Karnataka election 2023: ಕಾಫಿನಾಡಿನಲ್ಲೂ ಹ್ಯಾಟ್ರಿಕ್‌ ಹಿರೋಗಳು!

By Kannadaprabha News  |  First Published Apr 22, 2023, 5:27 AM IST

ಕಾಫಿಯ ನಾಡು ಚಿಕ್ಕಮಗಳೂರು, ವಿಧಾನಸಭಾ ಚುನಾವಣೆಯಲ್ಲಿ ಆಗಾಗ ಹೊಸ ದಾಖಲೆಯನ್ನು ಬರೆದಿದೆ. ಜಿಲ್ಲೆಯ ರಾಜಕಾರಣದಲ್ಲಿ 2004ರ ನಂತರದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಖಾಡದಲ್ಲಿ ಹೊಸ ಮುಖಗಳಿಗಿಂತ ಹಳಬರೆ ಮತ್ತೆ ಮತ್ತೆ ಸ್ಪರ್ಧೆ ಮಾಡುತ್ತಿದ್ದಾರೆ.


ಆರ್‌. ತಾರಾನಾಥ್‌

ಚಿಕ್ಕಮಗಳೂರು (ಏ.22) : ಕಾಫಿಯ ನಾಡು ಚಿಕ್ಕಮಗಳೂರು, ವಿಧಾನಸಭಾ ಚುನಾವಣೆಯಲ್ಲಿ ಆಗಾಗ ಹೊಸ ದಾಖಲೆಯನ್ನು ಬರೆದಿದೆ.

Tap to resize

Latest Videos

undefined

ಕಡಿದಾಳ್‌ ಮಂಜಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದರು. ಕಡೂರು ಕ್ಷೇತ್ರದಲ್ಲಿ ನಿರಂತರವಾಗಿ ನಾಲ್ಕು ಬಾರಿ ಕೆ.ಎಂ. ಕೃಷ್ಣಮೂರ್ತಿ ಜಯಗಳಿ ಸಿದ್ದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿ ಸಹ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಇನ್ನು ಮಧ್ಯದಲ್ಲಿ ಯಾವುದೇ ಬ್ರೇಕ್‌ ಇಲ್ಲದೆ, ಸತತವಾಗಿ ಮೂರು ಚುನಾವಣೆಗಳಲ್ಲಿ ಕಡಿದಾಳ್‌ ಮಂಜಪ್ಪ, ಡಿ.ಎನ್‌. ಜೀವರಾಜ್‌, ಸಿ.ಆರ್‌. ಸಗೀರ್‌ ಅಹ್ಮದ್‌ ಜಯಗಳಿಸುವ ಮೂಲಕ ಹ್ಯಾಟ್ರಿಕ್‌ ಹಿರೋ ಎಂದೆನಿಸಿಕೊಂಡರು.

KARNATAKA ELECTION 2023: ಶೃಂಗೇರಿಯಲ್ಲಿಂದು ಡಿಕೆಶಿ ಚುನಾವಣಾ ಪ್ರಚಾರ

ಶೃಂಗೇರಿ ಕ್ಷೇತ್ರ

1952ರ ಮೊದಲ ವಿಧಾನಸಭಾ ಚುನಾವಣೆ(Karnataka assembly electin)ಯಲ್ಲಿ ಶೃಂಗೇರಿ, ತೀರ್ಥಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಗೊಳಿಗೆ ಗ್ರಾಮದವರಾದ ಕಡಿದಾಳ್‌ ಮಂಜಪ್ಪ ಅವರು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ನಂತರದಲ್ಲಿ ಅವರು 1957ರಲ್ಲಿ ಇದೇ ಕ್ಷೇತ್ರದಲ್ಲಿ ಅವಿರೋಧವಾಗಿ ಚುನಾಯಿತರಾದರು. 1962ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿ ಜಯಗಳಿಸಿದರು. ಈ ಅವಧಿಯಲ್ಲಿ ಅವರಿಗೆ ಮುಖ್ಯಮಂತ್ರಿಯಾಗುವ ಸೌಭಾಗ್ಯ ಸಿಕ್ಕಿತ್ತು.

