ಬಿಜೆಪಿಯು ರಾಮುಲುಗೆ ಮೂಗುದಾರ ಹಾಕಿ ಧ್ವನಿ ಎತ್ತದಂತೆ ಮಾಡಿದೆ: ಜನಾರ್ದನ ರೆಡ್ಡಿ

By Kannadaprabha News  |  First Published Apr 19, 2023, 1:37 PM IST

ಬಿಜೆಪಿ ಪಕ್ಷ ಈಗ ಬಿಜಿನೆಸ್‌ ಸೆಂಟರ್‌ ಆಗಿದೆ ಎಂದು ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 


ಗಂಗಾವತಿ (ಏ.19): ಬಿಜೆಪಿ ಪಕ್ಷ ಈಗ ಬಿಜಿನೆಸ್‌ ಸೆಂಟರ್‌ ಆಗಿದೆ ಎಂದು ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೊದಲಿನಂತೆ ಇಲ್ಲ. ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಬಿಜಿನೆಸ್‌ ಸೆಂಟರ್‌ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಬಳ್ಳಾರಿಯಲ್ಲಿ ಬೃಹತ್‌ ಯೋಜನೆಗಳ ಕನಸು ಕಂಡಿದ್ದೆ. ಸಚಿವ ಶ್ರೀರಾಮುಲು ಅವರು ಅನುಷ್ಠಾನಗೊಳಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಬಿಜೆಪಿ ರಾಮುಲು ಅವರಿಗೆ ಮೂಗುದಾರ ಹಾಕಿ ಧ್ವನಿ ಎತ್ತದಂತೆ ಮಾಡಿದೆ. 

ಬಿಜೆಪಿಯಲ್ಲಿ ತತ್ವ-ಸಿದ್ಧಾಂತ ಕೇವಲ ಮಾತಿನಲ್ಲಿ ಇದೆ. ಕೃತಿಯಲ್ಲಿ ಇಲ್ಲ ಎಂದ ಅವರು, ನನ್ನ ಉಸಿರು ಇರುವರೆಗೆ ಗಂಗಾವತಿ ಜನರ ಋುಣ ಮರೆಯುವುದಿಲ್ಲ. ನನಗೆ ಎದುರಾಳಿ ಯಾರು ಇಲ್ಲದಂತಾಗಿದೆ ಎಂದರು. ನನ್ನ ಪತ್ನಿ ಲಕ್ಷ್ಮೇ ಅರುಣಾ ಅವರು ಕಳೆದ 30 ವರ್ಷಗಳಿಂದ ಹೊರಗೆ ಬಂದಿಲ್ಲ. ಜಿಲ್ಲೆಯ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಹಾಳು ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕೆ ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡಿದ್ದಾರೆ ಎಂದರು. ಕನಕಗಿರಿ ತಾಲೂಕಿನ ನವಲಿ ಗ್ರಾಮದ ಬಳಿ ಸಮಾನಾಂತರ ಜಲಾಶಯದ ಕನಸು ಕಂಡವನು ನಾನು. 

Tap to resize

Latest Videos

undefined

ಪೊಲೀಸರ ಭರ್ಜರಿ ಕಾರ್ಯಾಚರಣೆ: 23 ಕೋಟಿ ಮೌಲ್ಯದ 40 ಕೆಜಿ ಚಿನ್ನ ವಶಕ್ಕೆ

ಮುಂಬರುವ ದಿನಗಳಲ್ಲಿ ಜಲಾಶಯ ಅನುಷ್ಠಾನಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು. ಮಾಜಿ ಸಿಎಂ ಜಗದೀಶ ಶೆಟ್ಟರ್‌ ತಮಗೆ ಟಿಕೆಟ್‌ ತಪ್ಪಲು ಬಿ.ಎಲ್‌.ಸಂತೋಷ ಕಾರಣ ಎಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರ ಗತಿ ಏನು? ಎಂದು ಜನಾರ್ದನ ರೆಡ್ಡಿ ಪ್ರಶ್ನಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಗಂಗಾವತಿ ಅಭಿವೃದ್ಧಿಯಾಗದಿದ್ದರೆ ರಾಜಕೀಯ ನಿವೃತ್ತಿ: ನನಗೆ ಈ ಭಾರಿ ಒಂದು ಅವಕಾಶ ನೀಡಿ, ಶಾಸಕರಾದ ಮೇಲೆ ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಆಗದಿದ್ದರೆ ರಾಜಕೀಯ ನಿವೃತಿ ಘೋಷಣೆ ಮಾಡುತ್ತೇನೆ ಎಂದು ಕೆಆರ್‌ಪಿಪಿ ಅಭ್ಯರ್ಥಿ ಜನಾರ್ದನ ರೆಡ್ಡಿ ಹೇಳಿದರು. ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಗಾಂಧಿ ವೃತ್ತದಲ್ಲಿ ಮಾತನಾಡಿದ ಅವರು, ನಾನು ಅಭಿವೃದ್ಧಿ ಮಾಡುವ ಉದ್ದೇಶದಿಂದ ಗಂಗಾವತಿ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ನೀವು ನಿಮ್ಮ ಮಗನಾಗಿ ನನಗೆ ಆಶೀರ್ವಾದಿಸಿ ಬರುವ ದಿನಗಳಲ್ಲಿ ರಾಜ್ಯಕ್ಕೆ ಗಂಗಾವತಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುವದಾಗಿ ಹೇಳಿದರು.

ಕಾಂಗ್ರೆಸ್‌ನ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಿ: ಜೆ.ಪಿ.ನಡ್ಡಾ

ಪತ್ನಿ ಲಕ್ಷ್ಮೀ ಅರುಣಾ ಮಾತನಾಡಿ, ನನ್ನ ಪತಿ 12 ವರ್ಷಗಳ ಕಾಲ ಬಹಳ ಕಷ್ಟಅನುಭವಿಸಿದ್ದಾರೆ, ಬಳ್ಳಾರಿ ಕ್ಷೇತ್ರದಲ್ಲಿ ತಾವು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನನ್ನ ಪತಿ ಜತೆಗೆ ಇರಲಾರದಕ್ಕೆ ಬಹಳ ವ್ಯಥೆ ಪಟ್ಟಿದ್ದೇನೆ. ಆದರೂ ಗಂಗಾವತಿ ಜನರು ಬಹಳ ಸಂತೋಷದಿಂದ ಅವರಿಗೆ ಬೆಂಬಲಿಸುತ್ತಿರುವದನ್ನು ಗಮನಿಸಿದರೆ ನಮಗೆ ಮತ್ತೇ ರಾಜಕೀಯ ಪುನರ್‌ ಜನ್ಮ ಈ ಕ್ಷೇತ್ರದಿಂಲೇ ಪ್ರಾರಂಭವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪುತ್ರಿ ಬ್ರಹ್ಮೀಣಿ ಮಾತನಾಡಿ,ನನ್ನ ತಂದೆ ರೆಡ್ಡಿ ಅವರಿಗೆ ಬೆಂಬಲಿಸುತ್ತಿರುವದನ್ನು ಗಮನಿಸಿದರೆ ಈ ಭಾಗದ ಜನರು ಎಷ್ಟುಒಳ್ಳೆಯರಿದ್ದಾರೆ ಎನಿಸುತ್ತದೆ.ನಿಮ್ಮ ವಿಶ್ವಾಸಕ್ಕೆ ನನ್ನ ತಂದೆ ಅಭಿವೃದ್ಧಿ ಮಾಡಿ ತೋರಿಸುತ್ತಾರೆ ಎಂದರು.

click me!