ಮಂಡ್ಯದಲ್ಲಿ ಬಿಜೆಪಿ ಸುಮಾಸ್ತ್ರಕ್ಕೆ ಕಾಂಗ್ರೆಸ್ ನಿಂದ ರಮ್ಯಾಸ್ತ್ರ!

By Gowthami K  |  First Published Apr 23, 2023, 4:20 PM IST

ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಪರ ಪ್ರಚಾರ ನಡೆಸುವುದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ನಟಿ ರಮ್ಯಾ ಇಳಿಯಲಿದ್ದಾರೆ


ಮಂಡ್ಯ (ಏ.23): ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಪರ ಪ್ರಚಾರ ನಡೆಸುವುದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಪರ ಮಾಜಿ ಸಂಸದೆ ರಮ್ಯಾ ಕ್ಯಾಂಪೇನ್ ನಡೆಲಿದ್ದಾರೆ. ಈ ಮೂಲಕ ಬಿಜೆಪಿ ಪರ ನಿಂತ ಸುಮಲತಾಗೆ ಕಾಂಗ್ರೆಸ್ ನಿಂದ‌ ಪ್ರತ್ಯಾಸ್ತ್ರ ಪ್ರಯೋಗ ಮಾಡಲಾಗುತ್ತಿದೆ.  ಮುಂದಿನ ವಾರ ಮಂಡ್ಯ ಅಖಾಡಕ್ಕೆ ಸ್ಯಾಂಡಲ್ ವುಡ್ ಕ್ವೀನ್ ಎಂಟ್ರಿ ಕೊಡಲಿದ್ದಾರೆ. ರೋಡ್ ಶೋ, ಪ್ರಚಾರ‌ ಸಭೆ, ಕಾರ್ನರ್ ಮೀಟಿಂಗ್ ನಲ್ಲಿ ರಮ್ಯಾ ಭಾಗಿಯಾಗಿದ್ದಾರೆ. ರಮ್ಯಾ ಮೂಲಕ ಜೆಡಿಎಸ್ ಹಾಗೂ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ಕೊಡಿಸಲು ಕಾಂಗ್ರೆಸ್ ನಿಂದ ಚಿಂತನೆ ನಡೆದಿದೆ. ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ನಟಿ ರಮ್ಯಾ ಸಂಸದರಾಗಿದ್ದರು.

ಬಳಿಕ ಅಂತರ ಕಾಯ್ದುಕೊಂಡಿದ್ದ ರಮ್ಯಾ ಹಲವು ವರ್ಷಗಳ ನಂತರ ಮಂಡ್ಯ ರಾಜಕಾರಣಕ್ಕೆ ರೀ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ರಮ್ಯಾ ಪ್ರಚಾರಕ್ಕೆ ಬರುವ ಬಗ್ಗೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಮಾಹಿತಿ‌ ನೀಡಿದ್ದಾರೆ. ಮಂಡ್ಯ ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ದೇವೆ. ಮೇ 1, 2 ರಂದು ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ.  ರೋಡ್ ಶೋ  ಅಥವಾ ಸಮಾವೇಶ ನಡೆಸುವುದೇ ಎಂಬ ಬಗ್ಗೆ  ಪ್ಲಾನ್ ಮಾಡುತ್ತೇವೆ.

Tap to resize

Latest Videos

ಅಭಿವೃದ್ಧಿಗೆ ಒತ್ತು ಕೊಟ್ಟು ರಾಜಕೀಯಕ್ಕೆ ಬಂದಿದ್ದೇನೆ: ಕಾಂಗ್ರೆಸ್ ವಿರುದ್ಧ ರೆಡ್ಡಿ ವಾಗ್ದಾಳಿ