ಗೋವಿಂದೇಗೌಡ ಅವರು ಈ ಕ್ಷೇತ್ರದಲ್ಲಿ ಮೂರು ಬಾರಿ ಗೆಲವು ಸಾಧಿಸಿದರೂ ಕೂಡ ಮಧ್ಯದ ಒಂದು ಅವಧಿಯಲ್ಲಿ ಯು.ಕೆ. ಶಾಮಣ್ಣ ಜಯಗಳಿಸಿದ್ದರು. 2004 ರಿಂದ 2013ರ ನಿರಂತರ ಮೂರು ಚುನಾವಣೆಯಲ್ಲಿ ಬಿಜೆಪಿಯ ಡಿ.ಎನ್‌.ಜೀವರಾಜ್‌ ಜಯಗಳಿಸಿದರು. 2018ರ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದು, ಇದೀಗ ಮತ್ತೆ ಅವರು ಸ್ಪರ್ಧೆ ಮಾಡಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ(Chikkamagaluru assembly constituency)ದಲ್ಲಿ 1989 ರಿಂದ 1999ರವರೆಗೆ ನಿರಂತರವಾಗಿ ಸಿ.ಆರ್‌. ಸಗೀರ್‌ ಅಹ್ಮದ್‌ ಶಾಸಕರಾಗಿದ್ದರು, 3 ಬಾರಿಯ ಹ್ಯಾಟ್ರಿಕ್‌ ಗೆಲುವನ್ನು ಶಾಸಕ ಸಿ.ಟಿ. ರವಿ 4 ಬಾರಿ ಗೆಲ್ಲುವ ಮೂಲಕ ಬ್ರೇಕ್‌ ಮಾಡಿದರು. ಈ ಬಾರಿಯೂ ಕೂಡ ಅವರು ಸ್ಪರ್ಧೆ ಮಾಡಿದ್ದಾರೆ.

ಕಡೂರು ಕ್ಷೇತ್ರದಲ್ಲಿ ಕೆ.ಎಂ. ಕೃಷ್ಣಮೂರ್ತಿ ಅವರು 1994 ರಿಂದ 2008ರವರೆಗೆ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದರು. ಬೇರೆ ಯಾರಿಗೂ ಕೂಡ ಈ ಸಾಧನೆ ಬ್ರೇಕ್‌ ಮಾಡಲು ಆಗಲೇ ಇಲ್ಲ. ಮೂಡಿಗೆರೆ ಕ್ಷೇತ್ರದಲ್ಲಿ 2004, 2008ರಲ್ಲಿ ಎಂ.ಪಿ. ಕುಮಾರಸ್ವಾಮಿ ಗೆಲವು ಸಾಧಿಸಿದರು. ಆದರೆ, 2013ರಲ್ಲಿ ಅವರು ಪರಾಭವಗೊಂಡರು. 2018ರಲ್ಲಿ ಮತ್ತೆ ಶಾಸಕ ರಾದರು. ಹಾಗಾಗಿ ನಿರಂತರ ಹ್ಯಾಟ್ರಿಕ್‌ ಗೆಲುವಿಗೆ ಮಧ್ಯ ಬ್ರೇಕ್‌ ಸಿಕ್ಕಿತು.

ಚಿಕ್ಕಮಗಳೂರು: 103 ನಾಮಿನೇಷನ್‌, 2 ತಿರಸ್ಕಾರ 100 ನಾಮಪತ್ರ ಸಿಂಧು

ಜಿಲ್ಲೆಯ ರಾಜಕಾರಣದಲ್ಲಿ 2004ರ ನಂತರದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಖಾಡದಲ್ಲಿ ಹೊಸ ಮುಖಗಳಿಗಿಂತ ಹಳಬರೆ ಮತ್ತೆ ಮತ್ತೆ ಸ್ಪರ್ಧೆ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!