಜನ ಮೋಸ ಹೋಗಬಾರದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ಯಲಬುರ್ಗಾ (ಏ.03): ಕಾಂಗ್ರೆಸ್‌ನವರು ಜನರ ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್‌ ಕೊಡುವ ಮೂಲಕ ಮತ ಕೇಳುತ್ತಿದ್ದಾರೆ. ಅವರ ಗ್ಯಾರಂಟಿ ಕಾರ್ಡ್‌ಗೆ ಜನ ಮೋಸ ಹೋಗಬಾರದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು. ತಾಲೂಕಿನ ಹಿರೇವಂಕಲಕುಂಟಾ ಜಿಪಂ ವ್ಯಾಪ್ತಿಯಲ್ಲಿ ಸೋಮವಾರ ಚಿಕ್ಕವಂಕಲಕುಂಟಾ, ತಾಳಕೇರಿ, ಗಾಣದಾಳ, ಸೇರಿದಂತೆ ನಾನಾ ಗ್ರಾಮಗಳಲ್ಲಿ ವಿಧಾನಸಭಾ ಚುನಾವಣಾ ನಿಮಿತ್ಯ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಅಧಿಕಾರದಲ್ಲಿದ್ದಾಗ ಏನನ್ನೂ ಕೊಡದವರು ಇದೀಗ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಸುಳ್ಳು ಆಶ್ವಾಸನೆ ಕೊಡಲು ಹೊರಟಿದ್ದಾರೆ ಎಂದರು. 

ನಾನು ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಪಟ್ಟಣದ ಕೆಂಪುಕೆರೆಗೆ ಹಾಗೂ ತಾಲೂಕಿನ ಬಳೋಟಗಿ, ಬಸಾಪುರ ಸೇರಿದಂತೆ ಅನೇಕ ಕೆರೆಗಳಿಗೆ ನೀರು ಹರಿಸಲಾಗಿದೆ. ಗ್ರಾಮೀಣ ಭಾಗ ಹಾಗೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸಾಕಷ್ಟುರಸ್ತೆಗಳನ್ನು ನಿರ್ಮಿಸಲಾಗಿದ್ದು, ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಶಕ್ತಿ ಮೀರಿ ಅಭಿವೃದ್ಧಿ ಪಡಿಸಿದ ಸಂತೃಪ್ತಿ ನನಗಿದೆ ಎಂದರು. ಕಾಂಗ್ರೆಸ್ಸಿನವರಿಗೆ ಅಭಿವೃದ್ಧಿ ಬೇಕಿಲ್ಲ. ಬರೀ ಅಭಿವೃದ್ಧಿ ಕೆಲಸ ಮಾಡುವವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ಅವರ ಸಂಸ್ಕೃತಿಯಾಗಿದೆ. ಇಂತಹವರಿಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಅತ್ಯಂತ ಕಡಿಮೆ ಅಳತೆಯ ನಿವೇಶನದ ಹಕ್ಕುಪತ್ರ ವಿತರಣೆಗೆ ಜನರ ಆಕ್ರೋಶ: ಅಹೋರಾತ್ರಿ ಪ್ರತಿಭಟನೆ

ಬಿಜೆಪಿಗೆ ಸೇರ್ಪಡೆ: ಸಿಡ್ಲಬಾವಿ, ಗಾಣದಾಳ, ತಾಳಕೇರಿ ಗ್ರಾಮಗಳಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಪಕ್ಷವನ್ನು ತೊರೆದು ಸಾಕಷ್ಟುಕಾರ್ಯಕರ್ತರು ಸಚಿವ ಹಾಲಪ್ಪ ಆಚಾರ ಸಮ್ಮುಖದಲ್ಲಿ ಬಿಜೆಪಿ ಸೇರ್ಪೆಡೆಗೊಂಡರು. ಇದಕ್ಕೂ ಪೂರ್ವದಲ್ಲಿ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಮಾರುತೇಶ್ವರನ ದೇವಸ್ಥಾನದಲ್ಲಿ ಸಚಿವ ಹಾಲಪ್ಪ ಆಚಾರ ಪೂಜೆ ಸಲ್ಲಿಸಿ ಸಂಘಟನಾತ್ಮಕ ಸಭೆಗೆ ಚಾಲನೆ ನೀಡಿದರು. ಬಿಜೆಪಿ ಮುಖಂಡರಾದ ಶಂಕ್ರಪ್ಪ ಸುರಪುರ ಹಾಗೂ ರತನ್‌ ದೇಸಾಯಿ ಮಾತನಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. 

ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು

ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ. ಈ ಸಂದರ್ಭದಲ್ಲಿ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ವಿಶ್ವನಾಥ ಎಂ.ಅಯ್ಯನಗೌಡ ಕೆಂಚಮ್ಮನವರ್‌, ಶಿವಣ್ಣ ವಾದಿ, ಶರಣಪ್ಪ ಇಳಗೇರ, ಅಯ್ಯಪ್ಪ ಗುಳೇದ, ಕಳಕಪ್ಪ ಕಂಬಳಿ, ಹಂಚ್ಯಾಳೆಪ್ಪ ತಳವಾರ, ಸುಧಾಕರ ದೇಸಾಯಿ, ಮಲ್ಲಣ್ಣ ಹರ್ಲಾಪುರ, ರಾಚಪ್ಪ ಹಳ್ಳಿ, ಶಂಕರ ಶಿಡ್ಲಬಾವಿ, ಮಂಜುನಾಥ ರೊಟ್ಟಿ, ವಿಜಯ ದಾಸರ, ದ್ಯಾಮಣ್ಣ ಗೌಡ್ರ, ನಾಗರಾಜ ಹಾಲಳ್ಳಿ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್