ರೋಡ್ ಶೋ ಜೊತೆ ಕಾರ್ನರ್ ಮೀಟಿಂಗ್ ಮಾಡಬೇಕು ಎಂಬ ಪ್ಲಾನ್ ಇದೆ. ರಮ್ಯಾ ಜೊತೆ 4 ರಿಂದ 5 ಮಂದಿ ಸಿನಿಮಾ ನಟ-ನಟಿಯರು ಬರ್ತಾರೆ. ಹಳ್ಳಿ ಕಡೆ ಹೋದಾಗ ರಮ್ಯಾಾರನ್ನ ಕರೆ ತರುವಂತೆ ಕೇಳ್ತಿದ್ದಾರೆ. ರಮ್ಯಾಾ ಬರುವುದರಿಂದ ಮಹಿಳಾ ಮತದಾರರನ್ನ ಸೆಳೆಯಬಹುದು. ಅಲ್ಲದೇ ಆರು ತಿಂಗಳ ಕಾಲ ಎಂಪಿಯಾಗಿ ಕೆಲಸ ಮಾಡಿದ್ದಾರೆ. ರಮ್ಯಾ ಬರುವುದರಿಂದ ಖಂಡಿತವಾಗಿಯೂ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಲ್ಪ್ ಆಗುತ್ತೆ.
ಮಂಡ್ಯದಲ್ಲಿ ಕೈ ಅಭ್ಯರ್ಥಿ ಗಣಿಗ ರವಿಕುಮಾರ್ ಹೇಳಿಕೆ ನೀಡಿದ್ದಾರೆ.

ರಾಹುಲ್ ಬಿಜೆಪಿಯ ಸ್ಟಾರ್ ಪ್ರಚಾರಕ; ರೋಡ್ ಶೋಗೆ ಯತ್ನಾಳ್ ಲೇವಡಿ 

ಸುಮಲತಾರನ್ನ ಗೆಲಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು: ರವಿ ಕುಮಾರ್ 
ಬಿಜೆಪಿಗೆ ಸೇರಿದ್ದೀನಿ ಅಂತೇಳಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಮಾಡಬೇಡಿ. ಸುಮಲತಾರನ್ನ ಗೆಲಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು ಎಂದು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಋಣ ತೀರಿಸಬೇಕಂದ್ರೆ ಅವಕಾಶವಿದೆ. ಅದನ್ನ ಬಿಟ್ಟು ನಾವೇ ಗೆದ್ವಿ ಅನ್ನೋ ಮೊಂಡತನ ತೋರಬಾರದು. ಕಾಂಗ್ರೆಸ್ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ.
ಇವತ್ತು ನೀವು ಕಾಂಗ್ರೆಸ್ ಗೆ ಸಪೋರ್ಟ್ ಮಾಡಬೇಕಿತ್ತು. ನೀವು ಎಲೆಕ್ಷನ್ ಗೆ ನಿಂತಾಗ ಎಷ್ಟೋ ಜನ ಕಾಂಗ್ರೆಸ್ ಪದಾಧಿಕಾರಗಳು ಸಸ್ಪೆಂಡ್ ಆದರು. ಆದ್ರೆ ನೀವು ಯಾವತ್ತು ಅವರ ಕೈ ಹಿಡಿಯಲಿಲ್ಲ. ಬಿಜೆಪಿ, ರೈತ ಸಂಘ ನಿಮ್ಮ ಗೆಲುವಿಗೆ 10% ಸಹಾಯ ಮಾಡಿದೆ. ಶೇ.90 ರಷ್ಟು ಸಹಾಯ‌ ಮಾಡಿ ಎಂಪಿ ಮಾಡಿರೋದೆ ಕಾಂಗ್ರೆಸ್. ಈಗ ಕಾಂಗ್ರೆಸ್ ಕಾರ್ಯಕರ್ತರು ಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯ ಮಾಡಿ ಎಂದು ಮಂಡ್ಯ ಕೈ ಅಭ್ಯರ್ಥಿ ರವಿಕುಮಾರ್ ಮನವಿ ಮಾಡಿದರು.

ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!