
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.27): ಚುನಾವಣೆ ಹೊಸ್ತಿಲಲ್ಲೇ ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ನ ನಾಯಕರು ಮತ್ತು ಎರಡನೇ ಹಂತದ ಮುಖಂಡರುಗಳು ಬಹಿರಂಗ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರೂ ರಾಜ್ಯಮಟ್ಟದ ವರಿಷ್ಠರು ಚಕಾರವೆತ್ತದ ಕಾರಣ ಕಣದಲ್ಲಿರುವ ಪಕ್ಷದ ಅಧಿಕೃತ ಅಭ್ಯರ್ಥಿ ಕಂಗಾಲಾಗಿದ್ದಾರೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರು ಪಕ್ಷದ ಅಭ್ಯರ್ಥಿ ಕಣದಲ್ಲಿದ್ದಾಗ್ಯೂ ತಮ್ಮ ನಿವಾಸದಲ್ಲೇ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕುವಂತೆ ತಾಕೀತು ಮಾಡಿದ ವೀಡಿಯೋ ವೈರಲ್ ಆಗಿತ್ತು. ಇದೀಗ ಪಕ್ಷ ವಿರೋಧಿ ಚಟುವಟಿಕೆ ಖಂಡಿಸಿ ಕಾರ್ಯಕರ್ತರೋರ್ವರು ಎಸ್.ಎಲ್.ಬೋಜೇಗೌಡರಿಗೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡಿರುವ ಆಡಿಯೋವೊಂದು ವೈರಲ್ ಆಗಿದೆ.
ಹೆಚ್.ಡಿ ಕುಮಾರಸ್ವಾಮಿ ಪರಮಾಪ್ತ ಎಸ್ ಎಲ್ ಭೋಜೇಗೌಡ: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ನಡೆಯಿಂದಾಗಿ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರ ಜೊತೆ ಇರುವ ಫೋಟೋ ವೈರಲ್ ಆಗಿದೆ. ಸಖರಾಯಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡ ಮಹಡಿಮನೆ ಸತೀಶ್ ಜೊತೆ ಸಭೆ ಮಾಡಿರುವ ಫೋಟೋಗಳು ಹರಿದಾಡುತ್ತಿದೆ. ಎಸ್ ಎಲ್ ಭೋಜೇಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪರಮಾಪ್ತರಾಗಿದ್ದು, ಚಿಕ್ಕಮಗಳೂರಿನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಕೈ ಜೋಡಿಸಿದ್ರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಡಬಲ್ ಎಂಜಿನ್ ಸರ್ಕಾರದಿಂದ ಬಡವರಿಗೆ ಲಾಭ: ಕೇಂದ್ರ ಸಚಿವ ಭಗವಂತ ಖೂಬಾ
ವೈರಲ್ ಆಡಿಯೋದಲ್ಲಿ ಏನಿದೆ.....
ಜೆಡಿಎಸ್ ಕಾರ್ಯಕರ್ತ: ಗೌಡ್ರೇ ನಮಸ್ಕಾರ
ಎಮ್ ಎಲ್ ಸಿ ಭೋಜೇಗೌಡ: ನಮಸ್ಕಾರ
ಜೆಡಿಎಸ್ ಕಾರ್ಯಕರ್ತ: ಗೌಡ್ರೇ ಕೊಲಪ್ಪಾ ಮಾತಾಡ್ತಾ ಇದೀನಿ
ಎಮ್ ಎಲ್ ಸಿ ಭೋಜೇಗೌಡ: ಹೇಳಪ್ಪಾ
ಜೆಡಿಎಸ್ ಕಾರ್ಯಕರ್ತ: ಆವಾಗ್ಲೇ ಫೋನ್ ಮಾಡಿದ್ರಿ ಸರಿಯಾಗಿ ಮಾತಾಡಕ್ಕೆ ಆಗಿಲ್ಲಾ, ಸ್ವಲ್ಪ ಎಣ್ಣೆ ಜಾಸ್ತಿ ಆಗಿತ್ತು
ಎಮ್ ಎಲ್ ಸಿ ಭೋಜೇಗೌಡ: ಹೇಳಪ್ಪಾ
ಜೆಡಿಎಸ್ ಕಾರ್ಯಕರ್ತ: ಅಲ್ಲ ನೀವು ಈ ತರ ಕೆಲ್ಸಾ ಮಾಡ್ತೀರಾ ಅಂತ ಗೊತ್ತಿರ್ಲಿಲ್ಲ ಗೌಡ್ರೇ, ನೀವು ಇಷ್ಟೊತ್ತಿಗೆ ಒಬ್ಬ ರಾಜಕಾರಣಿಯಾಗಿ ನಿಮಿಗೆ ಶೋಭೆ ತರುತ್ತಾ
ಎಮ್ ಎಲ್ ಸಿ ಭೋಜೇಗೌಡ: ಏ ತಪ್ಪಾಯ್ತಪ್ಪಾ
ಜೆಡಿಎಸ್ ಕಾರ್ಯಕರ್ತ: ನೀವು ಚುನಾವಣೆಗೆ ನಿಂತಾಗ ಬೇಕಿದ್ರೆ, ನಾನು ನಿಲ್ತೀನಿ ಕಣೋ ಏನೋ ಹೆಲ್ಪ್ ಮಾಡಿ ಅಂತ ಕೇಳಿ ಪರ್ವಾಗಿಲ್ಲ, ಅದು ಬಿಟ್ಟು ಅವ್ನ್ ಯಾರಿಗೋ ಕೇಳದ್ ಸರಿ ಅನ್ಸತ್ತಾ
ಎಮ್ ಎಲ್ ಸಿ ಭೋಜೇಗೌಡ: ಎನೋ ಕೇಳ್ನಪ್ಪಾ
ಜೆಡಿಎಸ್ ಕಾರ್ಯಕರ್ತ: ಅವತ್ತ್ ನೋಡ್ರೆ ನನ್ನುನ್ನ ರೌಡಿ ಶೀಟರ್ ಮಾಡಿ 307 ಕೇಸ್ ಹಾಕ್ಸಿ ಸ್ಟೇಶನ್ ಊರು ಸುತ್ತೋ ಹಾಗೆ ಮಾಡಿದ್ರಿ, ಏನ್ ಘನಂದಾರಿ ಕೆಲಸ ಮಾಡಿದ್ದೀರಾ
ಎಮ್ ಎಲ್ ಸಿ ಭೋಜೇಗೌಡ: ಆಯ್ತ್ ಬಿಡಪ್ಪಾ
ಜೆಡಿಎಸ್ ಕಾರ್ಯಕರ್ತ: ಅಲ್ಲ ಏನಾದ್ರೂ ಘನಂದಾರಿ ಕೆಲಸ ಮಾಡಿದ್ರೆ ಹೇಳಿ,ಭೋಜೇಗೌಡ್ರು ನಿಮ್ಮ ಕುಟುಂಬ ಏನಾದ್ರೂ ಕೆಲಸ ಮಾಡಿದ್ದೀರಾ, ಇವತ್ತು ಯಾಕೆ ಹೆಂಗಸ್ರು ತರ ಇಷ್ಟೊತ್ತಿಗೆ ಫೋನ್ ಮಾಡಕ್ಕೆ ಹೋಗಿದ್ದ್ ಗೌಡ್ರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.