'ಮೈತ್ರಿಗೆ ಸಿದ್ಧ', ಸರ್ಕಾರ ಮಾಡೋದಾದ್ರೆ ಕಂಡಿಷನ್ಸ್ ಅಪ್ಲೈ: ಸಿಂಗಾಪುರದಲ್ಲಿ ಎಚ್‌ಡಿಕೆ ರಾಜಕೀಯ ಲೆಕ್ಕಾಚಾರ

By Govindaraj S  |  First Published May 12, 2023, 12:00 PM IST

ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮುಗಿದಿದ್ದು ನಾಳೆ (ಮೇ.13) ರಾಜಕೀಯ ನಾಯಕರ ಭವಿಷ್ಯ ಹೊರಬೀಳಲಿದೆ. ಮತದಾನ ಮುಗಿಯುತ್ತಿದ್ದಂತೆ ನಾಯಕರು ಈಗಾಗಲೇ ರಿಲಾಕ್ಸ್ ಮೂಡಿಗೆ ಜಾರಿದ್ದಾರೆ.


ಬೆಂಗಳೂರು (ಮೇ.12): ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮುಗಿದಿದ್ದು ನಾಳೆ (ಮೇ.13) ರಾಜಕೀಯ ನಾಯಕರ ಭವಿಷ್ಯ ಹೊರಬೀಳಲಿದೆ. ಮತದಾನ ಮುಗಿಯುತ್ತಿದ್ದಂತೆ ನಾಯಕರು ಈಗಾಗಲೇ ರಿಲಾಕ್ಸ್ ಮೂಡಿಗೆ ಜಾರಿದ್ದು ಮತ್ತೊಂದೆಡೆ ಬಹುಮತ ಬರದಿದ್ದರೆ ಕಿಂಗ್ ಮೇಕರ್ ಜೆಡಿಎಸ್ ಪಕ್ಷದ ಮೊರೆ ಹೋಗಬೇಕೆಂದು ಬಿಜೆಪಿ, ಕಾಂಗ್ರೆಸ್ ಒಳಗೊಳಗೆ ಕಸರತ್ತು ಶುರು ಮಾಡಿದೆ. ಈ ನಡುವೆ ಎಚ್‌.ಡಿ.ಕುಮಾರಸ್ವಾಮಿ ನಮ್ಮ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡೋದಾದ್ರೆ ಕಂಡಿಷನ್ಸ್ ಅಪ್ಲೈ ಎಂದು ಸಿಂಗಾಪುರದಲ್ಲಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಹೌದು! ಕುಮಾರಸ್ವಾಮಿ ಸಿಂಗಾಪುರದಲ್ಲಿ ರಾಜಕೀಯ ಲೆಕ್ಕಾಚಾರ ಹಾಕಿದ್ದು, ಎಕ್ಸಿಟ್ ಪೋಲ್ ಸಮೀಕ್ಷೆಗಳು ಪ್ರಕಟವಾದ ಬೆನ್ನಲ್ಲೇ ದಳಪತಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಸಲ ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಸರ್ಕಾರ ರಚನೆಯಲ್ಲಿ ಪಾತ್ರ ವಹಿಸಲಿದೆ. ಆಗ ಕಾಂಗ್ರೆಸ್ ಅಥವಾ ಬಿಜೆಪಿ ಅನಿವಾರ್ಯವಾಗಿ ಮತ್ತೆ ಜೆಡಿಎಸ್ ಜೊತೆ ಹೋಗಬೇಕು.

Tap to resize

Latest Videos

ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ: ಜಿ.ಟಿ.ದೇವೇಗೌಡ

ಆಗ ಏನು ಮಾಡಬೇಕು?: ಈಗಾಗಲೇ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳ ಜೊತೆ ಮೈತ್ರಿ ಸರ್ಕಾರ ಮಾಡಿ  ಜೆಡಿಎಸ್‌ಗೆ ಅನುಭವ ಇದೆ. ಆದರೆ ಎರಡೂ ಸಲ ಪೂರ್ಣ ಅವಧಿ ಸರ್ಕಾರ ನಡೆಸಲು ಆಗಿಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ಕಡಿಮೆ ಅವಧಿಗೆ ಮೈತ್ರಿ ಸರ್ಕಾರಗಳು ಕೊನೆಯಾಗಿವೆ. ಈ ಸಲ ಹಾಗೆ ಆಗದ ರೀತಿ ಎಚ್ಚರಿಕೆ ವಹಿಸಲು ಸಿದ್ದತೆ ಮಾಡಿಕೊಂಡಿದ್ದು, ಮೊದಲೇ ಪ್ಲಾನ್ ರೆಡಿ ಆಗಬೇಕು. ಮೈತ್ರಿಗೆ ಬರುವ ಪಕ್ಷ ಯಾವುದೇ ಇದ್ದರೂ ಷರತ್ತುಗಳಿಗೆ ಒಪ್ಪಬೇಕು. ಪ್ರಣಾಳಿಕೆಯಲ್ಲಿ ಇರುವ ಅಂಶಗಳನ್ನು ಈಡೇರಿಸಲು ಒಪ್ಪಿಗೆ ಕೊಡಬೇಕು. 

ಹೈಕಮಾಂಡ್‌ ನನಗೆ ಸಿಎಂ ಸ್ಥಾನ ನೀಡಿದರೆ ತಿರಸ್ಕರಿಸಲಾರೆ: ಡಾ.ಜಿ.ಪರಮೇಶ್ವರ್‌

ಪ್ರಮುಖವಾಗಿ ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಸಮ್ಮತಿ ಕೊಡಬೇಕು. ಜನತೆಗೆ ಕೊಟ್ಟ ಮಾತಿನಂತೆ ಸರ್ಕಾರ ನಡೆಸಬೇಕು. ಮುಖ್ಯವಾಗಿ ಪಕ್ಷದ ಹಿತಾಸಕ್ತಿಗೆ ಧಕ್ಕೆ ಆಗದಂತೆ ಸರ್ಕಾರ ನಡೆಸಬೇಕು. ಕಳೆದ ಎರಡೂ ಸಲ ಮೈತ್ರಿ ಮುರಿದು ಬಿದ್ದ ಬಳಿಕ ಎಚ್ಡಿಕೆ ತಮ್ಮ ನೋವು ತೋಡಿಕೊಂಡಿದ್ದರು. ಈ ಸಲ ಅದಕ್ಕೆ ಆಸ್ಪದ ಕೊಡದಂತೆ ಮೊದಲೇ ಸಿದ್ದತ ಮಾಡಿಕೊಂಡಿದ್ದು, ಹೀಗೆ ಹಲವು ಷರತ್ತುಗಳನ್ನು ಎಚ್ಡಿಕೆಎಚ್ಡಿಕೆ ಸಿದ್ದ ಮಾಡಿಕೊಂಡಿದ್ದಾರೆ. ಹೀಗಾಗಿ ಅತಂತ್ರ ಫಲಿತಾಂಶ ಬರುವ ಮುನ್ಸೂಚನೆಯಲ್ಲಿ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.

click me!