ಎರಡು ಕಡೆ ಸ್ಪರ್ಧೆ ಮಾಡ್ತಿನಿ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಆದರೆ ನಾಳೆ ನಮ್ಮಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಬಗ್ಗೆ ತಿರ್ಮಾನ ಆಗುತ್ತೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರು (ಏ.03): ಎರಡು ಕಡೆ ಸ್ಪರ್ಧೆ ಮಾಡ್ತಿನಿ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಆದರೆ ನಾಳೆ ನಮ್ಮಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಬಗ್ಗೆ ತಿರ್ಮಾನ ಆಗುತ್ತೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಟಿಕೆಟ್ ಕೋಡೋದರಲ್ಲಿ ಈ ಕಮಿಟಿಯೆ ಫೈನಲ್ ಆಗಲಿದೆ. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಪರ್ಮಿಷನ್ ಕೊಟ್ರೆ ಎರಡು ಕಡೆ ಸ್ಪರ್ಧೆ ಮಾಡ್ತಾರೆ. ಆ ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗೆ ಯಾರಿಗೂ ಬಂದಿಲ್ಲ ಎಂದರು.
ಎರಡು ಕಡೆ ಸ್ಪರ್ಧೆ ಮಾಡ್ಬೇಕು ಎಂಬ ಸನ್ನಿವೇಶ ನನಗಾಗಲಿ ಡಿಕೆ ಶಿವಕುಮಾರ್‌ಗೆ ಆಗಲಿ ಬಂದಿಲ್ಲ. ಹಾಗಾಗಿ ನಾವು ಎರಡು ಕಡೆ ಟಿಕೆಟ್ ಕೊಡಿ ಅಂತ ಕೇಳಿಕೊಂಡಿಲ್ಲ. ಅವರು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದೋರು ಎಂದರು. ರಾಜ್ಯ ನಾಯಕ ಅವರಿಗೆ ಯಾವುದೇ ರೀತಿ ತೊಂದರೆ ಆಗ್ಬಾರದು. ಜನರು ಕೂಡಾ ನೀವು ಬಂದು ಸ್ಪರ್ಧೆ ಮಾಡಿ ಅಂತ ಕೇಳ್ಕೊಂತ್ತಿದ್ದಾರೆ. ಸಿದ್ದರಾಮಯ್ಯ ಕೂಡಾ ಕೋಲಾರದ ಜನರ ಜೊತೆ ಕಮಿಟ್ಮೆಂಟ್ ಮಾಡಿಕೊಂಡು ಬಂದಿದ್ರು ಎಂದರು. ಹಾಗಾಗಿ ಎರಡು ಸ್ಪರ್ಧೆ ಮಾಡುವ ಸನ್ನಿವೇಶ ಎದುರಾಗಿದೆ. ಇಲ್ಲದಿದ್ದರೆ ಅವರಿಗೂ ಕೂಡಾ ಎರಡು ಕಡೆ ಸ್ಪರ್ಧೆ ಮಾಡೋ ಅಗತ್ಯತೆ ಇರಲಿಲ್ಲ.
undefined
Chikkaballapur: ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು
ಅವರು ವರುಣಾದಲ್ಲಿ ನಿಂತ್ರು ಗೆಲ್ತಾರೆ. ಎಲ್ಲೆ ನಿಂತ್ರು ಗೆಲ್ತಾರೆ ಎಂದರು. ಅವರಿಗೆ ಸೋಲು ಭೀತಿ ಕಂಡ್ರೆ. ನಾವೆಲ್ಲಾ ಹೆದರಿಕೊಳ್ಳಬೇಕಾಗುತ್ತೆ. ಸೋಲುವ ಭೀತಿಯಿಂದ ಅಲ್ಲಾ ಜನರ ಅಪೇಕ್ಷೆ ಮೇರೆಗೆ ನಿಲ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ಸುತ್ತುಮುತ್ತಲಿನ ಕ್ಷೇತ್ರಗಳಿಗೂ ಅನುಕೂಲ ಆಗುತ್ತೆ ಎಂದರು. ಸಿಎಂ ರೇಸ್‌ನಲ್ಲಿರುವರಿಗೆ ಸ್ವಪಕ್ಷಿಯರಿಂದಲೇ ಅಡ್ಡಗಾಲು ಹಾಕುತ್ತಿರುವ ಬಗ್ಗೆ ಆ ರೀತಿಯಾಗಿ ನನಗೆಲ್ಲು ಕಾಣ್ತಿಲ್ಲ. ಇದೆಲ್ಲಾ ಕ್ರಿಯೆಟೆಡ್, ಒಂದೊಂದು ಸಲ ನಾವೆಲ್ಲಾ ಸೇರಿ ಕ್ರಿಯೆಟ್ ಮಾಡ್ಕೊಂಡು ಬಿಡ್ತಿವಿ ಎಂದರು.
ಮೆಜಾರಿಟಿ ಬಂದ ಮೇಲೆ ಇದೆಲ್ಲಾ ತಿರ್ಮಾನ ಆಗುತ್ತೆ. ಅದಕ್ಕಿಂತ ಮುಂಚೆನೆ ನಾವೆಲ್ಲಾ ತಿರ್ಮಾನ ಮಾಡ್ಕೊಂಳೋದಿಕ್ಕೆ ಆಗಲ್ಲ. ಮೊದಲನೇ ಹಂತದಲ್ಲಿ ನಾವು ಪಕ್ಷವನ್ನ ಅಧಿಕಾರಕ್ಕೆ ತರುವ ಕೆಲಸ ಮಾಡ್ಬೇಕು. ಮಿಕ್ಕಿದೆಲ್ಲಾ ಹೈಕಮಂಡ್ ತಿರ್ಮಾನಕ್ಕೆ ಬಿಟ್ಟಿದ್ದು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.